ETV Bharat / city

ಕೊರೊನಾ ಭೀತಿ: ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಹೈಕೋರ್ಟ್​ ಸೂಚನೆ - ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಜೆ ನೇತೃತ್ವದಲ್ಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಇಂದು ಮಧ್ಯಾಹ್ನ ತುರ್ತು ಸಭೆ ನಡೆಸಿದರು.

High Court
ಹೈಕೋರ್ಟ್
author img

By

Published : Mar 16, 2020, 4:10 PM IST

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ರಾಜ್ಯದ ಎಲ್ಲಾ ಕೋರ್ಟ್​ಗಳು ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಸಾಮಾನ್ಯ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ಹಿರಿಯ ನ್ಯಾಯಮೂರ್ತಿಗಳು ಮತ್ತು ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಜೆ ನೇತೃತ್ವದಲ್ಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಇಂದು ಮಧ್ಯಾಹ್ನ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಕೊರೊನಾ ವೈರಸ್ ಹರಡದಂತೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎಂಬುದನ್ನು ಚರ್ಚಿಸಿದ ಬಳಿಕ‌, ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಮತ್ತು ವಕೀಲರು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಯಿತು.

ರಾಜ್ಯದ ಕೋರ್ಟ್​ಗಳು ಮತ್ತು ವಕೀಲರಿಗೆ ನೀಡಿರುವ ನಿರ್ದೇಶನಗಳು:

1) ತುರ್ತು ಪ್ರಕರಣಗಳನ್ನು ಮಾತ್ರ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಕಕ್ಷೀದಾರರನ್ನು ಹೊರಗಿಟ್ಟು ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಸಬಹುದು.

2) ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಮುಂದಿನ ಆದೇಶದವೆರೆಗೆ ವಕೀಲರು, ಕಕ್ಷೀದಾರರು ಹಾಜರಾಗಬಾರದು.

3) ವಕೀಲರು ಅಥವಾ ಕಕ್ಷೀದಾರರು ಯಾವುದೇ ಪ್ರಕರಣಗಳಲ್ಲಿ ಹಾಜರಾಗದಿದ್ದರೆ ನ್ಯಾಯಾಲಯಗಳು ಯಾವುದೇ ವ್ಯತಿರಿಕ್ತ ಆದೇಶ ಹೊರಡಿಸುವಂತಿಲ್ಲ.

4) ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಹಾಜರಾಗದಿದ್ದರೂ ಹಾಗೂ ವಕೀಲರು ವಿನಾಯಿತಿ ಅರ್ಜಿ (EP) ಹಾಕದಿದ್ದರೂ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ವಾರೆಂಟ್ ಹೊರಡಿಸಬಾರದು.

5) ಮುಂದಿನ ಆದೇಶದವರೆಗೂ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸಬಾರದು ಮತ್ತು ವಿಚಾರಣೆಗೆ ಸಾಕ್ಷಿಗಳನ್ನು ಕರೆಸಬಾರದು.

6) ಸಿವಿಲ್ ನ್ಯಾಯಾಲಯಗಳು ಮಧ್ಯಂತರ ಆದೇಶವನ್ನು ಸಂಬಂಧಿಸಿದ ವಕೀಲರ ಅನುಪಸ್ಥಿತಿಯಲ್ಲಿಯೂ ನೀಡಬಹುದು.

7) ಮುಂದಿನ ಆದೇಶದವರೆಗೆ ವಕೀಲರು ತಮ್ಮ ಕಕ್ಷೀದಾರರನ್ನು ನ್ಯಾಯಾಲಯಕ್ಕೆ ಹಾಜರಾಗದಂತೆ ಸ್ಪಷ್ಟವಾಗಿ ತಿಳಿಸಿಕೊಡಬೇಕು.

8) ವಕೀಲರು ತಮ್ಮ ಕೆಲಸ ಮುಗಿಯುತ್ತಿದ್ದಂತೆ ನ್ಯಾಯಾಲಯದ ಆವರಣದಿಂದ ತಮ್ಮ ಮನೆ-ಕಚೇರಿಗೆ ತ್ವರಿತವಾಗಿ ತೆರಳಬೇಕು.

9) ಈ ಎಲ್ಲಾ ನಿರ್ದೇಶನಗಳನ್ನು ಹೈಕೋರ್ಟ್​ನ ಮುಂದಿನ ಆದೇಶದವರೆಗೆ ಎಲ್ಲಾ ಕೋಟ ಗಳು ಮತ್ತು ವಕೀಲರು ಕಡ್ಡಾಯವಾಗಿ ಪಾಲಿಸುವುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.