ETV Bharat / city

ಸಿಎಂ, ಡಿಸಿಎಂ ಮನೆಯ ಸಮೀಪವೇ ಪುಡಿ ರೌಡಿಗಳ ಪುಂಡಾಟ: ವಿಡಿಯೋ

ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆಯುತ್ತಿದೆ. ಸ್ವತಃ ಸಿಎಂ ಹಾಗೂ ಡಿಸಿಎಂ ಮನೆಯ ಸಮೀಪದಲ್ಲೇ ಪುಂಡಾಟ ಮೆರೆದಿದ್ದಾರೆ.

dollars colony
ಡಾಲರ್ಸ್​ ಕಾಲೋನಿ
author img

By

Published : Jul 8, 2020, 11:46 AM IST

Updated : Jul 8, 2020, 11:57 AM IST

ಬೆಂಗಳೂರು: ನಗರದಲ್ಲಿ‌ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಸಿಎಂ ಹಾಗೂ ಡಿಸಿಎಂ ಮನೆ ಮುಂದೆ ಪುಂಡಾಟ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಮನೆಯಿಂದ ಕೇವಲ 500 ಮೀಟರ್​ ಅಂತರದಲ್ಲಿ ಈ ಘಟನೆ ನಡೆದಿದೆ.

ಡಾಲರ್ಸ್​ ಕಾಲೋನಿಯಲ್ಲಿ ಪುಡಿ ರೌಡಿಗಳಿಂದ ಹಲ್ಲೆ

ಡಾಲರ್ಸ್ ಕಾಲೋನಿ ಬಳಿ ಹಾಡಹಗಲೇ ನಡುರಸ್ತೆಯಲ್ಲಿ ಕಾರಿನಿಂದ ಬಂದ ಎರಡು ತಂಡಗಳು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು ಆತಂಕ ಮೂಡಿಸಿದೆ. ಈ ದೃಶ್ಯವನ್ನು ಓರ್ವ ಸ್ಥಳೀಯ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಜೊತೆಗೆ ಸಿಎಂ ಮನೆಯ ಬಳಿಯೇ ಈ ರೀತಿ ನಡೆದರೆ ಸಾಮಾನ್ಯ ಜನರ ಪಾಡೇನು? ಎಂಬ ಪ್ರಶ್ನೆ ಕಾಡುತ್ತಿದೆ.

ಕೊರೊನಾ ಸೋಂಕಿನ ಕಾರಣಕ್ಕೆ ಪೊಲೀಸರ ಗಸ್ತು ಕಡಿಮೆ ಮಾಡಿರುವ ಕಾರಣದಿಂದ ಈ ರೀತಿಯಾಗಿ ನಡೆದಿದೆ ಎನ್ನಲಾಗಿದ್ದು, ಸದ್ಯ ವಿಡಿಯೋವನ್ನು ಆಧರಿಸಿ ಸಂಜಯ ನಗರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Last Updated : Jul 8, 2020, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.