ಬೆಂಗಳೂರು: ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇತ್ತೀಚೆಗೆ ಖರೇಗಾಂವ್ ಬಳಿ ಪಿಸ್ತೂಲ್ ಪತ್ತೆ ಹಚ್ಚಿದ್ದ ಬೆನ್ನಲೇ, ರಾಜ್ಯದಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಇದೇ ಪಿಸ್ತೂಲ್ ಬಳಸಿಕೊಂಡಿರಬಹುದಾ ಎಂಬ ಅನುಮಾನ ಮೂಡಿಸಿದೆ.
ಶರದ್ ಕಲಾಸ್ಕರ್ ಎಂಬಾತನೇ ಈ ಎರಡೂ ಪ್ರಕರಣಗಳ ಆರೋಪಿ. ಹೀಗಾಗಿ ಅನುಮಾನದ ಮೇರೆಗೆ ರಾಜ್ಯದ ಎಸ್ಐಟಿ ಅಧಿಕಾರಿಗಳು ದಾಬೋಲ್ಕರ್ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಥಾಣೆಯ ಖರೇಗಾಂವ್ ಕ್ರೀಕ್ನನಾ ಕೊಲ್ಲಿಯೊಂದರಲ್ಲಿ ಸಿಬಿಐ ಪಿಸ್ತೂಲ್ ಪತ್ತೆ ಮಾಡಿತ್ತು. ಇದೇ ಪಿಸ್ತೂಲ್ನಿಂದ ವಿಚಾರವಾದಿಗಳಾದ ದಾಬೋಲ್ಕರ್, ಎಂ ಎಂ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಬ್ಯಾಲಿಸ್ಟಿಕ್ ತಜ್ಞರಿಂದ ಕಡಲತಡಿಯಲ್ಲಿ ಪತ್ತೆಯಾದ ಪಿಸ್ತೂಲ್, ದಾಬೋಲ್ಕರ್ ಅವರ ಮರಣೋತ್ತರ ವರದಿಯಲ್ಲಿ ದಾಖಲಾಗಿದ್ದ ಬುಲೆಟ್ ಗಾತ್ರದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಯಾಗಿರುವ ಶರದ್ ಕಲಾಸ್ಕರ್, ದಾಬೋಲ್ಕರ್ ಪ್ರಕರಣದಲ್ಲೂ ಆರೋಪಿ. ಸಿಬಿಐ ವಿಚಾರಣೆ ವೇಳೆ ಪಿಸ್ತೂಲ್‌ನ ಥಾಣೆಯ ಖರೇಗಾಂವ್ ಸಮುದ್ರದ ಕೊಲ್ಲಿಗೆ ಎಸೆದಿದ್ದಾಗಿ ಹೇಳಿಕೆ ನೀಡಿದ್ದ.
ಈ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಕರ್ನಾಟಕ, ಮಹಾರಾಷ್ಟ್ರ ಎಟಿಎಸ್ನಿಂದ ಕಾರ್ಯಾಚರಣೆಗಾಗಿ ಸುಮಾರು 7.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಉಪಕರಣವಾದ ದುಬೈ ಮೂಲದ ಎನ್ವಿಟೆಕ್ ಮೆರೈನ್ ಕನ್ಸ್‌ಲ್ಟೆಂಟ್ ಶಸ್ತ್ರಾಸ್ತ್ರವನ್ನು ನಾರ್ವೆಯಿಂದ ಕರೆತರಲಾಗಿತ್ತು. ಬ್ಯಾಲೆಸ್ಟಿಕ್ ತಜ್ಞರ ಪರಿಶೀಲನೆ ಬಳಿಕ ಕೃತ್ಯಕ್ಕೆ ಯಾವ ಪಿಸ್ತೂಲ್ ಬಳಕೆಯಾಗಿದೆ ಎಂದು ತಿಳಿದು ಬರಲಿದೆ.