ಬೆಂಗಳೂರು: ಮೇ 21 ರಂದು ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್ಗೆ ತೆರಳಲು ನಿರ್ಧರಿಸಿದ್ದಾರೆ. ಮೇ 21ಕ್ಕೆ ತೆರಳಿ, ಮೇ 26ರ ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ದಾವೋಸ್ಗೆ ತೆರಳಿ ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಶೃಂಗಕ್ಕೆ ಕರ್ನಾಟಕ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ.
ಈ ಮುಂಚೆ ದಾವೋಸ್ಗೆ ತೆರಳುವ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಗೊಂದಲದಲ್ಲಿ ಇದ್ದರು. ಕಳೆದ ಎರಡು ಮೂರು ದಿನಗಳಿಂದ ದೆಹಲಿಯಿಂದ ಪೊಲಿಟಿಕಲ್ ಕ್ಲಿಯರೆನ್ಸ್ಗಾಗಿ ಸಿಎಂ ಕಾಯುತ್ತಿದ್ದರು. ಇದೀಗ ದಾವೋಸ್ ಪ್ರವಾಸ ಕೈಗೊಳ್ಳಲು ಅವರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ರಾಜಕಾರಣದಲ್ಲಿ ದಿನಗಣನೆ ಮಾಡಲು ಆಗುವುದಿಲ್ಲ: ಸಿಎಂ ಬೊಮ್ಮಾಯಿ