ಬೆಂಗಳೂರು: ಜೂನ್ 14 ರಿಂದ 21 ರವರೆಗೆ ಅನ್ವಯವಾಗುವಂತೆ ಪಾಸಿಟಿವಿಟಿ ದರ ಕಡಿಮೆ ಇರುವ ಕಡೆ ಲಾಕ್ಡೌನ್ನಲ್ಲಿ ಕೆಲ ವಿನಾಯಿತಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರೆಯಲಿದೆ, ಸಾರ್ವಜನಿಕ ಸಾರಿಗೆ ಸೇವೆಗೆ ನಿರ್ಬಂಧ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮೇರೆಗೆ ಕೆಲ ಸಡಿಲಿಕೆ ಮಾಡಲು ನಿರ್ಧಾರಿಸಲಾಗಿದೆ. ಪಾಸಿಟಿವಿಟಿ ದರ ಹೆಚ್ಚಿರುವ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ , ದಕ್ಷಿಣ ಕನ್ನಡ, ಕೊಡಗು, ಮಂಡ್ಯ, ಬೆಳಗಾವಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಜೊತೆ ಸಮಾಲೋಚಿಸಿ ಇನ್ನೂ ಹೆಚ್ಚಿನ ಕಠಿಣ ಕ್ರಮಕ್ಕೆ ಅಧಿಕಾರ ನೀಡಲಾಗಿದೆ ಎಂದರು. ಉಳಿದ ಜಿಲ್ಲೆಗಳಲ್ಲಿ ಜೂನ್ 14 ರಿಂದ 21 ರವರೆಗೆ ಲಾಕ್ ಡೌನ್ ಇದ್ದರೂ ಕೆಲ ವಿನಾಯಿತಿ ನೀಡಲಾಗುತ್ತದೆ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆ ಹೊರತು ಉಳಿದ ಕಡೆ ವಿನಾಯಿತಿ ನೀಡಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಯಾವುದಕ್ಕೆ ವಿನಾಯಿತಿ:
• ಎಲ್ಲ ಕಾರ್ಖಾನೆಯಲ್ಲಿ ಶೇ. 50ರಷ್ಟು ಸಿಬ್ಬಂದಿ ಹಾಜರಿಯೊಂದಿಗೆ ಕಾರ್ಯ ನಿರ್ವಹಣೆ
• ಗಾರ್ಮೆಂಟ್ಸ್ ಶೇ. 30 ಸಿಬ್ಬಂದಿಗೆ ಅವಕಾಶ
• ಎಲ್ಲ ಅಗತ್ಯ ಅಂಗಡಿ ಈಗಿರುವ ಸಮಯದ ಬದಲು 6-2 ರವರೆಗೆ ಅವಕಾಶ
• ಎಲ್ಲ ನಿರ್ಮಾಣ ಚಟುವಟುಕೆಗೆ ಅನುಮತಿ
• ನಿರ್ಮಾಣ ಚಟುವಟಿಕೆ ಸಂಬಂಧಿತ ಅಂಗಡಿಗೂ ಅವಕಾಶ
• ಪಾರ್ಕ್ ಗಳು 5-10 ರವರೆಗೆ ಓಪನ್ ಇರಲಿದೆ. ವಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ
• ಬೀದಿಬದಿ ವ್ಯಾಪರಕ್ಕೆ ಬೆಳಗ್ಗೆ 6 ರಿಂದ 2 ಗಂಟೆವರಿಗೆ ಅವಕಾಶ
• ಆಟೋ, ಟ್ಯಾಕ್ಸಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ಒದಗಿಸಲಾಗಿದೆ
• ಪ್ರತಿ ದಿನ ರಾತ್ರಿ 7 - 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ
• ಶುಕ್ರವಾರ ರಾತ್ರಿ 7ರಿಂದ ಸೋಮವಾರ 5 ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿ
- ಅಂತರ್ ಜಿಲ್ಲಾ ಪ್ರಯಾಣಕ್ಕೆ ನಿರ್ಬಂಧ