ETV Bharat / city

ಕೋವಿಡ್​ನಿಂದ ಬಳಲುತ್ತಿದ್ದ ಜ್ಯೋತಿ.. ಮಾನಸಿಕ ಖಿನ್ನತೆಯಿಂದ ಕಾನ್ಸ್​ಟೇಬಲ್​ ಪತ್ನಿ ಆತ್ಮಹತ್ಯೆ? - ಕೌಟುಂಬಿಕ ಕಲಹಕ್ಕೆ ಪೊಲೀಸ್ ಸಿಂಗರ್ ಪತ್ನಿ ಆತ್ಮಹತ್ಯೆ

ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾದ ಕಾನ್ಸ್​ಟೇಬಲ್​ ಸುಬ್ರಮಣಿ ಅವರ ಪತ್ನಿ ಜ್ಯೋತಿ ಮನೆಯ‌ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಜೊತೆಗೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಹೊಸಕೋಟೆ ಬಳಿ ನಿನ್ನೆ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

Police singer
Police singer
author img

By

Published : May 11, 2021, 6:58 PM IST

ಬೆಂಗಳೂರು: ಕನ್ನಡದ ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಪೊಲೀಸ್ ಕಾನ್ಸ್​ಟೇಬಲ್​ ಸುಬ್ರಮಣಿ ಅವರ ಪತ್ನಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಂದು ಹೇಳಲಾಗ್ತಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆನ್ನಲಾದ ಹೆಡ್ ಕಾನ್ಸ್​ಟೇಬಲ್ ಸುಬ್ರಮಣಿ ಅವರ ಪತ್ನಿ ಜ್ಯೋತಿ (33) ಮೇ 7 ರಂದು ಕೋಲಾರದ ಧರ್ಮರಾಯನಗರದ ನಿವಾಸವೊಂದರಲ್ಲಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗ್ತಿದೆ.

ಸರಿಗಮಪ ಶೋನಲ್ಲಿ ಫೈನಲ್​ವರೆಗೂ ತಲುಪಿದ್ದ ಸುಬ್ರಮಣ್ಯ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್​ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು‌. ಆದರೆ ಎರಡು ತಿಂಗಳಿಂದ ಕರ್ತವ್ಯಕ್ಕೆ ಗೈರಾಗಿದ್ದರು ಎನ್ನಲಾಗ್ತಿದೆ. ಸುಬ್ರಮಣಿ-ಜ್ಯೋತಿ 10 ವರ್ಷಗಳ ಹಿಂದೆ ವಿವಾಹವಾಗಿದ್ದರು.‌ ದಂಪತಿಗೆ ಇಬ್ಬರು‌ ಮಕ್ಕಳಿದ್ದು, ಆವಲಹಳ್ಳಿಯಲ್ಲಿ ವಾಸವಾಗಿದ್ದರು.

ಕಳೆದ‌ ಒಂದು ವಾರದ ಹಿಂದೆ ಜ್ಯೋತಿಗೆ ಕೊರೊನಾ ಸೋಂಕಿನ‌ ಗುಣಲಕ್ಷಣ ಕಾಣಿಸಿಕೊಂಡಿತ್ತು.‌ ತಪಾಸಣೆಗೊಳಪಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳಿಬ್ಬರನ್ನು ಸುಂಕದಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಕೋಲಾರದ ಧರ್ಮರಾಯನಗರದ ಸಂಬಂಧಿಕರ ಮನೆಯಲ್ಲಿ ಜ್ಯೋತಿ ಹೋಂ ಐಸೋಲೇಷನ್​ನಲ್ಲಿದ್ದರು.‌ ಕೆ‌ಲ ದಿನಗಳ ಹಿಂದೆ ಉಸಿರಾಟದಲ್ಲಿ ಏರುಪೇರು ಕಂಡು ಬಂದಿದ್ದರಿಂದ ವೆಂಟಿಲೇಟರ್ ಆಕ್ಸಿಜನ್ ಇರುವ ಬೆಡ್​ಗಾಗಿ ಸತತ ಹುಡುಕಾಡಿದರೂ ಬೆಡ್ ಸಿಕ್ಕಿರಲಿಲ್ಲ ಎನ್ನಲಾಗ್ತಿದೆ.

ಖಿನ್ನತೆಯಿಂದ ಬಳಲುತ್ತಿದ್ದ ಜ್ಯೋತಿ ಮನೆಯ‌ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಜೊತೆಗೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಹೊಸಕೋಟೆ ಬಳಿ ನಿನ್ನೆ ಖಾಸಗಿ ಆಸ್ಪತ್ರೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ವಿಜಯ್ ಕುಮಾರ್ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.