ಬೆಂಗಳೂರು : ಕುಟುಂಬಸ್ಥರು ಜಾಮೀನಿಗೆ ಸಪೋರ್ಟ್ ಮಾಡಿಲ್ಲ ಅಂತಾ ಕೊರಗಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಮನೋಜ್ ಅಲಿಯಾಸ್ ಹೂವು ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ಕೈದಿ.
ಡಕಾಯಿತಿ ಪ್ರಕರಣವೊಂದರಲ್ಲಿ ಚಾಮರಾಜಪೇಟೆ ಪೊಲೀಸರು 15 ದಿನಗಳ ಹಿಂದೆ ಮನೋಜ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈತ ಈ ಹಿಂದೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಮೂರು-ನಾಲ್ಕು ಬಾರಿ ಜೈಲು ಸೇರಿದ್ದ. ಸಕ್ರಿಯ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮನೋಜ್ ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನ ಟಾಯ್ಲೆಟ್ವೊಂದರ ಬಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಓದಿ: ಕಾರಾಗೃಹದ ಕಿಟಕಿಗೆ ನೇಣು ಬಿಗಿದುಕೊಂಡು ವಿಚಾರಣಾಧೀನ ಕೈದಿ ಆತ್ಮಹತ್ಯೆ
ವಿಚಾರಣಾಧೀನ ಕೈದಿ ಮನೋಜ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಾಮೀನಿಗೆ ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದರು. ಇದರ ಜೊತೆಗೆ ಮನೋಜ್ ಖಿನ್ನತೆಯಿಂದ ಬಳಲುತ್ತಿದ್ದನು. ಕಳೆದ ಶನಿವಾರ ಕೋರ್ಟ್ ಆವರಣದಲ್ಲಿ ಪೊಲೀಸರು ನನಗೆ ಮೋಸ ಮಾಡಿದ್ದರು ಅಂತಾ ಕೂಗಾಡಿದ್ದ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.