ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಧಾನಿಯ ಗಾಯತ್ರಿನಗರದ ಫುಡ್ ಕಿಟ್ ವಿತರಣೆ ಸಂದರ್ಭದಲ್ಲಿ, ಯಡಿಯೂರಪ್ಪ ನವರಿಗೆ ವಯಸ್ಸಾಗಿದೆ ಸಿಎಂ ಸ್ಥಾನ ದಿಂದ ಕೆಳಗೆ ಇಳಿಯಲಿ ಎನ್ನುವ ಹೆಚ್ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಬಿಜೆಪಿಯ ಆಂತರಿಕ ಪಕ್ಷದ ವಿಚಾರ, ನಮಗೂ ಅವರ ಪಕ್ಷದ ವಿಚಾರಕ್ಕೂ ಸಂಬಂಧವಿಲ್ಲ. ಬಿಜೆಪಿ ಬಿಎಸ್ವೈ ನಾದರೂ ಇಟ್ಟುಕೊಳ್ಳಲಿ, ವಿಶ್ವನಾಥ್ ರನ್ನಾದರು ಸಿಎಂ ಮಾಡಲಿ, ಈಶ್ವರಪ್ಪನವರಾನ್ನಾದರೂ ಮಾಡಿಕೊಳ್ಳಲಿ. ನಮಗೆ ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಯಬೇಕು ಅಷ್ಟೇ ಎಂದರು.
ಓದಿ: ಹೆಚ್. ವಿಶ್ವನಾಥ್ ಪೂರ್ತಿ ಹುಚ್ಚರು, ಶಕುನಿ ಪಾತ್ರ ಚೆನ್ನಾಗಿ ಮಾಡ್ತಾರೆ: ಎಸ್. ಆರ್. ವಿಶ್ವನಾಥ್ ಕಿಡಿ
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬಿಎಸ್ವೈ ಸರ್ಕಾರ ಕೊರೊನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿದೆ ಎನ್ನುತ್ತಾರೆ. ಆಮ್ಲಜನಕದ ವಿಚಾರದಲ್ಲಿ 36 ಜನರ ಮರ್ಡರ್ ಮಾಡಿದ್ದಾರೆ. ಇಲ್ಲಿ ಒಬ್ಬರ ಮೇಲೂ ಎಫ್ಐಆರ್ ಹಾಕಿಲ್ಲ ಎಂದು ಹರಿಹಾಯ್ದು, ಇದು ಉತ್ತಮ ಕೆಲಸವೇ ಎಂದು ಟಾಂಗ್ ನೀಡಿದರು.
ಆಕ್ಸಿಜನ್, ಐಸಿಯು ಬೆಡ್ ಇಲ್ಲದೇ ಜನ ಸತ್ತಿದ್ದಾರೆ. ಇದು ಉತ್ತಮ ಕೊರೊನಾ ನಿರ್ವಹಣೆಯೇ.? ಎಲ್ಲದಕ್ಕೂ ಕೋರ್ಟ್ ಮಧ್ಯಪ್ರವೇಶಿಸಿ ನಿಮಗೆ ತರಾಟೆಗೆ ತೆಗೆದುಕೊಂಡಿರುವುದು ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ವಾಗ್ಧಾಳಿ ನಡೆಸಿದರು. ಕೇಂದ್ರ ಸರ್ಕಾರ ಕೊರೊನಾದಿಂದ ಸತ್ತವರಿಗೆ ಪರಿಹಾರ ಕೊಡುವ ವಿಚಾರ ಮಾಡುತ್ತಿಲ್ಲ ಎಂದರು.
ಪಕ್ಷದ ಆಂತರಿಕ ವಿಚಾರ:
ಸಿಎಂ ಬದಲಾವಣೆ ಮತ್ತು ಅಪಸ್ವರದ ವಿಚಾರವಾಗಿ ವಿಶ್ವನಾಥ್ ಒಬ್ಬರೇ ಈ ಮಾತನ್ನು ಆಡಿಲ್ಲ. ಯತ್ನಾಳ್, ಈಶ್ವರಪ್ಪ ಬೇರೆ ಬೇರೆ ಸಚಿವರು ಕೂಡ ಮಾತನಾಡಿದ್ದಾರೆ. ಹೀಗಿದ್ದು ಪಾರ್ಟಿ ಆಂತರಿಕ ವಿಚಾರಕ್ಕೆ ಹೆಚ್ಚು ಮಾತಾನಾಡಲ್ಲ ಎಂದರು.
ಕುರ್ಚಿಗೋಸ್ಕರ ಕಚ್ಚಾಟ:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ರಾಜಕೀಯ ಬೆಳವಣಿಗೆಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿ, ಈಗ ನಡೆಯುತ್ತಿರುವುದು ಅಧಿಕಾರಕ್ಕೆ ನಡೆಯುತ್ತಿರುವ ಕಚ್ಚಾಟ, ವಿಶ್ವನಾಥ್ ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡುತ್ತಿದ್ದು, ಮಗ ಕೂಡ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಈಗ ಹೈಕಮಾಂಡ್ ತೀರ್ಮಾನ ಮಾಡಲಿ, ಅರುಣ್ ಸಿಂಗ್ ಬಂದಿದ್ದಾರಲ್ಲ ಅವರ ಬಳಿ ಹೇಳಲಿ. ಕರ್ನಾಟಕದಲ್ಲಿ ಆಡಳಿತವೇ ಇಲ್ಲ ಎಂದು ದೂರು ನೀಡಲಿ ಎಂದರು.