ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೈಕಮಾಂಡ್ಗೆ ನೀಡಿದ್ದಾರೆ ಎನ್ನಲಾದ ಕಪ್ಪ ಕಾಣಿಕೆಯ ಡೈರಿ ಪ್ರಕರಣದ ತನಿಖೆಯನ್ನು ನೂತನ ಲೋಕಪಾಲರು ನಡೆಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆಗ್ರಹಿಸಿದ್ದಾರೆ.
1800 ಕೋಟಿ ರೂ. ಭ್ರಷ್ಟಾಚಾರದ ಡೈರಿ ಆರೋಪ ಸಂಬಂಧ ಪ್ರಧಾನಿ ಮೋದಿ ಸ್ಪಷ್ಟೀಕರಣ ನೀಡಬೇಕು. ಬಿಜೆಪಿ ಅಗ್ರ ನಾಯಕರು ಡೈರಿಯಲ್ಲಿ ಉಲ್ಲೇಖಿಸಿದಷ್ಟು ಹಣವನ್ನು ಪಡೆದಿದ್ದಾರೋ, ಇಲ್ಲವೋ? ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಡೈರಿಯಲ್ಲಿ ಉಲ್ಲೇಖಿಸಲಾದ ನಾಯಕರು ಮುಂದೆ ಬಂದು ತಮ್ಮ ಮೇಲಿನ ಆರೋಪದ ಬಗ್ಗೆ ಉತ್ತರಿಸಬೇಕು. ಜತೆಗೆ ತನಿಖೆಗೂ ಒಳಪಡಬೇಕು ಎಂದು ಒತ್ತಾಯಿಸಿದ್ದಾರೆ.
ನೂತನ ಲೋಕಪಾಲರು ಈ ಪ್ರಕರಣದ ತನಿಖೆ ನಡೆಸಬೇಕು. ಯಡಿಯೂರಪ್ಪ ಮೈತ್ರಿ ಸರ್ಕಾರ ಬೀಳಿಸಲು ಕರ್ನಾಟಕ ಶಾಸಕರಿಗೆ ಹಣದ ಆಮಿಷವೊಡ್ಡುವ ಮೂಲಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಡೈರಿ ಪ್ರಕರಣದಿಂದ ಬಿಜೆಪಿ ಸ್ವಯಂಘೋಷಿತ ಚೌಕಿದಾರರು-ಕಳ್ಳರು ಎಂಬುದು ಸ್ಪಷ್ಟವಾಗಿದೆ ಎಂದು ವೇಣುಗೋಪಾಲ್ ಕಿಡಿಕಾರಿದ್ದಾರೆ.