ETV Bharat / city

ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ ಚರ್ಚೆಗೆ ಕಾಂಗ್ರೆಸ್ ಪಟ್ಟು; ಪರಿಷತ್‌ನಲ್ಲಿ ಕೆಲಕಾಲ ಗದ್ದಲ - ಕಾಂಗ್ರೆಸ್‌

ನೂತನ ಶಿಕ್ಷಣ ನೀತಿ ವಿರೋಧಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ವಿಷಯ ಪರಿಷತ್‌ ಕಲಾಪದಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು.

congress mlc's protest in legislative council
ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ ಚರ್ಚೆಗೆ ಕಾಂಗ್ರೆಸ್ ಪಟ್ಟು; ಪರಿಷತ್‌ನಲ್ಲಿ ಕೆಲಕಾಲ ಗದ್ದಲ
author img

By

Published : Sep 15, 2021, 2:24 PM IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ನಡೆದ ಪ್ರತಿಭೆಟನೆ ವೇಳೆ ಲಾಠಿ ಪ್ರಹಾರ ನಡೆಸಿದ ಘಟನೆ ಬಗ್ಗೆ ಪರಿಷತ್‌ ಕಲಾಪದಲ್ಲಿ ಪ್ರಸ್ತಾಪ ಆಯಿತು. ಲಾಠಿ ಪ್ರಹಾರದ ವಿಷಯದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು. ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದು ರೂಲಿಂಗ್ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಬಗ್ಗೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ನಾರಾಯಣಸ್ವಾಮಿ ಪ್ರಸ್ತಾಪಿಸಿದರು. ಸದನದಲ್ಲಿ ವಿಚಾರ ಪ್ರಸ್ತಾಪಿಸುತ್ತಿದಂತೆ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು.

ಎಲ್ಲರೂ ಎದ್ದು ನಿಂತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಸಭಾಪತಿಗಳ ಮಾತಿಗೂ ಅವಕಾಶ ಕೊಡದ ಸದಸ್ಯರು, ಚರ್ಚೆಗೆ ಅವಕಾಶ ಕೊಡಿ ಅಂತ ಪಟ್ಟು ಹಿಡಿದರು‌. ಇದನ್ನು ನಿರಾಕರಿಸಿದ ಸಭಾಪತಿಗಳು, ಶೂನ್ಯವೇಳೆಯಲ್ಲಿ ಈ ಚರ್ಚೆ ಬೇಡ, ಬೇರೆ ರೂಪದಲ್ಲಿ ತನ್ನಿ ಎಂದು ರೂಲಿಂಗ್ ನೀಡಿದರು.

ಯಾದಗಿರಿ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಪ್ರಸ್ತಾಪ

ಯಾದಗಿರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ‌ ಪ್ರಕರಣವನ್ನು ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ಈ ವಿಡಿಯೋ ನೋಡಿ ಯಾದಗಿರಿ ಜನ ಗಾಬರಿಯಾಗಿದ್ದಾರೆ. ಮಹಿಳೆ ಯಾರು ಎಂದು ಪತ್ತೆ ಮಾಡಬೇಕು? ಆರೋಪಿಗಳು ಯಾರು ಎಂದು‌ ಪತ್ತೆ ಮಾಡಿ ಬಂಧಿಸಲು ಒತ್ತಾಯಿಸಿದರು. ಗೃಹ ‌ಸಚಿವ ಆರಗ ಜ್ಞಾನೇಂದ್ರ ‌ಅವರಿಂದ ಉತ್ತರ ಕೂಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.