ಬೆಂಗಳೂರು: ನಗರದಲ್ಲಿಂದು 1,156 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದೆ.
ಬೊಮ್ಮನಹಳ್ಳಿಯಲ್ಲಿ 134, ದಾಸರಹಳ್ಳಿ 52, ಬೆಂಗಳೂರು ಪೂರ್ವ 114, ಮಹಾದೇವಪುರ 157, ಆರ್‌ಆರ್ ನಗರ 102, ಬೆಂಗಳೂರು ದಕ್ಷಿಣ 118, ಬೆಂಗಳೂರು ಪಶ್ಚಿಮ 101, ಯಲಹಂಕದಲ್ಲಿ 82 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 144 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ನಿನ್ನೆ ನಗರದಲ್ಲಿ 1,209 ಪ್ರಕರಣಗಳು ಪತ್ತೆಯಾಗಿದ್ದವು. 17 ಮಂದಿ ಮೃತಪಟ್ಟಿದ್ದರು. ಈವರೆಗೆ 78,943 ಸಕ್ರಿಯ ಪ್ರಕರಣಗಳಿವೆ. ಜೂನ್ 16ರಂದು 60,478 ಜನರಿಗೆ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 55,929 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 2.3ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 1.59 ಇದೆ.
ನಿನ್ನೆಯವರೆಗೂ (ಗುರುವಾರ) ಒಟ್ಟು 14,107 ಹಾಸಿಗೆಗಳ ಪೈಕಿ 12,000 ಹಾಸಿಗೆಗಳು ಲಭ್ಯ ಇವೆ. 2,107 ಹಾಸಿಗೆಗಳು ಭರ್ತಿಯಾಗಿವೆ. ಐಸಿಯುನಲ್ಲಿ 241, ಐಸಿಯು + ವೆಂಟಿಲೇಟರ್ನಲ್ಲಿ 383 ಹಾಗೂ ಹೆಚ್ಡಿಯುನಲ್ಲಿ 850 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: KRS Dam: ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ