ETV Bharat / city

ಪಿಎಸ್​​ಐ ನೇಮಕಾತಿ ವಿಳಂಬ: ಹುದ್ದೆ ಆಧಾರಿತ ಪದ್ಧತಿ ಅಳವಡಿಕೆಗೆ ಸೂಚನೆ - ಮುಂಬಡ್ತಿ ಬಗ್ಗೆ ಡಿಜಿಪಿ ಪ್ರವೀಣ್ ಸೂದ್

ಸ್ವತಂತ್ರ ಪ್ರಭಾರವು ತಾತ್ಕಾಲಿಕವಾಗಿದ್ದು, ಯಾವುದೇ ಜೇಷ್ಠತೆ ಮತ್ತು ಪೂರ್ವಾನ್ವಯವಾಗುವ ಮುಂಬಡ್ತಿ ಹಕ್ಕೊತ್ತಾಯ ಮಾಡುವಂತಿಲ್ಲವೆಂಬ ಹಾಗೂ ನೇರ ನೇಮಕಾತಿ ಅಭ್ಯರ್ಥಿಗಳು ವರದಿ ಮಾಡಿದ ಕೂಡಲೇ ಸ್ವತಂತ್ರ ಪ್ರಭಾರದ ಮುಂಬಡ್ತಿಯು ರದ್ದುಗೊಳ್ಳಲ್ಪಡುತ್ತದೆ.

ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್
ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್
author img

By

Published : May 8, 2022, 8:22 AM IST

ಬೆಂಗಳೂರು: ಪಿಎಸ್​ಐ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಕಾರಣ ಹುದ್ದೆ ಆಧಾರಿತ ಪದ್ಧತಿ ಅಳವಡಿಸಿ, ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ಮಾಡುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ತಮ್ಮ ಸುತ್ತೋಲೆಯಲ್ಲಿ ಪ್ರಸಕ್ತ ವಿದ್ಯಮಾನಗಳಲ್ಲಿ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ತಡವಾಗುವ ಸಂಭವವಿರುವುದರಿಂದ ಹುದ್ದೆಯಾಧಾರಿತ ಪದ್ಧತಿ ಅಳವಡಿಸಿ ತಮ್ಮ ವಲಯ/ಕಮೀಷನರೇಟ್ ಘಟಕಗಳಲ್ಲಿನ ಎಲ್ಲಾ ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡುವಂತೆ ತಿಳಿಸಿದ್ದಾರೆ.

ಜೊತೆಗೆ ಮುಂಬಡ್ತಿಗೆ ಅರ್ಹರಿರುವ, ಒಂದು ವರ್ಷದ ಅವಧಿಯಲ್ಲಿ ವಯೋ ನಿವೃತ್ತಿ ಹೊಂದಲಿರುವ, ವಯೋಮಿತಿ ಅಂಚಿನಲ್ಲಿರುವ ಎಎಸ್‌ಐಗಳಿಗೆ ಮುಂಬಡ್ತಿ ಹುದ್ದೆಗಳು ಇಲ್ಲದಿದ್ದಲ್ಲಿ ಅಂತಹ ಸಿಬ್ಬಂದಿಗೆ ಜೇಷ್ಟತೆ ಮತ್ತು ಮುಂಬಡ್ತಿಗೆ ಪರಿಗಣಿಸುವ ತೃಪ್ತಿಕರ ಸೇವೆಯನ್ನು ಆಧರಿಸಿಕೊಂಡು ನಿಯಮಗಳ ಅನುಸಾರ ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಕರ್ನಾಟಕ ನಾಗರೀಕ ಸೇವಾ ನಿಯಮ 32-ಅಡಿ ತಾತ್ಕಾಲಿಕವಾಗಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.

ಸ್ವತಂತ್ರ ಪ್ರಭಾರವು ತಾತ್ಕಾಲಿಕವಾಗಿದ್ದು, ಯಾವುದೇ ಜೇಷ್ಠತೆ ಮತ್ತು ಪೂರ್ವಾನ್ವಯವಾಗುವ ಮುಂಬಡ್ತಿ ಹಕ್ಕೊತ್ತಾಯ ಮಾಡುವಂತಿಲ್ಲವೆಂಬ ಹಾಗೂ ನೇರ ನೇಮಕಾತಿ ಅಭ್ಯರ್ಥಿಗಳು ವರದಿ ಮಾಡಿದ ಕೂಡಲೇ ಸ್ವತಂತ್ರ ಪ್ರಭಾರದ ಮುಂಬಡ್ತಿಯು ರದ್ದುಗೊಳ್ಳಲ್ಪಡುತ್ತದೆ. ಈ ಅಂಶದ ಬಗ್ಗೆ ಅವರಿಂದ ಲಿಖಿತ ಒಪ್ಪಿಗೆ ಪತ್ರ, ಮುಚ್ಚಳಿಕ ಪತ್ರ ಪಡೆದು ನಂತರ ನಿಯಮಾನುಸಾರ ಸ್ವತಂತ್ರ ಪ್ರಭಾರದಲ್ಲಿರಿಸುವ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಸಂಬಂಧಪಟ್ಟ ವಲಯ ಕಮೀಷನರೇಟ್ ಘಟಕಾಧಿಕಾರಿಗಳು ಕೂಡಲೇ ಹುದ್ದೆ ಆಧಾರಿತ ಪದ್ಧತಿ ಅಡಿ ತಮ್ಮ ವಲಯ, ಕಮೀಷನರೇಟ್ ಘಟಕಗಳಲ್ಲಿನ ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ/ಸ್ವತಂತ್ರ ಪ್ರಭಾರದಲ್ಲಿರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗ: ಪರೀಕ್ಷಾ ಪ್ರಕ್ರಿಯೆ ರದ್ದುಪಡಿಸಿದ ರಾಜ್ಯ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.