ETV Bharat / city

ಚುನಾವಣೆಯಲ್ಲಿ 'ಕೈ' ಸೋಲು: ಕೆಪಿಸಿಸಿ ವಿಸರ್ಜಿಸಿದ ಹೈಕಮಾಂಡ್! - undefined

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಿಸರ್ಜಿಸಲು ಖಡಕ್ ಆದೇಶ ಹೊರಡಿಸಿದ್ದಾರೆ.

congress
author img

By

Published : Jun 19, 2019, 2:39 PM IST

Updated : Jun 19, 2019, 3:53 PM IST

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನದ ಕಾರಣದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಿಸರ್ಜಿಸಲು ಹೈಕಮಾಂಡ್​ ಖಡಕ್ ಆದೇಶ ಹೊರಡಿಸಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಸಂಬಂಧ ಇಂದು ಆದೇಶ ಹೊರಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ ಇಬ್ಬರನ್ನು ಹೊರತುಪಡಿಸಿ ಇಡೀ ಕೆಪಿಸಿಸಿ ಸಮಿತಿಯನ್ನು ವಿಸರ್ಜಿಸಲು ಆದೇಶ ಹೊರಡಿಸಿದ್ದಾರೆ.

ಕೆಪಿಸಿಸಿ ವಿಸರ್ಜನೆ

ಈ ಆದೇಶದಿಂದಾಗಿ ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಮುಖಂಡರಾದ ಬಿ.ಎಲ್. ಶಂಕರ್, ವಿ. ಆರ್. ಸುದರ್ಶನ್, ಬಿ.ಕೆ. ಚಂದ್ರಶೇಖರ್, ವೀರಣ್ಣ ಮತ್ತಿಕಟ್ಟಿ, ಸಾಂಗ್ಲಿಯಾನ, ರಾಣಿ ಸತೀಶ್, ಎಲ್ ಹನುಮಂತಯ್ಯ, ಡಿ. ಆರ್. ಪಾಟೀಲ್, ಮೋಟಮ್ಮ, ಕೆ.ಸಿ. ಕೊಂಡಯ್ಯ, ಕೃಷ್ಣಂರಾಜು, ಆತ್ಮಾನಂದ, ಕೆ. ಗೋವಿಂದರಾಜು, ಮುಖ್ಯಮಂತ್ರಿ ಚಂದ್ರು, ಶಫಿಉಲ್ಲಾ, ವಿ. ವೈ. ಘೋರ್ಪಡೆ ಸೇರಿದಂತೆ 310 ಮಂದಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಇವರ ಸ್ಥಾನಕ್ಕೆ ಹೊಸಬರ ನೇಮಕ ಆಗಲಿದೆ ಎನ್ನಲಾಗಿದೆ.

ಚುನಾವಣೆಗೆ ಮುನ್ನ ರಚನೆಯಾಗಿದ್ದ ಕೆಲ ಸಮಿತಿಗಳೂ ಸೇರಿದಂತೆ, ಮೂರು ವರ್ಷದಿಂದೀಚೆಗೆ ರಚನೆಯಾಗಿದ್ದ ಎಲ್ಲ ಸಮಿತಿಗಳನ್ನು ವಿಸರ್ಜಿಸಲಾಗಿದೆ. ಹೊಸ ಸಮಿತಿ ರಚನೆ ಮಾಡಲು ಎಐಸಿಸಿ ಸೂಚನೆ ನೀಡಿದ್ದು , ಇದರ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಈ ನಿಟ್ಟಿನಲ್ಲಿ ಕಾರ್ಯ ನಿರತರಾಗಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದ್ದು, ಯುವ ಶಕ್ತಿಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆಯಿದೆ.

Intro:newsBody:ಕೈನಲ್ಲಿ ಮೇಜರ್ ಸರ್ಜರಿ: ಅಧ್ಯಕ್ಷರು ಕಾರ್ಯಾಧ್ಯಕ್ಷರ ಹೊರತುಪಡಿಸಿ ಕೆಪಿಸಿಸಿ ಸಮಿತಿಯನ್ನು ಸಂಪೂರ್ಣ ವಿಸರ್ಜಿಸಿದ ಎಐಸಿಸಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನದ ಕಾರಣದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯನ್ನು ವಿಸರ್ಜಿಸಿ ಎಐಸಿಸಿ ಆದೇಶ ಹೊರಡಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಈ ಸಂಬಂಧ ಇಂದು ಆದೇಶ ಹೊರಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಅವರಿಬ್ಬರನ್ನು ಹೊರತುಪಡಿಸಿ ಕೆಪಿಸಿಸಿ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಿಂದಾಗಿ ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಮುಖಂಡರಾದ ಬಿ.ಎಲ್. ಶಂಕರ್, ವಿ. ಆರ್. ಸುದರ್ಶನ್, ಬಿ.ಕೆ. ಚಂದ್ರಶೇಕರ್, ವೀರಣ್ಣ ಮತ್ತಿಕಟ್ಟಿ, ಸಾಂಗ್ಲಿಯಾನಾ, ರಾಣಿ ಸತೀಶ್, ಎಲ್ ಹನುಮಂತಯ್ಯ, ಡಿ. ಆರ್. ಪಾಟೀಲ್, ಮೋಟಮ್ಮ, ಕೆ.ಸಿ. ಕೊಂಡಯ್ಯ, ಕೃಷ್ಣಂರಾಜು, ಆತ್ಮಾನಂದ, ಕೆ. ಗೋವಿಂದರಾಜು, ಮುಖ್ಯಮಂತ್ರಿ ಚಂದ್ರು, ಷಫಿಉಲ್ಲಾ, ವಿ. ವೈ. ಘೋರ್ಪಡೆ ಸೇರಿದಂತೆ 150 ಕ್ಕೂ ಹೆಚ್ಚು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತಿತರ ಸದಸ್ಯರು ಸೇರಿದಂತೆ 310 ಮಂದಿ ಅಧಿಕಾರ ಕಳೆದುಕೊಳ್ಳಲಿದ್ದು ಇವರ ಸ್ಥಾನಕ್ಕೆ ಹೊಸಬರ ನೇಮಕ ಆಗಲಿದೆ.
ಚುನಾವಣೆಗೆ ಮುನ್ನ ರಚನೆಯಾಗಿದ್ದ ಕೆಲ ಸಮಿತಿಗಳೂ ಸೇರಿದಂತೆ ಮೂರುವರ್ಷ ಈಚೆ ರಚನೆಯಾಗಿದ್ದ ಎಲ್ಲಾ ಸಮಿತಿ ವಿಸರ್ಜಿಸಲಾಗಿದೆ. ಹೊಸ ಸಮಿತಿ ರಚನೆ ಮಾಡಲು ಎಐಸಿಸಿ ಸೂಚನೆ ನೀಡಿದ್ದು ಹಿಂದಿನಿಂದಲೇ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಈ ನಿಟ್ಟಿನಲ್ಲಿ ಕಾರ್ಯ ನಿರತರಾಗಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದ್ದು ಯುವ ಶಕ್ತಿಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಹೊಂದಲಾಗಿದೆ.
Conclusion:news
Last Updated : Jun 19, 2019, 3:53 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.