ETV Bharat / city

ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನ ಇಲ್ಲ: ಬಿಎಸ್​​​ವೈ ಸ್ಪಷ್ಟನೆ - Ministerial post change in Karnataka cabinet expansion

ಸಚಿವ ಜೆ.ಸಿ. ಮಾಧುಸ್ವಾಮಿ, ಕೆ. ಗೋಪಾಲಯ್ಯ ಎಲ್ಲರೂ ಸಮಾಧಾನವಾಗಿದ್ದಾರೆ. ಯಾರಿಗೂ ಅಸಮಾಧಾನವಾಗಿಲ್ಲ. ಸ್ವಲ್ಪ ಸಣ್ಣಪುಟ್ಟ ಅಸಮಾಧಾನವಿರಬಹುದು. ಅವರೆಲ್ಲರನ್ನೂ ಕರೆದು ನಾನು ಮಾತನಾಡುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

Chief Minister BS Yediyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
author img

By

Published : Jan 21, 2021, 5:16 PM IST

ಬೆಂಗಳೂರು: ಖಾತೆ ಹಂಚಿಕೆ ವಿಷಯದಲ್ಲಿ ಸ್ಫೋಟಗೊಂಡಿದ್ದ ಅಸಮಾಧಾನ ಬಹುತೇಕ ಶಮನವಾದಂತೆ ಕಾಣುತ್ತಿದೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ನಗು ಮುಖದಲ್ಲೇ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೆಂಗಲ್ ಗೇಟ್​​ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ...ನನಗೆ ಕೊಟ್ಟಿರುವ ಖಾತೆ ತೃಪ್ತಿ ನೀಡಿದೆ : ಸಚಿವ ನಿರಾಣಿ

ಸಚಿವ ಜೆ.ಸಿ. ಮಾಧುಸ್ವಾಮಿ, ಕೆ. ಗೋಪಾಲಯ್ಯ ಎಲ್ಲರೂ ಸಮಾಧಾನವಾಗಿದ್ದಾರೆ. ಯಾರಿಗೂ ಅಸಮಾಧಾನವಾಗಿಲ್ಲ. ಸ್ವಲ್ಪ ಸಣ್ಣಪುಟ್ಟ ಅಸಮಾಧಾನ ಇರಬಹುದು. ಅವರೆಲ್ಲರನ್ನೂ ಕರೆದು ನಾನು ಮಾತನಾಡುತ್ತೇನೆ. ಸಂಪುಟ ರಚಿಸುವುದು, ಖಾತೆ ಹಂಚುವುದು ಸುಲಭದ ಕೆಲಸವಲ್ಲ. ಅವರು ಸ್ವಲ್ಪ ದಿನ ಕೆಲಸ ಮಾಡಲಿ. ಆ ಇಲಾಖೆ ಸರಿಯಾಗಲಿಲ್ಲ ಅಂದರೆ ಆಮೇಲೆ ಉತ್ತಮ ಖಾತೆ ನೀಡೋಣ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಸಚಿವರ ಮನವೊಲಿಕೆಗೆ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಅವರನ್ನು ಕಳುಹಿಸಲಾಗಿದೆ. ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಅವರು, ಎಲ್ಲವೂ ಸರಿಯಾಗಿದೆ ಎಂದಷ್ಟೇ ಹೇಳಿ ಅಲ್ಲಿಂದ ಹೊರಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.