ETV Bharat / city

ಬಹಿರಂಗ ಚರ್ಚೆಗೆ ಬರಲು ಸಚಿವ ಈಶ್ವರಪ್ಪಗೆ ಡಿಕೆಶಿ ಸವಾಲು - ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

D.K.Shivakumar
ಡಿ.ಕೆ.ಶಿವಕುಮಾರ್​​
author img

By

Published : Apr 27, 2020, 3:27 PM IST

ಬೆಂಗಳೂರು: ನರೇಗಾ ಯೋಜನೆ ಹಾಗೂ ಅದರ ವಿಚಾರದಲ್ಲಿ ಏನೆಲ್ಲಾ ಮಾಡಿದ್ದೇನೆ ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಈಶ್ವರಪ್ಪ ಅವರು ಯಾವ ಸಮಯ ನಿಗದಿ ಮಾಡುತ್ತಾರೋ ಆಗ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ‘ಈಶ್ವರಪ್ಪ ಅವರೇ ನರೇಗಾ ವಿಚಾರದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆದೇಶಿಸಿದ್ದಾರೆ ಎಂದರು.

ನರೇಗಾ ಯೋಜನೆಗೆ ಎಷ್ಟು ಶಕ್ತಿ ಇದೆ ಎಂಬುದು ಈಶ್ವರಪ್ಪಗೆ ಗೊತ್ತಿಲ್ಲ. ಈ ಯೋಜನೆಯನ್ನು ದೇಶದಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕನಕಪುರದಲ್ಲಿ ಬಳಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ನನಗೆ ಪ್ರಶಸ್ತಿ ನೀಡಿದೆ. ಈ ಬಗ್ಗೆ ಈಶ್ವರಪ್ಪಗೆ ಗೊತ್ತಿಲ್ಲ. ಪ್ರತಿಪಕ್ಷದ ಅಧ್ಯಕ್ಷನಾಗಿ ನಾನು ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದು ಛೇಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೆ ತಂದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಒಂದು ಕುಟುಂಬವನ್ನು ಹೇಗೆ ಬಳಸಿಕೊಳ್ಳಬಹುದು. ಜನರಿಗೆ ಈ ಯೋಜನೆ ಹೇಗೆ ಆಸರೆಯಾಗುತ್ತದೆ ಎಂಬುದರ ಮಾಹಿತಿಯನ್ನು ಹಿಂದೆ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆ. ಈಶ್ವರಪ್ಪ ಅವರು ಈ ವಿಚಾರವಾಗಿ ಯಾವ ಮಾಧ್ಯಮದಲ್ಲಾದರೂ ಬಹಿರಂಗ ಚರ್ಚೆಗೆ ಬರಲಿ. ನನ್ನ ಘನತೆ ಕಡಿಮೆಯಾದರೂ ಪರವಾಗಿಲ್ಲ. ಈಶ್ವರಪ್ಪನಿಗೆ ಉತ್ತರ ಕೊಡಲು ಸಿದ್ಧನಿದ್ದೇನೆ ಎಂದರು.

ಹೈಕಮಾಂಡ್ ಮನವಿಗೆ ನಾವು ಬದ್ಧ: ನಮ್ಮ ಪಕ್ಷದ ಹೈಕಮಾಂಡ್ ನೀಡಿರುವ ಹೇಳಿಕೆಗೆ ನಾವು ಬದ್ಧನಾಗಿದ್ದೇವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ರಾಷ್ಟ್ರಮಟ್ಟದ ನಾಯಕರು ಪ್ರಧಾನ ಮಂತ್ರಿಗಳಿಗೆ ಮಾಡಿರುವ ಮನವಿಗೆ ನಮ್ಮ ಬೆಂಬಲವೂ ಇದೆ ಎಂದರು.

ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪಿಎಂ ವಿಡಿಯೋ ಕಾನ್ಫ್​​ರೆನ್ಸ್ ವಿಚಾರ ಪ್ರಸ್ತಾಪಿಸಿ, ಈಗಾಗಲೇ ನಮ್ಮ ಎಐಸಿಸಿ ಒಂದು ನಿರ್ಧಾರ ತೆಗೆದುಕೊಂಡಿದೆ. ಅದಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಸರ್ಕಾರ ನಿಯಮ ಸಡಿಲಿಸಿದೆ ಎಂದು ಬೀದಿಗೆ ಇಳಿಯುವುದು ಬೇಡ. ಎಚ್ಚರಿಕೆ ಇರಲಿ. ಪ್ರಕರಣಗಳು ಸಂಖ್ಯೆ ಕಡಿಮೆ ಆಯ್ತು ಅಂತ ಮೈ ಮರೆಯುವುದು ಬೇಡ. ಅತಿ ಜಾಗೃತಿಯಿಂದ ಇರಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.