ಬೆಂಗಳೂರು: ಮಿಲ್ಕ್ ಶೇಕ್ ಜಿರಳೆ ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹೋಟೆಲ್ ಮಾಲೀಕ ಗ್ರಾಹಕನಿಗೆ ಧಮಕಿ ಹಾಕಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಮಾ.10 ರಂದು ಕೆಂಪಾಪುರದಲ್ಲಿರುವ ಹೋಟೆಲ್ವೊಂದಕ್ಕೆ ಚಾಕೊಲೇಟ್ ಮಿಲ್ಕ್ ಶೇಕ್ ಸೇವಿಸಲು ಕಾರ್ತಿಕ್ ಎನ್ನುವವರು ಹೋಗಿದ್ದಾರೆ. ಮಿಲ್ಕ್ ಶೇಕ್ ಆರ್ಡರ್ ಮಾಡಿ ಸೇವಿಸುವಾಗ ಜಿರಳೆ ಪತ್ತೆಯಾಗಿದೆ. ಇದನ್ನು ನೋಡಿ ಆಕ್ರೋಶಗೊಂಡ ಕಾರ್ತಿಕ್, ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ತದ ನಂತರ ಮಾಲೀಕನಿಗೂ ಪ್ರಶ್ನಿಸಿದ್ದಾರೆ.
![Cockroach Detection in chocolate Milkshake](https://etvbharatimages.akamaized.net/etvbharat/prod-images/6383392_869_6383392_1584015543215.png)
ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.