ಬೆಂಗಳೂರು: ಅಯೋಧ್ಯೆ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ.
ಅಯೋಧ್ಯೆ ತೀರ್ಪಿನ ವಿಚಾರದಲ್ಲಿ ಪಕ್ಷ ಯಾವ ನಿಲುವು ತಾಳಬೇಕು. ಹಾಗೆಯೇ ಹೈಕಮಾಂಡ್ ಹೇಳುವವರೆಗೂ ಯಾರೂ ತಮಗೆ ಇಷ್ಟ ಬಂದಂತೆ ಹೇಳಿಕೆ ನೀಡದಿರುವ ಬಗ್ಗೆ ಸೂಚನೆ ರವಾನೆಯಾಗಿರುವ ಹಿನ್ನೆಲೆ ಯಾವ ರೀತಿ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂಬ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಉಪ ಚುನಾವಣೆ, ಅನರ್ಹ ಶಾಸಕರ ಕ್ಷೇತ್ರಗಳ ವಿಚಾರವಾಗಿ ಕೂಡ ಇದೇ ಸಂದರ್ಭ ಹಿರಿಯ ನಾಯಕರ ಜೊತೆ ದಿನೇಶ್ ಗುಂಡೂರಾವ್ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮತ್ತಿತರರು ಭಾಗಿಯಾಗಿದ್ದರು.