ETV Bharat / city

ಲಾಕ್‌ಡೌನ್ ಅವಧಿಯಲ್ಲಿ ಕೊರೊನಾ ಪರೀಕ್ಷೆ ಹೆಚ್ಚಳ.. ಏರುಗತಿಯಲ್ಲಿದೆ ಸೋಂಕಿತರ ಪ್ರಮಾಣ - ಲಾಕ್​​ಡೌನ್​ನಲ್ಲಿ ಹೆಚ್ಚಾದ ಸೋಂಕಿತರ ಸಂಖ್ಯೆ

ಈಗಾಗಲೇ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿದೆ. ಹೋ ಐಸೋಲೇಶನ್ ಸರಿಯಾಗಿ ಮಾಡುತ್ತಿಲ್ಲ. ಕಂಟೇನ್ಮೆಂಟ್ ಮಾಡುತ್ತಿಲ್ಲ. ನಗರದ ಎಂಟು ವಲಯಗಳಲ್ಲಿ ಎಂಟು ನಿಯಮ ಇದೆ. ಇಂದಿಗೂ ಬೆಡ್ ಸೌಲಭ್ಯ ಇಲ್ಲ. ಟೆಸ್ಟ್ ರಿಪೋರ್ಟ್ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ..

corona-infected-cases-reduced-in-lockdwon
ಲಾಕ್ ಡೌನ್
author img

By

Published : Jul 24, 2020, 9:57 PM IST

ಬೆಂಗಳೂರು : ತಜ್ಞರು ಹಾಗೂ ಸಾರ್ವಜನಿಕ ವಲಯದ ಒತ್ತಡದಿಂದ ಒಂದು ವಾರ ಯಶಸ್ವಿಯಾಗಿ ಬೆಂಗಳೂರಲ್ಲಿ ಲಾಕ್‌ಡೌನ್ ಜಾರಿ ಮಾಡಿಲಾಗಿತ್ತಾದ್ರೂ ಮಧ್ಯಾಹ್ನ 12 ಗಂಟೆಯವರೆಗೆ ಜನ ಓಡಾಡುತ್ತಿದ್ದರಿಂದ ಲಾಕ್​ಡೌನ್​ಗೆ ಜನ ಬೆಂಬಲ ಸಿಗದೆ ಕೊರೊನಾ ಹರಡುವ ಚೈನ್ ಬ್ರೇಕ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಇದರಿಂದ ಲಾಕ್‌ಡೌನ್​ನ ದಿನದಲ್ಲಿ 15,241 ಕೋವಿಡ್ ಪ್ರಕರಣ ದೃಢಪಟ್ಟಿವೆ. ಕೊರೊನಾ ಹರಡುವಿಕೆ ಹತೋಟಿಗೆ ಬಾರದ ಕಾರಣ 15-07-2020 ರಿಂದ 22-07-2020ರವರೆಗೆ ಇದ್ದ ಲಾಕ್​ಡೌನ್‌ನ ಜುಲೈ 21ರ ಮಂಗಳವಾರದಂದೇ ಅಂತ್ಯಗೊಳಿಸಲಾಯಿತು. ಮತ್ತೆ ಯಾವುದೇ ಲಾಕ್‌ಡೌನ್ ಮಾಡುವುದಿಲ್ಲ, ಜನರೇ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿಗಳೂ ಕೂಡಾ ಘೋಷಣೆ ಮಾಡಿದರು.

ಜುಲೈ 15 ಬುಧವಾರದಂದು 22,944 ಇದ್ದ ಪ್ರಕರಣ , ಮಂಗಳವಾರ 21 ರಂದು 34,943ಕ್ಕೆ ಏರಿದೆ. ಒಂದು ವಾರದ ಹಿಂದೆ 437 ಇದ್ದ ಮೃತರ ಸಂಖ್ಯೆ 720ಕ್ಕೆ ಏರಿದೆ. ಹಾಗೆಯೇ ಗುಣಮುಖರಾದವರ ಸಂಖ್ಯೆ 5455 ರಿಂದ 7,476ಕ್ಕೆ ಏರಿಕೆಯಾಗಿದೆ.

ದಿನಾಂಕ ಸೋಂಕಿತರು ಮರಣ

  • 15-07-2020 1975 60
  • 16-07-2020 2344 70
  • 17-7-2020 2208 75
  • 18-07-2020 2125 49
  • 19-07-2020 2156 36
  • 20-07-2020- 1452 31
  • 21-07-2020- 1714 22
  • 22-07-2020 2050 15

ಹೀಗೆ ಲಾಕ್‌ಡೌನ್ ಬಳಿಕವೂ ಮೂರು ದಿನದಿಂದಲೂ ಎರಡು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣ ದೃಢಪಡುತ್ತಿವೆ.

ಲಾಕ್‌ಡೌನ್ ಅವಧಿಯಲ್ಲಿ ಪರೀಕ್ಷೆ ಹೆಚ್ಚಳ: ಒಂದು ವಾರ ಲಾಕ್‌ಡೌನ್ ಮಾಡುವುದರಿಂದ ಬೆಂಗಳೂರಿನ ಆರೋಗ್ಯ ವಿಭಾಗದ ಅಧಿಕಾರಿಗಳು ವ್ಯವಸ್ಥೆಗಳನ್ನು ಸಜ್ಜುಮಾಡಿಕೊಳ್ಳಬಹುದು. ಬೆಡ್, ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ನಿರ್ವಹಣೆಯನ್ನು ಚುರುಕು ಮಾಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಲಾಕ್‌ಡೌನ್ ಬಳಿಕವೂ ಜನ ಬೆಡ್​ಗಾಗಿ ಪರದಾಡುತ್ತಿದ್ದಾರೆ. ಆ್ಯಂಬುಲೆನ್ಸ್ ಕೂಡಾ ಸಿಗುತ್ತಿಲ್ಲ.

ಆದರೆ, ಒಂದು ವಾರದಲ್ಲಿ ಬಿಐಇಸಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ತ್ವರಿತವಾಗಿ ನಡೆಯಲು ಸಾಧ್ಯವಾಯಿತು. ಹಾಗೆಯೇ ಆಂಟಿಜೆನ್ ರ್ಯಾಪಿಡ್ ಟೆಸ್ಟ್‌ಗಳನ್ನು ಪಾಲಿಕೆಯ ಪ್ರೈಮರಿ ಹೆಲ್ತ್ ಕೇರ್ ಸೆಂಟರ್‌ಗಳಲ್ಲಿ, ಫೀವರ್ ಕ್ಲಿನಿಕ್, ಕಂಟೇನ್ಮೆಂಟ್ ಪ್ರದೇಶದಲ್ಲಿ ಮಾಡಲು ಚಾಲನೆ ನೀಡಲಾಯಿತು. ತ್ವರಿತ ಕೋವಿಡ್ ರಿಸಲ್ಟ್ ಪತ್ತೆಯಾಗುವುದರಿಂದ ಹೆಚ್ಚೆಚ್ಚು ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ದಿನಕ್ಕೆ ಹತ್ತು ಸಾವಿರ ಟೆಸ್ಟ್ ಮಾಡುವ ಗುರಿಯನ್ನು ಪಾಲಿಕೆ ಹಾಕಿಕೊಂಡಿದೆ. ಐವತ್ತು ಸಾವಿರ ಆಂಟಿಜನ್ ಟೆಸ್ಟ್ ಕಿಟ್‌ಗಳನ್ನು ಸರಬರಾಜು ಮಾಡಲಾಗಿದೆ.

ಇದಲ್ಲದೆ ಪ್ರತಿ ವಲಯದಲ್ಲಿ ಕೋವಿಡ್ ಕಮಾಂಡ್ ಸೆಂಟರ್​ಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಪ್ರತಿ ವಲಯದಲ್ಲಿ ಬರುವ ಕೋವಿಡ್ ಪ್ರಕರಣ ಉಸ್ತುವಾರಿ ನೋಡಿಕೊಳ್ಳಲು ಆಸ್ಪತ್ರೆ-ಆ್ಯಂಬುಲೆನ್ಸ್ ಒದಗಿಸಲು, ಹೋಂ ಐಸೋಲೇಶನ್ ಮಾಡಲು ಹಾಗೂ ಆಹಾರ ಧಾನ್ಯ ವಿತರಿಸಲು ಕಮಾಂಡ್ ಸೆಂಟರ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಲಾಕ್‌ಡೌನ್ ವಿಫಲ- ಕಮ್ಯುನಿಟಿ ಸ್ಪ್ರೆಡ್ ತಡೆಯಲಿಲ್ಲ : ಲಾಕ್‌ಡೌನ್‌ಗೆ ಬಿಬಿಎಂಪಿಯ ವಿರೋಧ ಪಕ್ಷಗಳೂ ಒತ್ತಾಯಿಸಿದ್ದವು. ವಾರ್ಡ್‌ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯ ಸಿಗದೆ ಸಾಕಷ್ಟು ಮಂದಿ ರಸ್ತೆಯಲ್ಲಿ, ಮನೆಗಳಲ್ಲೇ ಮೃತಪಡುತ್ತಿದ್ದರು. ಹೀಗಾಗಿ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಲಾಕ್‌ಡೌನ್‌ಗೆ ಮನವಿ ಮಾಡಲಾಗಿತ್ತು. ಆದರೆ, ಒಂದು ವಾರದ ಲಾಕ್‌ಡೌನ್‌ನಲ್ಲಿ ಅಗತ್ಯ ಸೌಲಭ್ಯ ಸಿದ್ಧತೆ ಮಾಡಿಕೊಳ್ಳುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಅಬ್ದುಲ್ ವಾಜಿದ್ ತಿಳಿಸಿದರು.

ಈಗಾಗಲೇ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿದೆ. ಹೋ ಐಸೋಲೇಶನ್ ಸರಿಯಾಗಿ ಮಾಡುತ್ತಿಲ್ಲ. ಕಂಟೇನ್ಮೆಂಟ್ ಮಾಡುತ್ತಿಲ್ಲ ನಗರದ ಎಂಟು ವಲಯಗಳಲ್ಲಿ ಎಂಟು ನಿಯಮ ಇದೆ. ಇಂದಿಗೂ ಬೆಡ್ ಸೌಲಭ್ಯ ಇಲ್ಲ. ಟೆಸ್ಟ್ ರಿಪೋರ್ಟ್ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಕಂಟೇನ್ಮೆಂಟ್ ಪ್ರದೇಶದ ಜನರಿಗೆ ಆಹಾರ ಧಾನ್ಯವೂ ಸಿಗುತ್ತಿಲ್ಲ ಎಂದು ಆರೋಪಿಸಿದರು.

ನಾಲ್ಕು ತಿಂಗಳಿಂದ ರಜೆ ಇಲ್ಲ : ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಸೇರಿ ಪ್ರತೀ ವಿಭಾಗದವರನ್ನೂ ಕೋವಿಡ್ ಕೆಲಸಕ್ಕೆ ನಿಯೋಜಿಸಲಾಗಿದೆ. ಆದರೆ, ದಿನಕಳೆದಂತೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ಅಧಿಕಾರಿಗಳು, ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ನಾಲ್ಕು ತಿಂಗಳಿಂದ ರಜೆ ಇಲ್ಲ. ಮಧ್ಯರಾತ್ರಿವರೆಗೂ ಮನೆಯಿಂದ ಹೊರಗೇ ಇದ್ದು ಕೆಲಸ ಮಾಡುತ್ತಿದ್ದೇವೆ.

ಪ್ರತೀ ದಿನ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಪ್ರತೀ ಆಸ್ಪತ್ರೆಗೆ ಹೋಗಿ ಮೃತದೇಹವನ್ನು ರಿಲೀಸ್ ಮಾಡಿ, ವಿದ್ಯುತ್ ಚಿತಾಗಾರದಲ್ಲಿ ಸುಡುವವರೆಗೆ ಜವಾಬ್ದಾರಿಯಿರುವುರಿಂದ ಮಧ್ಯರಾತ್ರಿವರೆಗೂ ಕೆಲಸ ಆಗುತ್ತಿದೆ ಎಂದು ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.