ETV Bharat / city

ನಾಯಕತ್ವಗಳು ಬದಲಾಗದಿದ್ದರೆ ರಾಜ್ಯದಲ್ಲಿ ಆಪ್ ಅಧಿಕಾರಕ್ಕೆ: ಎಚ್ಚರಿಕೆ ನೀಡಿದ ಲೆಹರ್ ಸಿಂಗ್

author img

By

Published : Mar 17, 2022, 5:56 PM IST

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ನಾಯಕತ್ವಗಳು ಬದಲಾವಣೆ ಆಗದೇ ಹೋದರೆ ಈ ಮೂರು ಪಕ್ಷಗಳು ಧೂಳಿಪಟ ಆಗುತ್ತವೆ. ಎಎಪಿ ಬಂದು ಎಲ್ಲರನ್ನೂ ಧೂಳಿಪಟ ಮಾಡುತ್ತದೆ ಎಂದು ವಿಧಾನ ಪರಿಷತ್​ ಸದಸ್ಯ ಲೆಹರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

council-member-lehar-singh-warns-bjp-congress-and-jds
ನಾಯಕತ್ವಗಳು ಬದಲಾಗದಿದ್ದರೆ ರಾಜ್ಯದಲ್ಲಿ ಆಪ್ ಅಧಿಕಾರಕ್ಕೆ: ಎಚ್ಚರಿಕೆ ನೀಡಿದ ಲೆಹರ್ ಸಿಂಗ್

ಬೆಂಗಳೂರು: ರಾಜ್ಯದಲ್ಲಿ ಪ್ರಮುಖವಾಗಿರುವ ಮೂರೂ ಪಕ್ಷಗಳಲ್ಲಿ ನಾಯಕತ್ವಗಳು ಬದಲಾವಣೆ ಆಗದೇ ಹೋದರೆ ಮೂರು ಪಕ್ಷಗಳು ಧೂಳಿಪಟ ಆಗುತ್ತವೆ. ದೆಹಲಿ ರೀತಿ ಆಮ್ ಆದ್ಮಿ ಪಕ್ಷ ಬಂದು ಎಲ್ಲರನ್ನೂ ಧೂಳಿಪಟ ಮಾಡುತ್ತದೆ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​​​ಗೆ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಎಚ್ಚರಿಕೆ ಕೊಟ್ಟರು.

ವಿಧಾನ ಪರಿಷತ್​​ನ ವಿತ್ತೀಯ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದಾಯದ ಭಾಷಣ ಮಾಡಿದರು. ನಾನು 12 ವರ್ಷಗಳಿಂದ ಸದನದಲ್ಲಿದ್ದೇನೆ. ಪಕ್ಷ ನನಗೆ ಎರಡು ಅವಧಿಗೆ ಅವಕಾಶ‌ ಕೊಟ್ಟಿದೆ. ‌ಮತ್ತೆ ನಾನು ಅವಕಾಶ ಕೇಳೋದಿಲ್ಲ. ಆ ನಿರೀಕ್ಷೆಯನ್ನೂ ಇರಿಸಿಕೊಂಡಿಲ್ಲ, ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ಇದೇ ನನ್ನ ಕಡೆಯ ಭಾಷಣ, ಅವಕಾಶ ಕೊಟ್ಟ ಪಕ್ಷದ ನಾಯಕರು, ಸಹಕಾರ ನೀಡಿದ ಸದನದ ಎಲ್ಲ ಸದಸ್ಯರು ಸೇರಿದಂತೆ ಎಲ್ಲರಿಗೂ ತಮ್ಮ ಭಾಷಣದಲ್ಲಿ ಧನ್ಯವಾದ ಎಂದು ಹೇಳಿದರು.

'ಜಾತಿ ಆಧಾರದಲ್ಲಿ ನಿಗಮ-ಮಂಡಳಿಗಳಿಗೆ ನೇಮಕ': ನಂತರ ಬಜೆಟ್ ಮೇಲೆ ಭಾಷಣ ಮಾಡಿದ ಲೆಹರ್ ಸಿಂಗ್, 1995-96 ಸಿದ್ದರಾಮಯ್ಯ ಬಜೆಟ್ ಭಾಷಣ ಓದಿ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಲೆಹರ್ ಸಿಂಗ್, ಅಂದಿನ ಬಜೆಟ್​​ನಲ್ಲಿ ಕಾಂಗ್ರೆಸ್ ವಿರುದ್ಧ ಸಿದ್ದರಾಮಯ್ಯ ಮಾತನಾಡಿದ್ದರು. ನಾವು ಓದುವಾಗ ಯಾವ ಜಾತಿ ಪದ್ಧತಿ ಇರಲಿಲ್ಲ.‌ ಎಲ್ಲರೂ ಒಟ್ಟಾಗಿದ್ದೆವು. ಆದರೆ ಇವತ್ತು ಜಾತಿ ಆಧಾರದಲ್ಲಿ ನಿಗಮ-ಮಂಡಳಿ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಬದಲಾವಣೆ ಆಗಬೇಕು. ಅಭಿವೃದ್ಧಿಗೆ ಕೊಟ್ಟ ಹಣ ಹಗರಣಕ್ಕೆ ಹೋಗುತ್ತದೆ. ಅನೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಕ್ರಮ ಆಗೋ ಕೆಲಸ ಆಗುತ್ತಿಲ್ಲ. ಲೂಟಿ ಹೊಡೆಯೋ ಕೆಲಸ ಇವತ್ತು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಜಾತಿ ಆಧಾರದಲ್ಲಿ ಇವತ್ತು ಬಜೆಟ್ ಆಗುತ್ತಿದೆ. ಈ ವ್ಯವಸ್ಥೆ ಬದಲಾವಣೆ ಆಗಬೇಕು ಎಂದು ಸಲಹೆ ನೀಡಿದರು.

'ಹೊಸಬರಿಗೆ ಅವಕಾಶ ಮಾಡಿಕೊಡಿ': ರಾಜ್ಯದಲ್ಲಿ 3 ಪಕ್ಷಗಳಲ್ಲಿ ನಾಯಕತ್ವಗಳು ಬದಲಾವಣೆ ಆಗದೇ ಹೋದರೆ ಮೂರು ಪಕ್ಷಗಳು ಧೂಳಿಪಟ ಆಗುತ್ತವೆ. ಎಎಪಿ ಬಂದು ಎಲ್ಲರನ್ನೂ ಧೂಳಿಪಟ ಮಾಡುತ್ತದೆ ಎಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಎಚ್ಚರಿಕೆ ಕೊಟ್ಟರು. ಮೂರು ಪಕ್ಷಗಳು ಅಪ್ಪ ಆದ ಮೇಲೆ ಮಕ್ಕಳಿಗೆ ಕೊಡೋ ಸಂಪ್ರದಾಯ ಬಿಡಬೇಕು. ಯುವಕರಿಗೆ, ಹೊಸಬರಿಗೆ ಅವಕಾಶ ಮಾಡಿಕೊಡಿ. ಇಲ್ಲದೇ ಹೋದರೆ ಎಎಪಿ ಕರ್ನಾಟಕದಲ್ಲೂ ಬರುತ್ತದೆ. ಎಲ್ಲಾ ಪಕ್ಷಗಳು ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದರು. ಕಾಶ್ಮೀರ್​ ವಿಷಯ ಪ್ರಸ್ತಾಪಿಸಿ ಮೋದಿ ಸರ್ಕಾರದ ಸಾಧನೆ, ಅಭಿವೃದ್ಧಿ ವಿಷಯಗಳ ಮೇಲೆ ಲೆಹರ್ ಸಿಂಗ್ ಬೆಳಕು ಚೆಲ್ಲಿದರು.

ಇದನ್ನೂ ಓದಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ 1 ಸಾವಿರ ಡಿ ಗ್ರೂಪ್ ನೌಕರರ ನೇಮಕಾತಿ: ಸಚಿವ ಅಶ್ವತ್ಥ ನಾರಾಯಣ

'ಬಿಜೆಪಿಯಿಂದ ಅತ್ಯಾಚಾರ ಆರೋಪಿಗಳ ರಕ್ಷಣೆ': ಇದಕ್ಕೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವು ಮಾಡಿದಾಕ್ಷಣ ಅಲ್ಲಿ ಭಯೋತ್ಪಾದಕ ಚಟುವಟಿಕೆ ನಿಂತಿದೆ ಅಂತಲ್ಲ, ಈಗಲೂ ನಡೆಯುತ್ತಿದೆ. ಲಡಾಖ್​​​ನಲ್ಲಿ ಚೀನಾ ದೊಡ್ಡ ಪ್ರಮಾಣದ ಭೂಮಿಯನ್ನು ಅತಿಕ್ರಮಿಸಿಕೊಂಡಿದೆಯಲ್ಲಾ? ಏನು ಮಾಡುತ್ತಿದೆ ಮೋದಿ ಸರ್ಕಾರ ಎಂದು ಪ್ರಶ್ನಿಸಿದರು. ಏಳು ವರ್ಷದ ಮುಸ್ಲಿಂ ಬಾಲಕಿ ಮೇಲೆ ಎಂಟು ಜನರು ಅತ್ಯಾಚಾರ ನಡೆಸಿದ್ದಾರೆ. ಆದರೆ ಅತ್ಯಾಚಾರಿಗಳ ವಿರುದ್ಧ ದೂರು ದಾಖಲಾಗದಂತೆ ಬಿಜೆಪಿಯ ಸಚಿವರೊಬ್ಬರೇ ನೋಡಿಕೊಂಡಿದ್ದಾರೆ. ಇದು ಬಿಜೆಪಿಯವರ ಧೋರಣೆ, ಇದರಲ್ಲಿ ಆರೋಪಿಗಳ ರಕ್ಷಣೆ ಮಾಡಲಾಗಿದೆ ಎಂದು ದೂರಿದರು.

ಈ ವೇಳೆ ಕಾಶ್ಮೀರ್​ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ಬನ್ನಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ ನಾವು ಚರ್ಚೆಗೆ ಸಿದ್ಧ. ನಾವು ಸಹಿ ಮಾಡುತ್ತೇವೆ. ನೀವೂ ಸಹಿ ಮಾಡಿ. ಚರ್ಚೆ ಮಾಡೋಣ ಎಂದು ಬಿಜೆಪಿ ಸದಸ್ಯರಿಗೆ ಹರಿಪ್ರಸಾದ್ ಸವಾಲೆಸೆದರು. ವಿಷಯಾಂತರ ಆಗುತ್ತಿರುವುದನ್ನು ಅರಿತ ಸಭಾಪತಿ ಬಸವರಾಜ ಹೊರಟ್ಟಿ ಇತರ ಸದಸ್ಯರ ಮಾತಿಗೆ ಬ್ರೇಕ್ ಹಾಕಿ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಭಾಷಣಕ್ಕೆ ಮತ್ತೆ ಅವಕಾಶ ಕಲ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.