ETV Bharat / city

ನಗರದಲ್ಲಿ ಕುಸಿದ ವಾಯು ಗುಣಮಟ್ಟ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಸತ್ಯ ಬಯಲು - benglure air quality

ಬೆಂಗಳೂರು ವಾಯು ಗುಣಮಟ್ಟದಲ್ಲಿ ಉತ್ತಮ ಸ್ಥಾನದಿಂದ ಸಮಾಧಾನಕರ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕುಸಿದಿದ್ದು, ಸಾಧಾರಣ ಸ್ಥಾನಕ್ಕೆ ಬಂದು ತಲುಪಿದೆ. ಗಾಳಿಯಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2019-20 ನೇ ಸಾಲಿನ ವಾರ್ಷಿಕ ವರದಿಯಲ್ಲಿ ಅಂಕಿ - ಅಂಶ ಸಹಿತ ಇದನ್ನು ವಿವರಿಸಲಾಗಿದೆ.

air quality
air quality
author img

By

Published : Dec 19, 2020, 4:30 PM IST

Updated : Dec 20, 2020, 3:13 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ವಾಯು ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಗಾಳಿಯಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2019 - 20 ನೇ ಸಾಲಿನ ವಾರ್ಷಿಕ ವರದಿಯಲ್ಲಿ ಅಂಕಿ - ಅಂಶ ಸಹಿತ ಇದನ್ನು ವಿವರಿಸಲಾಗಿದೆ.

ಬೆಂಗಳೂರು ವಾಯು ಗುಣಮಟ್ಟದಲ್ಲಿ ಉತ್ತಮ ಸ್ಥಾನದಿಂದ ಸಮಾಧಾನಕರ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕುಸಿದಿದ್ದು, ಸಾಧಾರಣ ಸ್ಥಾನಕ್ಕೆ ಬಂದು ತಲುಪಿದೆ. ಈಗಾಗಲೇ ದೇಶದಲ್ಲೇ ಅಸ್ತಮಾ ರೋಗಿಗಳು ಹೆಚ್ಚಿರುವ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ನಗರದ 31 ಕಡೆ ಹೆಚ್ಚು ಧೂಳು ಇದೆ ಎಂದು ಮಂಡಳಿ ಗುರುತಿಸಿದೆ. ಗಾಳಿಯಲ್ಲಿ ಧೂಳಿನ ಸಾಂದ್ರತೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ಧಾರವಾಡ, ದಾವಣಗೆರೆ, ಕಲಬುರಗಿಯನ್ನು ಕೂಡ (critically polluted areas) ಕ್ರಿಟಿಕಲಿ ಪೊಲ್ಯೂಟೆಡ್ ಏರಿಯಾ ಎಂದು ಪಟ್ಟಿ ಮಾಡಲಾಗಿದ್ದು, ಮಾಲಿನ್ಯ ತಡೆಗಟ್ಟಲು ಪ್ರತ್ಯೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.

ಮಾಲಿನ್ಯ ಕುರಿತು ಶ್ರೀನಿವಾಸಲು ಪ್ರತಿಕ್ರಿಯೆ

ವಾತಾವರಣದಲ್ಲಿರುವ ಗಂಧಕದ ಡೈ ಆಕ್ಸೈಡ್ (SO2), ನೈಟ್ರೇಟ್​ಗಳು (NO2) , ಮಾಲಿನ್ಯಕಾರಣ ಕಣಗಳು (PM), ಅಮೋನಿಯಾ ( NH3) ಹಾಗೂ ಸೀಸದ ಪ್ರಮಾಣದ ಆಧಾರದಲ್ಲಿ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅನ್ನು ನಿರ್ಧರಿಸಲಾಗುತ್ತದೆ. ಈ ಕಣಗಳು ರಾಷ್ಟ್ರ ರಾಷ್ಟ್ರೀಯ ಮಿತಿಗಿಂತ ಕಡಿಮೆಯೇ ಇದ್ದರೂ, ಮಾಲಿನ್ಯಕಾರಕ ಕಣಗಳು (ಪಿಎಂ 2.5, ಪಿ.ಎಂ.10) ಮಾತ್ರ ರಾಷ್ಟ್ರೀಯ ಮಿತಿಗಿಂತ ಹೆಚ್ಚಾಗುತ್ತಿದೆ. ಅಂದರೆ ವಾಹನಗಳ ಹೊಗೆ, ಧೂಳು, ಕಾಮಗಾರಿಗಳಿಂದ ಉಂಟಾಗುವ ಧೂಳಿನ ಪ್ರಮಾಣ ಹೆಚ್ಚು ಇದೆ.

ಬೆಂಗಳೂರಿನ ವಾಯು ಗುಣಮಟ್ಟ
ಬೆಂಗಳೂರಿನ ವಾಯು ಗುಣಮಟ್ಟ

ಆರು ವಿಭಾಗದಲ್ಲಿ ವಾಯು ಗುಣಮಟ್ಟ ಸೂಚಿಸಲಾಗುತ್ತದೆ:

  • ಉತ್ತಮ (0-50)
  • ಸಮಾಧಾನಕರ (51-100)
  • ಮಧ್ಯಮ/ಸಾಧಾರಣ (101-200)
  • ಕಳಪೆ (201-300)
  • ತೀರ ಕಳಪೆ (301-400)
  • ಆತಂಕಕಾರಿ/ಗಂಭೀರ (>401)

ನಗರದಲ್ಲಿ ಒಟ್ಟು 18 ಕಡೆ ವಾಯುಮಾಲಿನ್ಯ ಮಾಪಕಗಳಿದ್ದು, ನಿರಂತರವಾಗಿ ವಾಯು ಗುಣಮಟ್ಟ ಅಳೆಯಲಾಗುತ್ತದೆ.

20 ಸ್ಥಳಗಳಲ್ಲಿ ಹೇಗಿದೆ ವಾಯುಗುಣಮಟ್ಟ

1) ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ - 82.7

2) ಯಲಹಂಕ-ರೈಲ್ ವೀಲ್ ಫ್ಯಾಕ್ಟ್ರಿ - 81.4

3) ಯಶವಂತಪುರ ಪೊಲೀಸ್ ಠಾಣೆ- 75.0

4) ಸೆಂಟ್ರಲ್ ಸಿಲ್ಕ್ ಬೋರ್ಡ್, ಹೊಸೂರು ರಸ್ತೆ- 90.1

5) ನಿಮ್ಹಾನ್ಸ್- 60.0

6) ಸೆಂಟ್ರಲ್ ಸಿಲ್ಕ್ ಬೋರ್ಡ್- 80.1

7) ಪೀಣ್ಯ - 96.3

8) ಸ್ವಾನ್ ಸಿಲ್ಕ್, ಪೀಣ್ಯ- 86.4

9) ಮೈಸೂರು ರಸ್ತೆ, ಆಮ್ಕೊ ಬ್ಯಾಟರೀಸ್(AMCO ಬ್ಯಾಟ್ರೀಸ್)- 84.0

10) ಬಾಣಸವಾಡಿ ಪೊಲೀಸ್ ಠಾಣೆ - 93.3

11) ಕ.ವಿ.ಕಾ. ಮೈಸೂರು ರಸ್ತೆ - 71.2

12) ಕಜಿಸೊಣ್ಣೇನಹಳ್ಳಿ - 78.7

13) ತೆರಿ ಕಚೇರಿ, ದೊಮ್ಮಲೂರು - 96.5

14) ಯುವಿಸಿಇ-ಕೆ.ಆರ್ ಸರ್ಕಲ್ - 82.5

15) ವಿಕ್ಟೋರಿಯಾ ಆಸ್ಪತ್ರೆ - 59.5

16) ಇಂದಿರಾಗಾಂಧಿ ಚೈಲ್ಡ್ ಹೆಲ್ತ್ ಕೇರ್ ಸೆಂಟರ್ - 56.5

17) ವೆಟರ್ನರಿ ಕಾಲೇಜ್ ,ಹೆಬ್ಬಾಳ- 62.3

18) ಜಯನಗರ 5th ಬ್ಲಾಕ್ - 72.1

19) ಎಸ್ ಜಿ ಹಳ್ಳಿ - ಮಧ್ಯಮ - 113.8

20) ನಗರ ರೈಲು ನಿಲ್ದಾಣ - ಮಧ್ಯಮ- 109.6

ಪ್ರಮುಖ ಅಂಶಗಳು:

  • ದೂಳಿನ ಕಣಗಳ ಮಾಪನವಾದ PM10 ನಗರದ 16 ಕಡೆಗಳಲ್ಲಿ ರಾಷ್ಟ್ರೀಯ ಮಿತಿ ಮೀರಿದೆ.
  • 20 ಸ್ಥಳಗಳ ಪೈಕಿ, 17 ಸ್ಥಳಗಳಲ್ಲಿ ಸಮಾಧಾನಕರ, 2 ಪ್ರದೇಶಗಳಲ್ಲಿ ಮಧ್ಯಮ ಹಾಗೂ ಒಂದು ಸ್ಥಳದಲ್ಲಿ ಉತ್ತಮ ವಾಯುಗುಣಮಟ್ಟ ಇದೆ.
  • ಈ ಪ್ರಮಾಣದ ವಾಯುಮಾಲಿನ್ಯದಿಂದ ನಗರದ ಶ್ವಾಸಕೋಶ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ಹಾಗೂ ಮಕ್ಕಳಿಗೆ ಉಸಿರಾಟಕ್ಕೆ ತೊಂದರೆ ಆಗಲಿದೆ.
  • PM10 - ವಾಹನದ ಹೊಗೆ, ವಾಹನಗಳ ಓಡಾಟದಿಂದ ಉಂಟಾಗುವ ಧೂಳು, ರಸ್ತೆ ಕಾಮಗಾರಿ ಹಾಗೂ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳಿನ ಕಣಗಳು.

ಇನ್ನು ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಪ್ರತಿಕ್ರಿಯೆ ನೀಡಿದ್ದು, ಈ ಬಾರಿ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ವಾಯು ಮಾಲಿನ್ಯ ಕಡಿಮೆ ಆಗಿದೆ. ಈ ಹಿಂದಿನಂತೆ ಮಾಲಿನ್ಯ ಆಗಿಲ್ಲ. ಹಬ್ಬದ ಸಂದರ್ಭದಲ್ಲಿ ಅತಿ ಕಡಿಮೆ ಮಾಲಿನ್ಯ ಆಗಿದೆ. ವಾಯುಮಾಲಿನ್ಯ ಪ್ರಮಾಣ ಗುಣಮಟ್ಟ ಹೇಗಿದೆ ಅಂತ ಪ್ರತಿ ನಾಗರಿಕರ ಕೈಗೆ ಸಿಗುವ ಹಾಗೆ ಮಂಡಳಿ ವೆಬ್​ಸೈಟ್​ ನಲ್ಲಿ ಪ್ರಕಟಿಸಿದೆ. ಹಲವರಿಗೆ ಎಸ್ ಎಂ ಎಸ್ ಅಲರ್ಟ್ ಮೂಲಕವೂ ಹೋಗುತ್ತಿದೆ. ವಾತಾವರಣದ ಗಾಳಿಯಲ್ಲಿ ಮಾಲಿನ್ಯ ಕಾರಕಗಳು ಹೆಚ್ಚಾಗ್ತಿವೆ. ಬೆಂಗಳೂರು ಅಷ್ಟೇ ಅಲ್ಲದೆ ಧಾರವಾಡ, ದಾವಣಗೆರೆ, ಗುಲ್ಬರ್ಗಾದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಈ ನಗರಗಳಿಗೆ ಪ್ರತ್ಯೇಕವಾಗಿ ಸಂಬಂಧಪಟ್ಟ ಸ್ಥಳೀಯ ಪಾಲಿಕೆಗಳ ಮೂಲಕ ಸೇರಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.

Last Updated : Dec 20, 2020, 3:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.