ಬೆಂಗಳೂರು: ವಿಧಾನಸೌಧದಲ್ಲಿಂದು ಸಂಜೆ ನಡೆದ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಡಿಸಿಎಂ ಅಶ್ವತ್ ನಾರಾಯಣ್ ಮಾತಿಗೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಅಸಮಾಧಾನಗೊಂಡು ಕಣ್ಣೀರು ಹಾಕಿದರು ಎಂದು ಹೇಳಲಾಗ್ತಿದೆ.
ಕೊರೊನಾ ಸಂಬಂಧ ನಡೆದ ತುರ್ತು ಸಭೆಯಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಅವರು, ಪಾಸ್ ನೀಡುವ ವಿಚಾರವಾಗಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರನ್ನು ತರಾಟೆಗೆ ತೆಗೆದಕೊಂಡಿದ್ದಾರೆ. ಅಲ್ಲದೆ ಕೆಲ ಅಂಗಡಿಗಳನ್ನು ಬೇಕಂತಲೇ ತೆರೆಯಿಸಿ ಕಮಿಷನ್ ಪಡೆಯುತ್ತಿರುವುದಾಗಿ ಆರೋಪಿಸಿದ್ರು ಎನ್ನಲಾಗ್ತಿದೆ.
ಇದರಿಂದ ಬೇಸರಗೊಂಡ ಭಾಸ್ಕರ್ ರಾವ್ ಅವರು ನನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ಸಿಎಂರಲ್ಲಿ ಕೇಳಿಕೊಂಡಿದ್ದಾರೆ. ಈ ವೇಳೆ ಭಾಸ್ಕರ್ ರಾವ್ರನ್ನು ಸಮಾಧಾನ ಪಡಿಸಲು ಯತ್ನಿಸಲಾಗಿದೆ. ಆದ್ರೆ ಅವರು ಮನನೊಂದು ಸಭೆಯಿಂದ ಹೊರನಡೆದು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದರ ಜೊತೆಗೆ ಅಗತ್ಯ ಸೇವೆ ಪೂರೈಕೆದಾರರಿಗೆ ಪಾಸ್ ನೀಡುವ ವಿಚಾರವಾಗಿ ಭಾಸ್ಕರ್ ರಾವ್ ಕಾರ್ಯವೈಖರಿ ಬಗ್ಗೆ ಡಿಸಿಎಂ ಗರಂ ಆಗಿದ್ದರು. ಪಾಸ್ನ್ನು ಸರಿಯಾಗಿ ವಿತರಿಸದ ಬಗ್ಗೆ ಖಾರವಾಗಿ ಸಭೆಯಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗ್ತಿದೆ.