ಬೆಂಗಳೂರು: ಕೋವಿಡ್ ಕಾಲಿಟ್ಟ ಸಮಯದಲ್ಲಿ ಇದಕ್ಕೆ ಪರಿಣಾಮಕಾರಿ ಅಸ್ತ್ರ ಯಾವುದು ಇಲ್ವಾ ಅಂತ ಜನಸಾಮಾನ್ಯರು ಪರದಾಡುತ್ತಿದ್ದರು. ಬಹುಬೇಗ ಹರಡುವ ಈ ಕೊರೊನಾ ಸೋಂಕು ಮನೆಯಿಂದ ಹೊರಗೆ ಬಾರದಂತೆ ಕಟ್ಟಿಹಾಕಿತ್ತು. ಪ್ರಾಥಮಿಕವಾಗಿ ಕೊರೊನಾ ಕಂಟ್ರೋಲ್ಗೆ ಮಹಾ ಅಸ್ತ್ರವಾಗಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದಾಗಿತ್ತು. ಬಳಿಕ ಹಲವು ಸಂಶೋಧನೆಗಳ ಫಲವಾಗಿ ಕೋವಿಡ್ ವ್ಯಾಕಿನೇಷನ್ ಕಂಡು ಹಿಡಿಯಲಾಗಿದ್ದು, ಇದೀಗ ಕೋಟ್ಯಂತರ ಜನರು ಲಸಿಕೆ ಪಡೆದಿದ್ದಾರೆ. ಈ ಮಧ್ಯೆ ವ್ಯಾಕ್ಸಿನೇಷನ್ ಪರಿಣಾಮಕಾರಿಯೋ ಇಲ್ವೋ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಐಸಿಎಂಆರ್ ಫ್ಯಾಕ್ಟ್ ಚೆಕ್ ಮಾಡಿದೆ. ಕೋವಿಡ್ ವ್ಯಾಕ್ಸಿನೇಷನ್ ಪರಿಣಾಮಕಾರಿ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಲಾಗಿದೆ.
ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ವ್ಯಾಕ್ಸಿನ್ ಮಹತ್ವ ಬಯಲಾಗಿದ್ದು, ಫ್ರಂಟ್ಲೈನ್ ವಾರಿಯರ್ಸ್ ಮೇಲೆ ಅಧ್ಯಯನ ನಡೆಸಲಾಗಿದೆ. ವ್ಯಾಕ್ಸಿನ್ ಪಡೆದವರು ಎಷ್ಟು ಸೇಫ್, ಎರಡನೇ ಅಲೆಯಲ್ಲಿ ಎಷ್ಟು ಪರಿಣಾಮಕಾರಿ ಆಯ್ತು ಅಂತ ಪಕ್ಕದ ತಮಿಳುನಾಡಿನ ವ್ಯಾಕ್ಸಿನ್ ಪಡೆಯದೇ ಇರುವ ಹಾಗೂ ಪಡೆದಿದ್ದ 1,17,524 ಮಂದಿ ಪೊಲೀಸ್ ಸಿಬ್ಬಂದಿಯನ್ನ ಐಸಿಎಂಆರ್ ಅಧ್ಯಯನಕ್ಕೆ ಒಳಪಡಿಸಿತ್ತು.
ಒಂದು ಡೋಸ್ ಕೋವಿಡ್ ಲಸಿಕೆ ಪಡೆದ ಪೊಲೀಸ್ ಸಿಬ್ಬಂದಿಯಲ್ಲಿ ಕೋವಿಡ್ನಿಂದಾಗುವ ಸಾವು ತಡೆಯುವ ಪ್ರಮಾಣ ಶೇ. 82ರಷ್ಟಿದ್ದರೆ, ಎರಡು ಡೋಸ್ ಪಡೆದ ಪೊಲೀಸ್ ಸಿಬ್ಬಂದಿಯಲ್ಲಿ ಸಾವು ತಡೆಯುವ ಪ್ರಮಾಣ ಶೇ. 95ರಷ್ಟಿತ್ತು. ಈ ಮೂಲಕ ವ್ಯಾಕ್ಸಿನೇಷನ್ ಪಡೆದವರಲ್ಲಿ ಕೋವಿಡ್ ರೋಗದ ತೀವ್ರತೆ ಕಡಿಮೆ ಇರುವುದು ಕಂಡು ಬಂದಿದೆ.
ಲಸಿಕೆ ಪ್ರಭಾವ
ವ್ಯಾಕ್ಸಿನ್ ಪಡೆಯದ 17,069 ಜನರಲ್ಲಿ 20 ಜನ ಸಾವನ್ನಪ್ಪಿದ್ದರೆ, ಇತ್ತ ಮೊದಲ ಡೋಸ್ ಪಡೆದ 32,792 ಜನರಲ್ಲಿ 7 ಜನ ಮೃತರಾಗಿದ್ದಾರೆ. ಇತ್ತ ಎರಡು ಡೋಸ್ ಪಡೆದವರು 67,673 ಜನರಲ್ಲಿ 4 ಜನ ಮೃತರಾಗಿದ್ದಾರೆ. ಲಸಿಕೆ ಪಡೆದಿರುವ 1000 ಜನರಲ್ಲಿ ( Death per thousand) ಸಾವಿನ ಪ್ರಮಾಣವೂ 0.21,0.06 ನಷ್ಟು ಇದೆ. ಈ ಮೂಲಕ ಕೊರೊನಾ ತೀವ್ರತೆ ಕಡಿಮೆ ಮಾಡಲು ಹಾಗೂ ಸಾವಿನ ಸಂಖ್ಯೆ ನಿಯಂತ್ರಿಸಲು ಲಸಿಕೆ ಅತೀ ಮುಖ್ಯವಾದದ್ದು.
ಇದನ್ನೂ ಓದಿ: ಕೆಆರ್ಎಸ್ ಬಿರುಕು ವಿವಾದ: ಸಂಸದೆ ಸುಮಲತಾಗೆ ಇಂಜಿನಿಯರ್ ಶಂಕರಗೌಡ ಬರೆದ ಪತ್ರದಲ್ಲೇನಿದೆ?