ETV Bharat / city

ಚುನಾವಣಾ ವ್ಯವಸ್ಥೆ ಹದಗೆಡಲು ಜನರು, ಪಕ್ಷಗಳು ಕಾರಣ.. ಸದನದಲ್ಲಿ ಕಾವೇರಿದ ಎಲೆಕ್ಷನ್​ ಚರ್ಚೆ - ಚುನಾವಣಾ ವ್ಯವಸ್ಥೆ ಬಗ್ಗೆ ಸ್ವಾರಸ್ಯಕರ ಚರ್ಚೆ

ಚುನಾವಣಾ ವ್ಯವಸ್ಥೆಯ ಮೇಲೆ ಇಂದು ನಡೆದ ಚರ್ಚೆಯು ಸದನದಲ್ಲಿ ಸ್ವಾರಸ್ಯವನ್ನು ಹೆಚ್ಚಿಸಿತು. ಶಾಸಕರಲ್ಲದೇ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗದ ಮೇಲೂ ಬೆಳಕು ಚೆಲ್ಲಲಾಯಿತು.

electoral-system
ಚುನಾವಣಾ ವ್ಯವಸ್ಥೆ
author img

By

Published : Mar 30, 2022, 9:19 PM IST

ಬೆಂಗಳೂರು: ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಜನ, ಪಕ್ಷಗಳು ಎಲ್ಲರೂ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಬುಧವಾರ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಜನರೇ ಅಭ್ಯರ್ಥಿಗಳಿಗೆ ಹಣ ಕೊಟ್ಟು ಚುನಾವಣೆ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದರು.

ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಉತ್ತರ ಕೊಡುವ ಜವಾಬ್ದಾರಿ ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾ ರಂಗದ ಮೇಲಿದೆ. ಸಮಾಜದಲ್ಲಿ ಏನೇ ಆದರೂ ಮೂರು ರಂಗಗಳಿಂದ ಯಾರೂ ನಿರೀಕ್ಷೆ ಮಾಡಲ್ಲ ಎಲ್ಲವನ್ನೂ ಯಾವುದೇ ಸಮಸ್ಯೆಯಾದರೂ ಶಾಸಕರೇ ಉತ್ತರ ನೀಡುವಂತಹ ಪರಿಸ್ಥಿತಿ ರೂಪುಗೊಂಡಿದೆ ಎಂದು ಹೇಳಿದರು. ಸದನದಲ್ಲಿ ಮಂಗಳವಾರ ಹೆಚ್.ಕೆ ಪಾಟೀಲ್‌ ಅವರು ಚುನಾವಣಾ ಆಯೋಗದ ನ್ಯೂನತೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿ, 19 ಲಕ್ಷ ಮತ ಯಂತ್ರಗಳು ನಾಪತ್ತೆಯಾಗಿರುವ ಆರೋಪವಿದೆ. ಇದಕ್ಕೆ ಯಾರು ಉತ್ತರ ಕೊಡಬೇಕು. ಚುನಾವಣಾ ಆಯೋಗ ಸ್ಪಷ್ಟನೆ ಕೊಡಬೇಕಾ? ಅಥವಾ ಇದರ ಹೊಣೆಯನ್ನು ಜನಪ್ರತಿನಿಧಿಗಳು ಹೊರಬೇಕಾ? ಎಂದು ಪ್ರಶ್ನಿಸಿದರು.

ಇವಿಎಂ ಮೇಲೆ ಇನ್ನೂ ಅನುಮಾನ: ಮತದಾನದ ವ್ಯವಸ್ಥೆ ಬಗ್ಗೆ ಸಾರ್ವಜನಿಕವಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇವಿಎಂ ಮೂಲಕ ಮತದಾನ ಆರಂಭವಾದ ನಂತರ ಕೆಲ ಅನುಮಾನಗಳು ಎಲ್ಲರನ್ನೂ ಕಾಡುತ್ತಿವೆ. ಈ ಅನುಮಾನಗಳಿಗೆ ಚುನಾವಣಾ ಆಯೋಗ, ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ಇದುವರೆಗೂ ಸ್ಪಷ್ಟನೆಗಳು ಬಂದಿಲ್ಲ ಎಂದು ಹೇಳಿದರು.

ಮಾಧ್ಯಮಗಳಿಗಿದೆ ಜವಾಬ್ದಾರಿ: ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣಕ್ಕೆ ಟಿವಿ ಮಾಧ್ಯಮಗಳೇ ಮೊದಲ ಜವಾಬ್ದಾರಿ ಹೊರಬೇಕು ಎಂದು ಹೆಚ್​ಡಿಕೆ ನೇರವಾಗಿ ಮಾಧ್ಯಮಗಳ ವಿರುದ್ಧ ಗರಂ ಆದರು. ಇಂದು ಮಾಧ್ಯಮಗಳೇ ನ್ಯಾಯಾಧೀಶರಾಗಿದ್ದಾರೆ. ಟಿವಿ ಚಾನಲ್‌ಗಳು ಒಪಿನಿಯನ್ ಮೇಕರ್ಸ್ ಆಗಿಬಿಟ್ಟಿದ್ದಾರೆ. ದೂರು, ವಾದ, ಕೊನೆಗೆ ಅವರೇ ತೀರ್ಪು ಕೊಡುವವರು. ಇಡೀ ದೇಶದಲ್ಲಿ ಇದು ಆರಂಭವಾಗಿದೆ. ಟಿಆರ್‌ಪಿಗಾಗಿ, ವ್ಯವಹಾರದ ಲಾಭಕ್ಕಾಗಿ ಸಮಾಜ ಒಡೆಯಬೇಡಿ. ರಾಜಕಾರಣಿಗಳನ್ನು ಎಲ್ಲದಕ್ಕೂ ದೂಷಿಸುವುದು ಬೇಡ ಎಂದು ಮನವಿ ಮಾಡಿದರು.

ಹೆಚ್​ಡಿಕೆ ಮಾತಿಗೆ ದನಿಗೂಡಿಸಿದ ಸ್ಪೀಕರ್​: ಕುಮಾರಸ್ವಾಮಿ ಅವರ ಮಾತಿಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದನಿಗೂಡಿಸಿ, ಕುಮಾರಸ್ವಾಮಿ ಅವರು ಬಹಳ ಗಂಭೀರವಾದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಉಳಿದವರು ಇಷ್ಟು ಧೈರ್ಯವಾಗಿ ಪ್ರಸ್ತಾಪ ಮಾಡಲು ಮುಂದಾಗಿರಲಿಲ್ಲ. ತಮಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲವೂ ನಮ್ಮ ಜವಾಬ್ದಾರಿ ಎಂದು ಎಲ್ಲರಿಗೂ ಅನಿಸಬೇಕು ಎಂದರು.

ಕಳೆದ ಮೂರು ದಿನಗಳಿಂದ ಹಲಾಲ್ ವಿಷಯವನ್ನು ಮುಂದಿಟ್ಟುಕೊಂಡು ಚರ್ಚೆಯೊಂದನ್ನು ಪ್ರಾರಂಭಿಸಿದ್ದೀರಿ. ಯಾರಿಗೆ ಏನು ಬೇಕೋ ಅಲ್ಲೋಗಿ ಖರೀದಿ ಮಾಡುತ್ತಾರೆ. ಇಂತಹ ಕಡೆ ಖರೀದಿಸಿ ಎಂದು ಹೇಳುವುದಾಗಲಿ, ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ ಎಂದು ಹೇಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು. ನ್ಯಾಯಾಂಗ ವ್ಯವಸ್ಥೆ ಕೂಡ ಹದಗೆಟ್ಟಿದೆ. ಈ ದೇಶದ ನ್ಯಾಯಾಲಯಗಳಲ್ಲಿರುವ ಕೇಸ್‍ಗಳು ಬಗೆಹರಿಯಲು 341 ವರ್ಷಗಳು ಬೇಕೆಂದು ವಕೀಲರೊಬ್ಬರು ಹೇಳಿದ್ದಾರೆ. ಅದಕ್ಕೆ ನಮ್ಮ ಮೊಮ್ಮಕ್ಕಳ ಕಾಲ ಬರಬೇಕು ಎಂದು ಹೆಚ್​ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.

ಓದಿ: ವಿಧಾನಸಭೆಯಲ್ಲಿ ಮಾಂಸಹಾರದ ಕುರಿತು ಸ್ವಾರಸ್ಯಕರ ಚರ್ಚೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.