ETV Bharat / city

ವಿಧಾನಸಭೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ತೀರ್ಮಾನ - ಬೆಂಗಳೂರು

ಮಹತ್ತರ ಕಾರ್ಯಗಳನ್ನು ನಿರ್ವಹಿಸುವ ಜನಪ್ರತಿನಿಧಿಗಳ ಪರಿಶ್ರಮ ಹಾಗೂ ಪ್ರತಿಭೆಗಳನ್ನು ಗುರುತಿಸಿದ್ದು, ಇದರಿಂದ ಪ್ರೋತ್ಸಾಹಗೊಂಡು ಇಂದಿನ ಪೀಳಿಗೆಯಲ್ಲಿ ಇನ್ನೂ ಉತ್ತಮ ಜನಪ್ರತಿನಿಧಿಗಳು ಹೊರಹೊಮ್ಮುತ್ತಾರೆ. ಇಂತಹ ಮಹತ್ತರ ಉದ್ದೇಶದಿಂದ ಭಾರತದ ಸಂಸತ್ತಿನ ಉಭಯ ಸದನಗಳಾದ ರಾಜ್ಯ ಸಭೆ ಮತ್ತು ಲೋಕಸಭೆ ತನ್ನ ಹಾಲಿ ಸದಸ್ಯರುಗಳ ಅಸಾಧಾರಣ ಸಾಧನೆಯನ್ನು ಗುರುತಿಸಿ 1995ರಿಂದ ಅಸಾಧಾರಣ ಸಂಸದೀಯ ಪಟು ಪ್ರಶಸ್ತಿಯನ್ನು ನೀಡುತ್ತಾ ಬಂದಿವೆ.

best legislator award in assembly
ವಿಧಾನಸಭೆಯಲ್ಲಿ “ಅತ್ಯುತ್ತಮ ಶಾಸಕ ಪ್ರಶಸ್ತಿ" ನೀಡಲು ತೀರ್ಮಾನ!
author img

By

Published : Jan 13, 2021, 1:05 AM IST

Updated : Sep 24, 2022, 1:16 PM IST

ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಸದಸ್ಯರುಗಳ ಅಪ್ರತಿಮ ಸಾಧನೆ ಹಾಗೂ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡಲು ಪ್ರತಿವರ್ಷವೂ ಒಬ್ಬ ಸದಸ್ಯರಿಗೆ “ಅತ್ಯುತ್ತಮ ಶಾಸಕ ಪ್ರಶಸ್ತಿ " ನೀಡಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಅನುಸರಿಸಲಾಗುವ ಮಾರ್ಗಸೂಚಿಗಳನ್ನು ಸದಸ್ಯರುಗಳ ಮಾಹಿತಿಗಾಗಿ ಕಳುಹಿಸಲಾಗುತ್ತಿದೆ. ನಮ್ಮ ಸಂವಿಧಾನದಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಪೈಕಿ ವೈಚಾರಿಕವಾಗಿ ಶಾಸಕಾಂಗವು ಬಹಳ ಪ್ರಮುಖವೆನಿಸಿಕೊಳ್ಳುತ್ತದೆ. ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಪ್ರತಿನಿಧಿಗಳು ಜನರಿಂದ ನೇರವಾಗಿ ಆಯ್ಕೆಯಾಗಿ ಬರುವುದರಿಂದ ಅವರುಗಳಿಗೆ ಸಾಮಾನ್ಯ ಜನರ ಹಾಗೂ ಸಮಾಜದ ಎಲ್ಲಾ ಆಗು ಹೋಗುಗಳ ಅರಿವಿರುತ್ತದೆ. ಮತ್ತು ಅವರುಗಳು ಜನರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದು, ಅದನ್ನು ಪರಿಹರಿಸಲು ಉತ್ತಮವಾದ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಕಾರ್ಯಾಂಗದ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಕರಿಸುತ್ತಾರೆ.

ಮಹತ್ತರ ಕಾರ್ಯಗಳನ್ನು ನಿರ್ವಹಿಸುವ ಜನಪ್ರತಿನಿಧಿಗಳ ಪರಿಶ್ರಮ ಹಾಗೂ ಪ್ರತಿಭೆಗಳನ್ನು ಗುರುತಿಸಿದ್ದು, ಇದರಿಂದ ಪ್ರೋತ್ಸಾಹಗೊಂಡು ಇಂದಿನ ಪೀಳಿಗೆಯಲ್ಲಿ ಇನ್ನೂ ಉತ್ತಮ ಜನಪ್ರತಿನಿಧಿಗಳು ಹೊರಹೊಮ್ಮುತ್ತಾರೆ. ಇಂತಹ ಮಹತ್ತರ ಉದ್ದೇಶದಿಂದ ಭಾರತದ ಸಂಸತ್ತಿನ ಉಭಯ ಸದನಗಳಾದ ರಾಜ್ಯ ಸಭೆ ಮತ್ತು ಲೋಕಸಭೆ ತನ್ನ ಹಾಲಿ ಸದಸ್ಯರುಗಳ ಅಸಾಧಾರಣ ಸಾಧನೆಯನ್ನು ಗುರುತಿಸಿ 1995ರಿಂದ “ಅಸಾಧಾರಣ ಸಂಸದೀಯ ಪಟು” ಪ್ರಶಸ್ತಿಯನ್ನು ನೀಡುತ್ತಾ ಬಂದಿವೆ.

ಅಸ್ಸಾಂ, ರಾಜಸ್ಥಾನ, ಜಾರ್ಖಂಡ್, ಉತ್ತರಖಂಡ್, ಗುಜರಾತ್ ಮುಂತಾದ ಹಲವು ರಾಜ್ಯಗಳಲ್ಲೂ ಸಹ ವಿಧಾನಸಭೆಯ ಸದಸ್ಯರುಗಳಿಗೆ “ಅತ್ಯುತ್ತಮ ಶಾಸಕ" ಎಂಬ ಪ್ರಶಸ್ತಿಯನ್ನು ನೀಡುತ್ತಿವೆ. ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ನಡೆದ 79ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ವಿಧಾನಮಂಡಲಗಳಲ್ಲಿ ಚರ್ಚೆಗಳ ಗುಣಮಟ್ಟವನ್ನು ವೃದ್ಧಿಸಲು, ಸದಸ್ಯರು ಸದನದ ನಿಯಮಗಳು, ಕಾರ್ಯವಿಧಾನ ಹಾಗೂ ಚರ್ಚಿಸುವ ಸಾಮರ್ಥ್ಯ ಇತ್ಯಾದಿಗಳನ್ನು ಪರಿಗಣಿಸಿ ಸಂಸತ್ತಿನಲ್ಲಿ ವರ್ಷಕ್ಕೊಮ್ಮೆ ನೀಡಲಾಗುತ್ತಿರುವ “ಅತ್ಯುತ್ತಮ ಸಂಸದೀಯ ಪಟು” ಎಂಬ ಪ್ರಶಸ್ತಿಯನ್ನು ಎಲ್ಲಾ ರಾಜ್ಯಗಳಲ್ಲೂ ನೀಡುವುದು ಅವಶ್ಯಕವೆಂಬ ಒಮ್ಮತದ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ.

ನಮ್ಮ ರಾಜ್ಯದಲ್ಲಿಯೂ ಸಹ ಈ ಹಿಂದಿನ ಕೆಲವೊಂದು ವಿಧಾನಸಭಾ ಅವಧಿಗಳಲ್ಲಿ ಇಂತಹ ಪ್ರಶಸ್ತಿಯನ್ನು ಸದಸ್ಯರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ಮತ್ತು ಕ್ರಮಬದ್ಧವಾಗಿ ಶಾಸನ ಸಭೆಗಳನ್ನು ನಡೆಸುತ್ತದೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ರಾಜ್ಯದಲ್ಲಿಯೂ ಸಹ ಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆಯಲ್ಲಿ ಪ್ರತಿವರ್ಷ ಸದಸ್ಯರೊಬ್ಬರಿಗೆ “ಅತ್ಯುತ್ತಮ ಸಂಸದೀಯ ಪಟು” ಅಥವಾ “ಅತ್ಯುತ್ತಮ ಶಾಸಕ” ಎಂಬ ಪ್ರಶಸ್ತಿ ನೀಡುವುದು ಅವಶ್ಯಕವೆಂದು ಪರಿಗಣಿಸಿ, ಪ್ರಶಸ್ತಿಯ ಮಾರ್ಗಸೂಚಿಯನ್ನು ಅಂಗೀಕರಿಸಲಾಗಿದೆ.

"ಅತ್ಯುತ್ತಮ ಶಾಸಕ ಪ್ರಶಸ್ತಿ" ಆಯ್ಕೆ ಕುರಿತು ಮಾರ್ಗಸೂಚಿ :

1. ವಿಧಾನಸಭಾ ಸದಸ್ಯರು ಸಾರ್ವಜನಿಕ ಜೀವನದಲ್ಲಿ ಶಾಸಕರಾಗಿ ಮತಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಪರಿಗಣನೆ.

2. ತಮ್ಮ ಮತಕ್ಷೇತ್ರಗಳಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿ ಗಳಿಸಿರುವ ಅನುಭವದ ಪರಿಗಣನೆ.

3. ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಸದಸ್ಯರು ತೋರಿಸುವ ಕೌಶಲ್ಯ

4. ಸಾರ್ವಜನಿಕ ಹಿತಾಸಕ್ತಿ ಇರುವಂತಹ ವಿಷಯಗಳ ಬಗ್ಗೆ ಸದಸ್ಯರಿಗೆ ಇರುವ ಆಸಕ್ತಿ.

5. ಸದನದಲ್ಲಿ ಸದಸ್ಯರು ಪ್ರಸ್ತಾಪಿಸುವ ವಿಷಯ ಹಾಗೂ ಅದರ ಗಂಭೀರತೆಯ ಪರಿಗಣನೆ.

6. ಸದನದಲ್ಲಿ ವಿಷಯಗಳನ್ನು ಪ್ರಸ್ತುತ ಪಡಿಸುವ ವಿಧಾನ ಹಾಗೂ ಸದನದ ಸಂಪ್ರದಾಯಗಳ ಬಗ್ಗೆ ಅವರಿಗೆ ಇರುವ ಮನೋಭಾವನೆ.

7. ಕನ್ನಡ ಭಾಷೆಯಲ್ಲಿ ಹೊಂದಿರುವ ಪಾಂಡಿತ್ಯ.

8. ಸದನದ ಒಳಗೆ ಹಾಗೂ ಹೊರಗೆ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳ ಅರಿವು ಮತ್ತು ಅವುಗಳ ಪಾಲನೆ.

9. ಸಭಾಧ್ಯಕ್ಷರು ನೀಡುವ ಸೂಚನೆಗಳನ್ನು ಅನುಸರಿಸಲು ಗ್ರಹಿಸುವಲ್ಲಿನ ಸಾಮರ್ಥ್ಯ.

10.ವಿಧಾನ ಮಂಡಲದ/ವಿಧಾನಸಭೆಯ ಸಮಿತಿಗಳಲ್ಲಿನ ಭಾಗವಹಿಸುವಿಕೆ.

11. ಶಾಸಕರಾಗಿ ಸದನದ ಒಳಗೆ ಹಾಗೂ ಹೊರಗೆ ಮಾನ್ಯ ಸದಸ್ಯರ ನಡವಳಿಕೆ.

12.ಸದನದಲ್ಲಿ ಹಾಜರಾತಿ.

13. ಇತರೆ ಸದಸ್ಯರುಗಳೊಂದಿಗೆ ತೋರ್ಪಡಿಸುವ ಸೌಹಾರ್ದಯುತ ಸಂಬಂಧ.

14. ಸದನದಲ್ಲಿ ಕೇಳಲಾದ ಪ್ರಶ್ನೆಗಳ ಗುಣಮಟ್ಟ, ವ್ಯಾಪ್ತಿ ಮತ್ತು ಪ್ರಸ್ತುತ ಪಡಿಸುವ ವಿಧಾನ.

15. ಸದನದಲ್ಲಿ ಉಂಟಾಗುವ ಪ್ರತಿರೋಧದ ಪರಿಸ್ಥಿತಿಗಳ ಕಾರ್ಯನಿರ್ವಹಣೆ ಸಂದರ್ಭದಲ್ಲಿ ತೋರಿಸುವ ಸಹಕಾರ.

ಪ್ರಶಸ್ತಿಗೆ ಆಯ್ಕೆ ಮಾಡಲು ಸಮಿತಿ ರಚನೆ :

ಈ ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಸದಸ್ಯರನ್ನು ಆಯ್ಕೆ ಮಾಡಲು ಸಮಿತಿಯನ್ನು ವಿಧಾನಸಭೆಯ ಸಭಾಧ್ಯಕ್ಷರು ರಚಿಸಿದ್ದಾರೆ.

ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷರಾಗಿರುತ್ತಾರೆ.ಸದಸ್ಯರಾಗಿ ವಿಧಾನಸಭೆಯ ಉಪ ಸಭಾಧ್ಯಕ್ಷರು, ಆನಂದ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ ಮಾಮನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ, ಮಾಧುಸ್ವಾಮಿ, ಶಾಸಕ ಆರ್.ವಿ. ದೇಶಪಾಂಡೆ, ( ಸಭಾಧ್ಯಕ್ಷರಿಂದ ನಾಮನಿರ್ದೇಶನ ಮಾಡಲ್ಪಟ್ಟ ಸದಸ್ಯರು) ಹಾಗೂ ಈ ಸಮಿತಿಯ ಕಾರ್ಯದರ್ಶಿಯಾಗಿ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಸಮಿತಿಯ ಕಾರ್ಯಗಳು :

ಆಯ್ಕೆ ಸಮಿತಿಯು ಮಾರ್ಗಸೂಚಿಯ ಅನ್ವಯ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಸಭಾಧ್ಯಕ್ಷರ ನಿರ್ಣಯವೇ ಅಂತಿಮವಾಗಿರುತ್ತದೆ. ಆಯ್ಕೆ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಪ್ರಶಸ್ತಿಯ ಘೋಷಣೆ ಮಾಡಲಾಗುತ್ತದೆ.ಹಾಗೂ ಘೋಷಣೆಯ ಮೊದಲು ಪ್ರಶಸ್ತಿಯನ್ನು ಸ್ವೀಕರಿಸಲು ಸಂಬಂಧಪಟ್ಟ ಸದಸ್ಯರಿಂದ ಒಪ್ಪಿಗೆಯನ್ನು ಪಡೆಯಬೇಕು. ಈ ಪ್ರಶಸ್ತಿಯನ್ನು ಸದಸ್ಯರಿಗೆ, ಸದಸ್ಯರಾಗಿ ಅವರ ಜೀವಮಾನದಲ್ಲಿ ಒಮ್ಮೆ ಮಾತ್ರ ನೀಡತಕ್ಕದ್ದು. ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಸಂಸದೀಯ ಪದಾಧಿಕಾರಿಗಳು, ಸಚಿವ ಸಂಪುಟ ಸದಸ್ಯರು ಹಾಗೂ ಸಂಸದೀಯ ಕಾರ್ಯದರ್ಶಿಗಳನ್ನು ಈ ಪ್ರಶಸ್ತಿಗೆ ಪರಿಗಣಿಸತಕ್ಕದ್ದಲ್ಲ.

ಪ್ರಶಸ್ತಿಯನ್ನು ನೀಡಲು ರಚಿಸಲಾಗುವ ಆಯ್ಕೆ ಸಮಿತಿಯು ಯಾವುದೇ ಒಂದು ವರ್ಷದಲ್ಲಿ ಪ್ರಶಸ್ತಿಯನ್ನು ನೀಡಬಾರದೆಂದು ಪರಿಗಣಿಸಿದಲ್ಲಿ ಅದೇ ರೀತಿ ಶಿಫಾರಸ್ಸು ಮಾಡಬಹುದಾಗಿದೆ.

ಪ್ರಶಸ್ತಿ :

ಅತ್ಯುತ್ತಮ ಶಾಸಕ ಪ್ರಶಸ್ತಿಯು ಸಭಾಧ್ಯಕ್ಷರ ಸಹಿಯುಳ್ಳ ಪ್ರಶಸ್ತಿ ಪತ್ರ ಮತ್ತು ಕರ್ನಾಟಕದ ವಿಧಾನಸೌಧ ಕಟ್ಟಡದ ಮುದ್ರೆಯುಳ್ಳ ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ.

Last Updated : Sep 24, 2022, 1:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.