ETV Bharat / city

ಯಲಹಂಕದಲ್ಲಿ 200 ಆಕ್ಸಿಜನ್ ಬೆಡ್ ಸ್ಥಾಪಿಸಿರುವಂತೆ ಕಲಬುರಗಿಯಲ್ಲೂ ಸ್ಥಾಪಿಸಿ: ಕೇಂದ್ರ ಸಚಿವರಿಗೆ ಬಿಎಸ್​​ವೈ ಮನವಿ - Karnataka oxygen

ಕಲಬುರಗಿಯಲ್ಲೂ ಸಿಎಸ್​ಆರ್ ಮೂಲಕ ಆಕ್ಸಿಜನ್ ಹಾಸಿಗೆಯ ಆಸ್ಪತ್ರೆ ನಿರ್ಮಿಸುವಂತೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್​​ಗೆ ಸಿಎಂ ಬಿಎಸ್​ವೈ ಪತ್ರ ಬರೆದಿದ್ದಾರೆ.

boeing
boeing
author img

By

Published : May 8, 2021, 4:34 AM IST

ಬೆಂಗಳೂರು: ಏರೋಸ್ಪೇಸ್ ಸಂಸ್ಥೆ 'ಬೋಯಿಂಗ್' ನಗರದ ಯಲಹಂಕ ಕೆಪಿಸಿಎಲ್​​ನಲ್ಲಿ 200 ಆಕ್ಸಿಜನ್ ಹಾಸಿಗೆಯ ಆಸ್ಪತ್ರೆ ಸ್ಥಾಪಿಸಿದ್ದು, ಕಲಬುರಗಿಯಲ್ಲೂ ಸಿಎಸ್​ಆರ್ ಮೂಲಕ ಇದೇ ರೀತಿ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್​​ಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಮಿತಿಮೀರಿದ ಕೋವಿಡ್​​ನಿಂದ ಆಮ್ಲಜನಕ ಅಭಾವ ಸೃಷ್ಟಿಯಾಗಿದೆ. ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ ಸುತ್ತಮುತ್ತ ಕೊರೊನಾ ಸಂಖ್ಯೆ ಏರಿಕೆ ಆಗುತ್ತಿದೆ. ಈ ಕಾರಣಕ್ಕೆ ಸಿಎಸ್​​ಆರ್ ನಿಧಿ ಮೂಲಕ ಬೋಯಿಂಗ್ ಸಂಸ್ಥೆ ಯಲಹಂಕದಲ್ಲಿ 200 ಬೆಡ್ ಆಸ್ಪತ್ರೆ ನಿರ್ಮಿಸುತ್ತಿರುವಂತೆ ಕಲಬುರಗಿಯಲ್ಲೂ ಸ್ಥಾಪನೆ ಮಾಡುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಅಂದಾಜಿನ ಪ್ರಕಾರ ಮೇ 15ರೊಳಗೆ ರಾಜ್ಯಕ್ಕೆ ಸುಮಾರು 1500 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತದೆ. ಈಗ ಕೇಂದ್ರದಿಂದ 965 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಆಗುತ್ತಿದೆ. ಕೆಪಿಸಿಎಲ್ ಅನಿಲ ಕೇಂದ್ರದಿಂದ ಆಮ್ಲಜನಕ ತಯಾರು ಮಾಡುತ್ತಿರುವುದರಿಂದ ಆಮ್ಲಜನಕ ಹೊರೆ ಕಡಿಮೆಯಾಗಲಿದೆ. ಹಾಗೂ ಕಲಬುರಗಿಯಲ್ಲಿ ವೈದ್ಯಕೀಯ ಸೌಲಭ್ಯ ಕಡಿಮೆ ಇರುವ ಕಾರಣದಿಂದ ಅಲ್ಲಿ ಬೆಡ್ ಸ್ಥಾಪನೆಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.