ETV Bharat / city

ನಾಳೆಗೆ ಸಿಎಂ ಬೊಮ್ಮಾಯಿ ಕ್ವಾರಂಟೈನ್ ಅವಧಿ ಮುಕ್ತಾಯ.. - ಸಿಎಂ ಬೊಮ್ಮಾಯಿ ಕೊರೊನಾ ಸುದ್ದಿ

ಸದ್ಯ ವರ್ಕ್ ಫ್ರಂ ಹೋಂ ಮೂಲಕ ಆಡಳಿತ ನಡೆಸುತ್ತಿರುವ ಸಿಎಂ ವರ್ಚುವಲ್ ಮೂಲಕ ಸಭೆಗಳನ್ನು ನಡೆಸಿ, ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು. ಕ್ವಾರಂಟೈನ್ ಅವಧಿ ಮುಗಿಯಲಿದ್ದು, ವರ್ಚುವಲ್ ಬದಲು ಭೌತಿಕವಾಗಿ ಸಭೆ, ಸಮಾರಂಭಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ..

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Jan 16, 2022, 12:13 PM IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ. ಅವರ ಕ್ವಾರಂಟೈನ್ ಅವಧಿ ನಾಳೆಗೆ ಪೂರ್ಣಗೊಳ್ಳಲಿದೆ. ವರ್ಕ್ ಫ್ರಂ ಹೋಂ ಕೂಡ ನಾಳೆಗೆ ಮುಗಿಯಲಿದ್ದು, ಮರಳಿ ಭೌತಿಕ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಜನವರಿ 10ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದಿತ್ತು. ಅಂದಿನಿಂದ ಹೋಮ್ ಐಸೊಲೇಶನ್​​ನಲ್ಲಿದ್ದಾರೆ.

ಸಿಎಂ ಪ್ರೊಟೋಕಾಲ್ ಹಾಗೂ ವೈದ್ಯರ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಟ್ಟು, ಎಲ್ಲ ವರದಿ ನಾರ್ಮಲ್ ಇದ್ದ ಕಾರಣ ಮರಳಿ ನಿವಾಸಕ್ಕೆ ವಾಪಸ್ಸಾಗಿದ್ದರು.

ಸದ್ಯ ಯಾವುದೇ ರೋಗ ಲಕ್ಷಣಗಳು ಇಲ್ಲ. ಹೊಸ ಎಸ್ಒಪಿ ಪ್ರಕಾರ ಒಂದು ವಾರದ ಕ್ವಾರಂಟೈನ್ ಅವಧಿ ನಾಳೆಗೆ ಪೂರ್ಣಗೊಳ್ಳಲಿದೆ. ಸಿಎಂ ನಿವಾಸದಿಂದ ಹೊರ ಬಂದು ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.

ಸದ್ಯ ವರ್ಕ್ ಫ್ರಂ ಹೋಂ ಮೂಲಕ ಆಡಳಿತ ನಡೆಸುತ್ತಿರುವ ಸಿಎಂ ವರ್ಚುವಲ್ ಮೂಲಕ ಸಭೆಗಳನ್ನು ನಡೆಸಿ, ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು. ಕ್ವಾರಂಟೈನ್ ಅವಧಿ ಮುಗಿಯಲಿದ್ದು, ವರ್ಚುವಲ್ ಬದಲು ಭೌತಿಕವಾಗಿ ಸಭೆ, ಸಮಾರಂಭಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Karnataka Covid update : ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಿಗೂ ಆವರಿಸಿದ ಕೋವಿಡ್ ಸೋಂಕು

ಈ ಹಿಂದೆ ಎರಡು ಅಲೆಗಳಲ್ಲಿ ಅಂದು ಮುಖ್ಯಮಂತ್ರಿ ಆಗಿದ್ದ ಬಿ.ಎಸ್​ ಯಡಿಯೂರಪ್ಪ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರ ಚಿಕಿತ್ಸೆ ನಂತರ ಗುಣಮುಖರಾಗಿ ಮನೆಗೆ ಮರಳಿದರೂ ಅಂದು ಇದ್ದ ಎಸ್ಒಪಿ ಪ್ರಕಾರ ಮತ್ತೊಂದು ವಾರ ಹೋಂ ಕ್ವಾರಂಟೈನ್ ಆಗಿದ್ದರು. ಆದರೆ, ಇಂದಿನ ಎಸ್ಒಪಿ ಪ್ರಕಾರ ರೋಗ ಲಕ್ಷಣ ಇಲ್ಲದೇ ಇದ್ದಲ್ಲಿ ಒಂದು ವಾರ ಮಾತ್ರ ಐಸೋಲೇಶನ್​​ ಸಾಕು ಎಂದಾಗಿದೆ. ಅದರಂತೆ ವಾರದಲ್ಲೇ ಸಿಎಂ ಕರ್ತವ್ಯಕ್ಕೆ ಮರಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.