ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆ ನಾಳೆಯ ಗುಡ್ ಫ್ರೈಡೆಗೆ ಕ್ರಿಶ್ಚಿಯನ್ ಬಾಂಧವರು ಮನೆಯಲ್ಲೇ ಆಚರಿಸಲು ನಿರ್ಧರಿಸಿದ್ದಾರೆ.
ನಗರದಲ್ಲಿ ಯಾವುದೇ ಚರ್ಚ್‌ಗಳು ತೆರೆಯದಿರುವುದರಿಂದ ಚರ್ಚ್‌ಗಳಿಂದ ರವಾನೆಯಾಗಿರುವ ಆನ್ಲೈನ್ ಲಿಂಕ್ ಕಳುಹಿಸಲಾಗಿದೆ. ಇದರೊಂದಿಗೆ ಎಲ್ಲರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಚರ್ಚ್‌ಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟ ಸಾಧ್ಯವಾಗಿರುವುದರಿಂದ ನಾಳೆ ಯಾರೂ ಬರುವುದು ಬೇಡ ಎಂದು ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ತಿಳಿಸಿದ್ದಾರೆ.
ಪ್ರಾರ್ಥನೆಯನ್ನು ಯೂಟ್ಯೂಬ್‌ನಲ್ಲೂ ಕೂಡ ಪ್ರಸಾರ ಮಾಡಲಾಗುತ್ತೆ. ಮನೆಯಲ್ಲಿಯೇ ಕುಳಿತು ವೀಕ್ಷಿಸಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.