ETV Bharat / city

ಇಂಟರ್ನ್ಸ್ ವಿದ್ಯಾರ್ಥಿಗಳಿಗೆ ಕೊರೊನಾ ಡ್ಯೂಟಿ.. ಸೋಂಕು ತಗುಲಿದ್ರೆ ರಾಮಯ್ಯ ಆಸ್ಪತ್ರೆಗೆ ಸಂಬಂಧವಿಲ್ವಂತೆ!!

ಪ್ರತಿಷ್ಠಿತ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂಟರ್ನ್ಸ್ ವಿದ್ಯಾರ್ಥಿಗಳಿಗೆ ಕೊರೊನಾ ಡ್ಯೂಟಿ ಮಾಡಲು ಸೂಚಿಸಿದ್ದಾರೆ. ಆದರೆ, ಮಾಸ್ಕ್, ಪಿಪಿಇ ಕಿಟ್ ಸೇರಿ ಎಲ್ಲಾ ಮೆಡಿಕಲ್ ಕಿಟ್‌ಗಳನ್ನು ಸ್ವಂತ ಖರ್ಚಿನಲ್ಲೇ ಭರಿಸಬೇಕಂತೆ‌‌ ಮತ್ತು ಒಂದು ವೇಳೆ ಸೋಂಕು ತಗುಲಿದ್ರೆ ಅದಕ್ಕೆ ಆಡಳಿತ ಮಂಡಳಿ ಜವಾಬ್ದಾರಿ ಅಲ್ಲ ಎಂದು ತಿಳಿಸಿವೆ..

corona-duty-for-interns-students
ರಾಮಯ್ಯ ಆಸ್ಪತ್ರೆ
author img

By

Published : Jul 11, 2020, 3:35 PM IST

ಬೆಂಗಳೂರು: ಕೊರೊನಾ ಬಂದ ಮೇಲೆ ಖಾಸಗಿ ಆಸ್ಪತ್ರೆಗಳ ಹೊಸ ಹೊಸ ಮುಖಗಳು ಅನಾವರಣವಾಗುತ್ತಲೇ ಇವೆ. ಇದೀಗ ತಮ್ಮಲ್ಲಿರುವ ಇಂಟರ್ನ್ಸ್​ ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿ ಬಳಸಿಕೊಳ್ಳಲು ಪ್ರಾರಂಭ ಮಾಡಿದ್ದು, ಕೊರೊನಾ ಡ್ಯೂಟಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿವೆ.

ಇಂಟರ್ನ್ಸ್ ವಿದ್ಯಾರ್ಥಿಗಳಿಗೆ ಕೊರೊನಾ ಡ್ಯೂಟಿ

ನಗರದ ಪ್ರತಿಷ್ಠಿತ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂಟರ್ನ್ಸ್ ವಿದ್ಯಾರ್ಥಿಗಳಿಗೆ ಕೊರೊನಾ ಡ್ಯೂಟಿ ಮಾಡಲು ಸೂಚಿಸಿದ್ದಾರೆ. ಆದರೆ, ಮಾಸ್ಕ್, ಪಿಪಿಇ ಕಿಟ್ ಸೇರಿ ಎಲ್ಲಾ ಮೆಡಿಕಲ್ ಕಿಟ್‌ಗಳನ್ನು ಸ್ವಂತ ಖರ್ಚಿನಲ್ಲೇ ಭರಿಸಬೇಕಂತೆ‌‌ ಮತ್ತು ಒಂದು ವೇಳೆ ಸೋಂಕು ತಗುಲಿದ್ರೆ ಅದಕ್ಕೆ ಆಡಳಿತ ಮಂಡಳಿ ಜವಾಬ್ದಾರಿ ಅಲ್ಲ ಎಂದು ತಿಳಿಸಿವೆ. ಬದಲಿಗೆ ಕೆಲಸ ಮಾಡುವ ವೈದ್ಯ ವಿದ್ಯಾರ್ಥಿಗಳೇ ತಮ್ಮ ಕ್ವಾರಂಟೈನ್​ನ ಸಂಪೂರ್ಣ ವೆಚ್ಚ ಭರಿಸಬೇಕು‌‌. ಇಲ್ಲಾಂದ್ರೆ ಇಂಟರ್ನಲ್​ ಮಾರ್ಕ್ಸ್ ಕೊಡುವುದು ಅನುಮಾನವಂತೆ‌.

ಸದ್ಯ ಇಲ್ಲದಸಲ್ಲದ ರೂಲ್ಸ್​ಗಳನ್ನು ಮಾಡಿರುವ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದು, ಈ ಬಗ್ಗೆ ಗಮನ ಹರಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.