ETV Bharat / city

ಕೋವಿಡ್ 19 ರಣಕೇಕೆ: ಕೇರಳ ಹಿಂದಿಕ್ಕಿ ಟಾಪ್​ 10 ಸ್ಥಾನಕ್ಕೆ ಜಿಗಿಯಲಿದೆಯಾ ಕರ್ನಾಟಕ? - ಕೇರಳದಲ್ಲಿ ಕೊರೊನಾ ನಿಯಂತ್ರಣ

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಕ್ಕದ ಕೇರಳ ರಾಜ್ಯವನ್ನು ಮೀರಿ ಒಂದೆರಡು ದಿನದಲ್ಲಿ ಕರ್ನಾಟಕ 10ನೇ ಸ್ಥಾನಕ್ಕೆ ಜಿಗಿಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

Covid 19 Karnataka will take over Kerala
ಕೇರಳವನ್ನೂ ಹಿಂದಿಕ್ಕಲಿದೆ ಕರ್ನಾಟಕದ ಕೋವಿಡ್ 19 ರಣಕೇಕೆ..!
author img

By

Published : Apr 19, 2020, 2:56 PM IST

ಬೆಂಗಳೂರು: ಕೇರಳದಲ್ಲಿ ಅತ್ಯಂತ ಬಿಗಿ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆ, ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಏಪ್ರಿಲ್ ಆರಂಭದಲ್ಲಿ ಕರ್ನಾಟಕದ ಎರಡರಷ್ಟಿದ್ದ ಕೇರಳ ಸೋಂಕಿತರ ಸಂಖ್ಯೆ ಈಗ ಬಹುತೇಕ ಸಮಸ್ಥಿತಿಗೆ ಬಂದು ತಲುಪಿದೆ.

Covid 19 Karnataka will take over Kerala
ಕೇರಳವನ್ನೂ ಹಿಂದಿಕ್ಕಲಿದೆ ಕರ್ನಾಟಕದ ಕೋವಿಡ್ 19 ರಣಕೇಕೆ..!

ಆರಂಭದಲ್ಲಿ ಮಹಾರಾಷ್ಟ್ರ ಇದ್ದರೆ, ಎರಡನೇ ಸ್ಥಾನ ಕೇರಳ ಹಾಗೂ ಮೂರನೇ ಸ್ಥಾನ ಕರ್ನಾಟಕದ್ದಾಗಿತ್ತು. ಮೊದಲ ಸಾವು ಸಹ ಕರ್ನಾಟಕದಲ್ಲಿ ಸಂಭವಿಸಿತ್ತು. ನಂತರದ ದಿನಗಳಲ್ಲಿ ಉತ್ತರ ಭಾರತದ ಕೆಲ ರಾಜ್ಯ ಹಾಗೂ ತಮಿಳುನಾಡಿನಲ್ಲಿ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಏರಿಕೆ ಕಂಡವು. ಇದರಿಂದ ಕರ್ನಾಟಕದ ಸ್ಥಾನ ಕುಸಿಯುತ್ತಾ ಬಂದು, ಒಂದು ಹಂತದಲ್ಲಿ ವಾರದ ಹಿಂದೆ 12ನೇ ಸ್ಥಾನ ತಲುಪಿತ್ತು. ಆದರೆ ಇದೀಗ ಮತ್ತೆ 11ಕ್ಕೆ ತಲುಪಿದ್ದು, ಇನ್ನೇನು ಒಂದೆರಡು ದಿನದಲ್ಲಿ ಕೇರಳವನ್ನೂ ಮೀರಿ 10ನೇ ಸ್ಥಾನಕ್ಕೆ ನೆಗೆಯುವಲ್ಲಿ ಸಂಶಯವಿಲ್ಲ.

ಏಪ್ರಿಲ್​ 1ರ ವೇಳೆಗೆ ರಾಜ್ಯದ ಹಾಗೂ ಕೇರಳದ ಕೋವಿಡ್-19 ಪ್ರಕರಣಗಳ ನಡುವೆ ಭಾರಿ ಅಂತರವಿತ್ತು. ಆರಂಭದಲ್ಲಿ ಮಹಾರಾಷ್ಟ್ರ ನಂತರ ಕೇರಳ ರಾಜ್ಯವೇ ಅತಿ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣ ಹೊಂದಿತ್ತು. ಆದರೆ, ನಂತರದ ದಿನಗಳಲ್ಲಿ ತಬ್ಲಿಘಿಗಳಿಂದಾಗಿ ಇತರೆ ರಾಜ್ಯಗಳು ಮೇಲ್ಪಂಕ್ತಿಗೆ ಬಂದವು. ಇಂದಿಗೂ ಅವು ಮುಂಚೂಣಿಯಲ್ಲೇ ಇದ್ದು,ಕೇರಳ ಅತ್ಯಂಥ ಉತ್ತಮ ಪ್ರಗತಿ ಸಾಧಿಸಿದೆ.

ತಾಳೆ ಹಾಕಿದರೂ ಕೇರಳ ಮುಂದೆ ಪ್ರಕರಣ ಹೆಚ್ಚಳ, ಗುಣಮುಖರಾಗುವವರು, ಸಾವನ್ನಪ್ಪುತ್ತಿರುವವರು ಯಾವುದೇ ವಿಧದಲ್ಲಿ ಗಮನಿಸಿದರೂ, ಪಕ್ಕದ ಕೇರಳಕ್ಕಿಂತ ಕನಿಷ್ಠ ಸ್ಥಾನದಲ್ಲಿ ಕರ್ನಾಟಕ ಇದೆ. ಉತ್ತರ ಭಾರತದ ರಾಜ್ಯಗಳು, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಕೊಂಚ ಪರವಾಗಿಲ್ಲ ಅನ್ನಿಸಿದರೂ, ಅಪಾಯ ಯಾವಾಗ ಬೇಕಾದರೂ ಹೆಚ್ಚಾಗಬಹುದಾಗಿದೆ. ವಿಶೇಷ ಅಂದರೆ ನಾಳೆಯಿಂದ ಕೇರಳದಲ್ಲಿ ವಾಹನ ಸಂಚಾರ ಮುಕ್ತವಾಗಲಿದೆ. ಅಂಗಡಿ ಮುಂಗಟ್ಟು ತೆರೆಯಲಿದೆ. ಜನಜೀವನ ಸಹಜ ಸ್ಥಿತಿಗೆ ಮರಳಲಿದೆ.

ಕೇರಳದಲ್ಲಿ ಸದ್ಯ,399 ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ 140 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 257 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಸಾವಿನ ಸಂಖ್ಯೆ ಮಾತ್ರ ಕೇವಲ 2. ಇನ್ನು ಕರ್ನಾಟಕದಲ್ಲಿ ಇಂದು ಬೆಳಗ್ಗೆ ನಾಲ್ಕು ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯ 388ಗೆ ತಲುಪಿದೆ. ಇವರಲ್ಲಿ 269 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 105 ಮಂದಿ ಗುಣಮುಖರಾಗಿ ಮನೆ ತಲುಪಿದ್ದಾರೆ. ವಿಪರ್ಯಾಸವೆಂದರೆ 14 ಮಂದಿಯ ಸಾವು ಸಂಭವಿಸಿದೆ.

ಕರ್ನಾಟಕ-ಕೇರಳ ಅಂಕಿಅಂಶ : ಏಪ್ರಿಲ್​ 1ರಿಂದ ರಾಜ್ಯದಲ್ಲಿ ಹಾಗೂ ಕೇರಳದಲ್ಲಿ ದಾಖಲಾದ ಕೊರೊನಾ ಪ್ರಕರಣವನನು ತಾಳೆ ಹಾಕಿ ನೋಡಿದಾಗ ಆಘಾತಕಾರಿ ಬದಲಾವಣೆ ಗೋಚರಿಸುತ್ತಿದೆ. ಎಲ್ಲಿದ್ದ ಕರ್ನಾಟಕ ಎಲ್ಲಿಗೆ ಬಂದು ತಲುಪಿದೆ ಎಂಬ ಮಾಹಿತಿ ಸಿಗುತ್ತದೆ. ಕರ್ನಾಟಕ ಹಾಗೂ ಕೇರಳ ರಾಜ್ಯದ ಅಂಕಿ ಅಂಶ ಹಾಗೂ ಹೆಚ್ಚಳವಾದ ವಿವರ ಇಂತಿದೆ.
ದಿನಾಂಕ ಕರ್ನಾಟಕ ಕೇರಳ
ಏ.1 110 (+9) 265 (+24)
ಏ.2 124 (+14) 286 (+21)
ಏ.3 128(+4) 295(+9)
ಏ.4 144 (+16) 306 (+11)
ಏ.5 151 (+7) 314 (+18)
ಏ.6 163 (+12) 327 (+13)
ಏ.7 175 (+12) 335 (+8)
ಏ.8 181 (+6) 344 (+9)
ಏ.9 197 (+16) 356 (+12)
ಏ.10 207 (+10) 363 (+7)
ಏ.11 215 (+8) 373 (+10)
ಏ.12 232 (+17) 375 (+2)
ಏ.13 247 (+15) 378 (+3)
ಏ.14 260 (+13) 386 (+8)
ಏ.15 279 (+19) 387 (+1)
ಏ.16 315 (+36) 394 (+7)
ಏ.17 359 (+44) 395 (+1)
ಏ.18 384 (+25) 399 (+4)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.