ಬೆಂಗಳೂರು: ನಗರದ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಅವರು ಮಾದಕವಸ್ತು ನಿಗ್ರಹಕ್ಕೆ ಹೊಸ ಹಜ್ಜೆಯಿಟ್ಟಿದ್ದಾರೆ. ತರಬೇತಿ ನೀಡಿದ ಡಾಗ್ ಸ್ಕ್ವಾಡ್ ಬಳಸಿ ಮಾದಕ ವಸ್ತು ಪರಭಾರೆ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಯತ್ನ ಶುರುವಾಗಿದೆ. ಜಯನಗರ ಇನ್‌ಸ್ಪೆಕ್ಟರ್ ಮಂಜುನಾಥ್ ಡಾಗ್ ಸ್ಕ್ವಾಡ್ ಜೊತೆಗೆ ಮೆಟ್ರೋ ಸ್ಟೇಷನ್,ಬಸ್ ಸ್ಟಾಂಡ್ ಮುಂತಾದ ಕಡೆಗಳಲ್ಲಿ ತಪಾಸಣೆ ನಡೆಸಿದ್ದಾರೆ.
ವಾರಕ್ಕೊಮ್ಮೆ ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುವ ಯೋಜನೆ ರೂಪಿಸಿಕೊಂಡಿದ್ದು,ಇದರಿಂದಾಗಿ ಡ್ರಗ್ ಪೆಡ್ಲರ್ ಅಷ್ಟೇ ಅಲ್ಲದೇ ವ್ಯಸನಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪರಿಶೀಲನೆ ವೇಳೆ ಮೂವರು ಮಾದಕ ವ್ಯಸನಿಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: 2ನೇ ಮದುವೆಯಾದ್ರೂ ತೀರದ ವೈದ್ಯನ ವರದಕ್ಷಿಣೆ ದಾಹ; 2ನೇ ಸಂಸಾರದಲ್ಲೂ ನೆಮ್ಮದಿ ಕಾಣದೆ ವೈದ್ಯೆಯ ಆತ್ಮಹತ್ಯೆ