ETV Bharat / city

ಸಿಎಂ ಶೀಘ್ರ ಗುಣಮುಖರಾಗುವಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್​​ ನಾಯಕರಿಂದ ಹಾರೈಕೆ - BJP leaders wish CM a speedy recovery

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ..

ಕಾಂಗ್ರೆಸ್,ಬಿಜೆಪಿ,ಜೆಡಿಎ
ಕಾಂಗ್ರೆಸ್,ಬಿಜೆಪಿ,ಜೆಡಿಎ
author img

By

Published : Apr 16, 2021, 5:01 PM IST

Updated : Apr 16, 2021, 6:53 PM IST

ಬೆಂಗಳೂರು : ಎರಡನೇ ಬಾರಿ ಕೋವಿಡ್ ಸೋಂಕಿಗೀಡಾಗಿರುವ ಸಿಎಂ ಬಿಎಸ್​ವೈ ಶೀಘ್ರ ಗುಣಮುಖರಾಗುವಂತೆ ಕಾಂಗ್ರೆಸ್,ಬಿಜೆಪಿ,ಜೆಡಿಎಸ್​​ ನಾಯಕರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಹಾರೈಸಿದ್ದಾರೆ.

  • ಮುಖ್ಯಮಂತ್ರಿ @BSYBJP ಅವರಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಶೀಘ್ರ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇನೆ.

    — Siddaramaiah (@siddaramaiah) April 16, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಎರಡನೇ ಬಾರಿ ಕೊರೊನಾ ಸೋಂಕಿಗೀಡಾಗಿರುವ ಸುದ್ದಿ ತಿಳಿದು ಬೇಸರವಾಯಿತು. ರಾಜಕೀಯದ ಬಗ್ಗೆ ಕೆಲ ದಿನಗಳ ಕಾಲ ತಲೆಕೆಡಿಸಿಕೊಳ್ಳದೆ ಆರೋಗ್ಯದ ಕಡೆ ಗಮನ ಹರಿಸಿ. ನಿರ್ಲಕ್ಷ್ಯ ಮಾಡದೆ ಚಿಕಿತ್ಸೆಗೆ ಸಹಕರಿಸಿ ಶೀಘ್ರ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿ ಸಿಎಂ ಕೋವಿಡ್​ನಿಂದ ಶೀಘ್ರ ಗುಣಮುಖರಾಗಿ, ಆರೋಗ್ಯವಂತರಾಗಲಿ ಎಂದು ಹಾರೈಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿ, ಸಿಎಂ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಸುದ್ದಿ ತಿಳಿದು ಬೇಸರವಾಯಿತು. ಮುಖ್ಯಮಂತ್ರಿಗಳು ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.

ಬಿಜೆಪಿ ನಾಯಕರ ಸರಣಿ ಟ್ವೀಟ್​ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲಿ, ರಾಜ್ಯದ ಆಡಳಿತ ಮತ್ತು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗುವಂತಾಗಲಿ ಎಂದು ಹಾರೈಸಿದ್ದಾರೆ.

  • ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರು ಶೀಘ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಲಿ ಎಂದು ಆಶಿಸುತ್ತೇನೆ.

    ನಿಮ್ಮ ಉತ್ತಮ ಆರೋಗ್ಯಕ್ಕಾಗಿ ರಾಜ್ಯದ ಜನತೆಯ ಪ್ರಾರ್ಥನೆ ನಿಮ್ಮೊಂದಿಗಿದೆ. @CMofKarnataka https://t.co/fK4kRxvydQ

    — Dr. Ashwathnarayan C. N. (@drashwathcn) April 16, 2021 " class="align-text-top noRightClick twitterSection" data=" ">

ಡಿಸಿಎಂ ಲಕ್ಷ್ಮಣ ಸವದಿ ಟ್ವೀಟ್ ಮಾಡಿ, ಮುಖ್ಯಮಂತ್ರಿಗಳು ಬೇಗನೆ ಗುಣಮುಖರಾಗಿ ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  • ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಕೋವಿಡ್ ಸೋಂಕು ದೃಡಪಟ್ಟಿರುವ ವಿಷಯ ತಿಳಿದು ಆಘಾತವಾಯಿತು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ನಾಡಿನ ಸಮಸ್ತ ಜನರ ಹಾರೈಕೆಯಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    — Nalinkumar Kateel (@nalinkateel) April 16, 2021 " class="align-text-top noRightClick twitterSection" data=" ">

ಡಿಸಿಎಂ ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಸೋಂಕಿನಿಂದ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ರಾಜ್ಯದ ಜನತೆಯ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದಿದ್ದಾರೆ.

  • ಕೊರೊನಾ ಸೋಂಕು ಪೀಡಿತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.
    ಕರೋನಾದಿಂದ ಚೇತರಿಸಿಕೊಂಡು ಎಂದಿನಂತೆ ಆಡಳಿತದಲ್ಲಿ ಸಕ್ರಿಯರಾಗುವಂತೆ ಭಗವಂತನಲ್ಲಿ ಕೋರುತ್ತೇನೆ.

    — H D Kumaraswamy (@hd_kumaraswamy) April 16, 2021 " class="align-text-top noRightClick twitterSection" data=" ">

ಸಚಿವ ಕೆ.ಎಸ್.ಈಶ್ವರಪ್ಪ ಟ್ವೀಟ್ ಮಾಡಿ, ರೈತ ಹೋರಾಟಗಾರ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್‌ ಎಂಬ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ. ನಿರಂತರವಾಗಿ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಶೀಘ್ರ ಗುಣಮುಖರಾಗಿ ಜನಸೇವೆಗೆ ಮರುಳುವಂತಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಜೆಡಿಎಸ್​ ನಾಯಕರ ಹಾರೈಕೆ : ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಹೆಚ್​ಡಿಕೆ ಟ್ವೀಟ್​​ ಮಾಡಿ, ಕೊರೊನಾದಿಂದ ಚೇತರಿಸಿಕೊಂಡು ಎಂದಿನಂತೆ ಆಡಳಿತದಲ್ಲಿ ಸಕ್ರಿಯರಾಗುವಂತೆ ಭಗವಂತನಲ್ಲಿ ಕೋರುತ್ತೇನೆ ಎಂದು ಹೇಳಿದ್ದಾರೆ.

ಸುರೇಶ್ ಕುಮಾರ್ ಹಾರೈಕೆ: ನಾಡಿನ ಜನಸೇವೆಯ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗನೆ ಚೇತರಿಸಿಕೊಂಡು ಕರ್ತವ್ಯಕ್ಕೆ ಮರಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾರೈಸಿದ್ದಾರೆ. ತಮಗೆ ಎರಡನೇ ಬಾರಿಗೆ ಕೊರೊನಾ ಬಾಧಿಸಿರುವುದು ಗೊತ್ತಾಗಿ ತುಂಬಾ ಆಘಾತವಾಯಿತು. ತಾವು ವಯಸ್ಸನ್ನೂ ಲೆಕ್ಕಿಸದೇ ಹಗಲಿರುಳೆಂಬ ಭೇದವಿಲ್ಲದೆ ಜನಸೇವೆಯಲ್ಲಿ ತೊಡಗಿಸಿಕೊಂಡು ನಾಡಿಗಾಗಿ ತಮ್ಮನ್ನು ತಾವು ದುಡಿಸಿಕೊಂಡವರು. ಇಂತಹ ಸಂದರ್ಭದಲ್ಲಿ ತಮಗೆ ಕೊರೊನಾ ಬಾಧಿಸಿರುವುದು ದುರದೃಷ್ಟಕರ ಎಂದಿದ್ದಾರೆ.

Last Updated : Apr 16, 2021, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.