ಬೆಂಗಳೂರು: ರಾಜ್ಯದಲ್ಲಿಂದು 7,710 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5,48,557ಕ್ಕೆ ಏರಿಕೆ ಆಗಿದೆ.
ಇಂದು 65 ಸೋಂಕಿತರು ಕೊರೊನಾ ಬಲಿಯಾಗಿದ್ದು, ಮೃತರ ಸಂಖ್ಯೆ 8,331ಕ್ಕೆ ಏರಿಕೆ ಆಗಿದೆ. 6,748 ಜನರು ಗುಣಮುಖರಾಗಿದ್ದು, ಈವರೆಗೆ 4,44,658ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 95,549 ಸಕ್ರಿಯ ಪ್ರಕರಣಗಳಿದ್ದು, 827 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಇಂದು 888 ಪ್ರಯಾಣಿಕರು ಆಗಮಿಸಿದ್ದು, ಅವರನ್ನ ತಪಾಸಣೆಗೆ ಒಳಪಡಿಸಲಾಗಿದೆ. 4,83,698 ಜನರನ್ನ ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಸಂಕಷ್ಟ: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಅಗತ್ಯನಾ : ರಾಜ್ಯದಲ್ಲಿ ಕೊರೊನಾ ನಿಯಂತ್ರಣ ತಪ್ಪಿದ್ದು, ಮತ್ತೆ ಲಾಕ್ಡೌನ್ ಅಗತ್ಯವಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ. ಮಂಜುನಾಥ್, ಮತ್ತೆ ಲಾಕ್ಡೌನ್ ಮಾಡುವ ವಿಚಾರದ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಮತ್ತೊಮ್ಮೆ ಲಾಕ್ಡೌನ್ ಮಾಡಿದರೆ ಪ್ರಯೋಜನವಾಗುವುದಿಲ್ಲ. ಒಂದು ದಿನ ಅಥವಾ ಎರಡು ದಿನದ ಲಾಕ್ಡೌನ್ನಿಂದ ಉಪಯೋಗ ಇಲ್ಲ. ಬದಲಿಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ಗಳ್ಲಿ ನಿರ್ಬಂಧ ಮಾಡಬಹುದು.
ಅಂದರೆ ಎಲ್ಲಿ ಹೆಚ್ಚು ಸೋಂಕು ಇರುತ್ತೋ ಆ ಪ್ರದೇಶಗಳಲ್ಲಿ ವಾಣಿಜ್ಯ ವಹಿವಾಟಿಗೆ ಸಮಯ ವಿಧಿಸಬೇಕು. ಇನ್ನು ಈ ವರ್ಷ ಅಂತೂ ಲಸಿಕೆ ಬರುವುದಿಲ್ಲ. ಹೀಗಾಗಿ ಮಾಸ್ಕ್ ಹಾಕುವುದು ಕಡ್ಡಾಯ ಮಾಡಬೇಕು. ಮಾತನಾಡುವಾಗ ಮಾಸ್ಕ್ ಹಾಕಿಕೊಂಡಿರಬೇಕು. ಆದರೆ, ನಮ್ಮ ಜನ ಉಲ್ಟಾ ಮಾಡ್ತಾರೆ. ಮಾತನಾಡುವಾಗ ಮಾಸ್ಕ್ ತೆಗೆಯುತ್ತಾರೆ. ಸರಿಯಾಗಿ ಮಾಸ್ಕ್ ಹಾಕದೇ ಇದ್ದರೂ ದಂಡ ವಿಧಿಸಬೇಕು ಅಂತ ಹೇಳಿದ್ದಾರೆ.
ಅಂದುಕೊಂಡದ್ದಕ್ಕಿಂತ ಹೆಚ್ಚು ವ್ಯಾಪ್ತಿಸುತ್ತಿದೆ ಕೊರೊನಾ ಸೋಂಕು: ನಾವು ಅಂದುಕೊಂಡಿದ್ದಕ್ಕಿಂತ ಜಾಸ್ತಿ ಸೋಂಕು ವ್ಯಾಪಿಸ್ತಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಸೋಕಿತರ ಸಂಖ್ಯೆ 6 ಲಕ್ಷ ಆಗುತ್ತೆ ಅನ್ನೋ ನಿರೀಕ್ಷೆಯಿತ್ತು. ಅದೇ ರೀತಿ ಸೋಂಕಿನ ಏರಿಕೆ ಆಗ್ತಿರೋದನ್ನ ನೋಡ್ತಿದ್ದೇವೆ. ಅಕ್ಟೋಬರ್ ತಿಂಗಳ ಮಧ್ಯಂತರದಿಂದ ಸೋಂಕು ಕಡಿಮೆ ಆಗಬಹುದು ಅನ್ನೋ ನಿರೀಕ್ಷೆ ಇದೆ. ಆಗಲು ಕಡಿಮೆ ಆಗದಿದ್ರೆ ಮುಂದೆ ಹೇಗೆ ಅಂತ ನೋಡಬೇಕು. ಯಾವುದೇ ವೈರಸ್ನಿಂದ ಸೋಂಕು ಹರಡಿದ್ರೂ ಆರು ತಿಂಗಳ ಬಳಿಕ ಒಂದು ಹಂತಕ್ಕೆ ಬರಬೇಕು. ಆದರೆ, ನಮ್ಮಲ್ಲಿ 6 ತಿಂಗಳು ಕಳೆದಿದೆ. ಆದರೂ ಸೋಂಕು ಕಡಿಮೆ ಆಗಿಲ್ಲ. ಹೋಂ ಐಸೋಲೇಷನ್ನಲ್ಲಿ ಇರುವವರು ಎಚ್ಚರಿಕೆ ವಹಿಸಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಆಗ್ತಿದೆ ಅಂತ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗಳಿಗೆ ದಾಖಲಾಗುವುದು ಉತ್ತಮ ಅಂತ ಜಯದೇವ ಆಸ್ಪತ್ರೆ ಎಂ.ಡಿ.ಡಾ. ಮಂಜುನಾಥ್ ತಿಳಿದ್ದಾರೆ..