ETV Bharat / city

ಕೋವಿಡ್​ ನಿಯಮ ಉಲ್ಲಂಘಿಸಿದ ಕ್ಲಿನಿಕ್ ಕ್ಲೋಸ್: ಹೆಚ್ಚು ಸ್ಟಿರಾಯ್ಡ್​ ಬಳಕೆ ಆರೋಪ

ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ನಿನ್ನೆ ಬೆಂಗಳೂರು ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೂಡಲಪಾಳ್ಯದ ಸಾಗರ್ ಕ್ಲಿನಿಕ್‌ನ ಮಾಲೀಕ ಡಾ. ರಾಜುರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.‌ ಇದರ ಬೆನ್ನಲ್ಲೇ ಕೆಪಿಎಂಇ ಕಾಯ್ದೆಯಡಿ ಕ್ಲಿನಿಕ್ ಕೂಡ ಮುಚ್ಚುವಂತೆ ಆದೇಶಿಸಲಾಗಿತ್ತು. ಇಂದು ಕ್ಲಿನಿಕ್ ಕ್ಲೋಸ್ ಮಾಡಲು ಹೋದ ಅಧಿಕಾರಿಗಳಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

covid-rules-violated-clinic-closed-in-bangalore
ಕ್ಲಿನಿಕ್ ಕ್ಲೋಸ್
author img

By

Published : May 18, 2021, 11:20 PM IST

ಬೆಂಗಳೂರು: ನಿಯಮ ಉಲ್ಲಂಘನೆ ಮಾಡಿದ್ದ ಕ್ಲಿನಿಕ್​ ಮುಚ್ಚಿಸಲು ಹೋದ ಅಧಿಕಾರಿಗಳಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆದಿದೆ.

ಕೋವಿಡ್​ ನಿಯಮ ಉಲ್ಲಂಘನೆ ಮಾಡಿದ್ದ ಕ್ಲಿನಿಕ್ ಕ್ಲೋಸ್

ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ನಿನ್ನೆ ಬೆಂಗಳೂರು ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೂಡಲಪಾಳ್ಯದ ಸಾಗರ್ ಕ್ಲಿನಿಕ್‌ನ ಮಾಲೀಕ ಡಾ. ರಾಜುರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.‌ ಇದರ ಬೆನ್ನಲ್ಲೇ ಕೆಪಿಎಂಇ ಕಾಯ್ದೆಯಡಿ ಕ್ಲಿನಿಕ್ ಕೂಡ ಮುಚ್ಚುವಂತೆ ಆದೇಶಿಸಲಾಗಿತ್ತು. ಇಂದು ಕ್ಲಿನಿಕ್ ಕ್ಲೋಸ್ ಮಾಡಲು ಹೋದ ಅಧಿಕಾರಿಗಳಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

ಪ್ರಕರಣದ ಹಿನ್ನೆಲೆ

ಕ್ಲಿನಿಕ್‌ನಲ್ಲಿ ವೈದ್ಯರು ಮಾಸ್ಕ್‌, ಸ್ಯಾನಿಟೈಜರ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ರಾಜ್ಯ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020 (2020 ರ ಕರ್ನಾಟಕ ಸುಗ್ರೀವಾಜ್ಞೆ 07) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಕೋವಿಡ್-19ನ ನಿಯಮಗಳ ಉಲ್ಲಂಘನೆ ಆಗಿತ್ತು. ಆದ್ದರಿಂದ ಸಮಜಾಯಿಷಿ ನೀಡುವಂತೆ 1 ದಿನದ ಗಡುವು ನೀಡಲಾಗಿತ್ತು. ಇದಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಡಾ. ರಾಜು, ತಪ್ಪಾಗಿದೆ ಇನ್ನೊಮ್ಮೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಬಿಬಿಎಂಪಿ, ಸ್ಥಳೀಯ ಪೊಲೀಸರಿಗೆ ಮತ್ತು ಡಿಹೆಚ್​ಓಗೆ ಪತ್ರ ರವಾನಿಸಿದ್ದರು.

covid-rules-violated-clinic-closed-in-bangalore
ಆದೇಶ ಪ್ರತಿ

ಕೆಪಿಎಂಇ ಲೈಸನ್ಸ್ ತೋರಿಸುತ್ತಿಲ್ಲ

ಆದ್ರೆ ಡಾ. ರಾಜು ಹಲವು ರೋಗಿಗಳಿಗೆ ಸ್ಟೀರಾಯ್ಡ್ ಕೊಟ್ಟಿರುವುದು ಗಮನಕ್ಕೆ ಬಂದಿದೆ.‌ ಹಾಗೆಯೇ ಕೋವಿಡ್​ಗೆ ರೋಗಕ್ಕೆ ಬಳಸಿದ್ದ ಸಿರಿಂಜ್, ಇತರೆ ವೈದ್ಯಕೀಯ ತ್ಯಾಜ್ಯವನ್ನ ಡಿಸ್ಪೋಸ್ ಮಾಡದೇ ಇರುವುದು ಬೆಳಕಿಗೆ ಬಂದಿತ್ತು. ಕ್ಲಿನಿಕ್ ಒಳಗೆಯೇ ಸ್ವತಃ ಮೆಡಿಕಲ್ ಸ್ಟೋರ್ ಕೂಡ ಇಟ್ಟಿಕೊಂಡಿದ್ದರು. ಜನರು ಓಡಾಡಲು ಆಗದೇ ಇಕ್ಕಟ್ಟಿನಲ್ಲಿ ಇದೆ. ಕೆಪಿಎಂಇ ಲೈಸನ್ಸ್ ತೋರಿಸುತ್ತಿಲ್ಲ. ಲೈಸನ್ಸ್ ರೀನಿವಲ್ ಮಾಡಿರುವುದು ಅನುಮಾನ. ಹೀಗಾಗಿ ಅನುಮತಿ ಪಡೆಯದೇ ಮತ್ತೆ ಕ್ಲಿನಿಕ್ ಓಪನ್ ಮಾಡುವಂತಿಲ್ಲ. ಈಗಾಗಲೇ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಅಂತ ಡಿಹೆಚ್​ಓ ಗೋಳೂರು ಶ್ರೀನಿವಾಸ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.