ಬೆಂಗಳೂರು: ಕರ್ನಾಟಕ ಮತ್ತು ಅಮೆರಿಕದ ವರ್ಜೀನಿಯಾ, ಇಂಡಿಯಾನ ರಾಜ್ಯಗಳಿಗೆ ಕೈಗಾರಿಕೆ, ವಾಣಿಜ್ಯ, ಬಾಹ್ಯಾಕಾಶ, ರಕ್ಷಣೆ, ಆರೋಗ್ಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ವಿಪುಲವಾದ ಅವಕಾಶಗಳಿದ್ದು, ಇದಕ್ಕಾಗಿ ಕೂಡಲೇ ಕಾರ್ಯನಿರ್ವಹಣಾ ಗುಂಪು (ವರ್ಕಿಂಗ್ ಗ್ರೂಪ್) ರಚನೆ ಮಾಡಲಾಗುವುದು ಎಂದು ಐಟಿಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ವರ್ಜೀನಿಯಾ, ಇಂಡಿಯಾನ ರಾಜ್ಯಗಳ ಉನ್ನತ ಪ್ರತಿನಿಧಿಗಳ ಜತೆ ಬಂಡವಾಳ ಹೂಡಿಕೆ ಹಾಗೂ ವಾಣಿಜ್ಯ ಅವಕಾಶಗಳ ಬಗ್ಗೆ ವರ್ಚುವಲ್ ಸಂವಾದ ನಡೆಸಿದ ಡಿಸಿಎಂ, ಹೂಡಿಕೆಗೆ ಹಾಗೂ ಹೊಸ ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ಕರ್ನಾಟಕ ಅತ್ಯಂತ ಪ್ರಶಸ್ತ್ಯವಾದ ಜಾಗ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟರು.
ಮೂರೂ ರಾಜ್ಯಗಳು ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿವೆ. ಅತ್ಯಂತ ಉತ್ಕೃಷ್ಟ ಮಾನವ ಸಂಪನ್ಮೂಲವನ್ನೂ ಹೊಂದಿವೆ. ಹೀಗಾಗಿ ಮಾತುಕತೆ ಹಂತ ಮುಗಿದ ಕೂಡಲೇ ವರ್ಕಿಂಗ್ ಗ್ರೂಪ್ ಮಾಡಿಕೊಂಡು ಅನುಷ್ಠಾನ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಾಗಿದೆ. ಇದಕ್ಕೆ ಕರ್ನಾಟಕ ಸಿದ್ಧವಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕವು ಇಡೀ ಭಾರತದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಹೆಸರಾಗಿದೆ. ಈಗಾಗಲೇ ಅಮೆರಿಕದ ಅನೇಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಿದ್ದು, ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹೂಡಿಕೆಗೆ ಕರ್ನಾಟಕ ಪ್ರಶಸ್ತ್ರ್ಯ ರಾಜ್ಯ: ಅಮೆರಿಕದ ವರ್ಜೀನಿಯಾ, ಇಂಡಿಯಾನ ಜತೆ ಡಿಸಿಎಂ ಅಶ್ವತ್ಥನಾರಾಯಣ ಚರ್ಚೆ - ಡಿಸಿಎಂ ಅಶ್ವತ್ಥನಾರಾಯಣ ಸಭೆ