ETV Bharat / city

ರಾಜ್ಯದಲ್ಲಿ ಕೋವಿಡ್​ ನಡುವೆ ಚಿಕೂನ್​ ಗುನ್ಯಾ ಬಾಧೆ.. ಆದರೆ, ಕಳೆದ ಸಾರಿಗಿಂತ ಅಬ್ಬರ ಕಡಿಮೆ - ಚಿಕೂನ್​ ಗುನ್ಯಾ ದಾಳಿ

ಕೋವಿಡ್​ನಿಂದ ಜನ ಹೊರಬಾರದ ಮತ್ತು ಸ್ವಚ್ಛತೆಗೆ ಒತ್ತು ನೀಡಿದ್ದೇ ಇದಕ್ಕೆ ಕಾರಣ. ಜತೆಗೆ ಡೆಂಘೀ, ಕಾಲರಾ, ಶೀತಜ್ವರ, ಟೈಫಾಯ್ಡ್ ಜ್ವರಗಳೂ ಬಾಧಿಸುತ್ತಿವೆ. ಈ ಮಹಾಮಾರಿಗಳಿಂದ ತಪ್ಪಿಸಿಕೊಂಡು ಹೇಗಪ್ಪಾ ಬದುಕುವುದು ಎಂಬ ಚಿಂತೆಯ ಜೊತೆಗೆ ಜನ ಆತಂಕಕ್ಕೊಳಗಾಗಿದ್ದಾರೆ..

Chikun gunya attack between covid
ಚಿಕೂನ್​ ಗುನ್ಯಾ ದಾಳಿ
author img

By

Published : Sep 5, 2020, 8:19 PM IST

ಬೆಂಗಳೂರು : ಕೊರೊನಾ ವೈರಸ್​​ಗೆ ಇಡೀ ವಿಶ್ವವೇ ನಡುಗಿದೆ. ಇದರ ನಡುವೆ ಚಿಕೂನ್ ಗುನ್ಯಾ ಕೂಡ ತನ್ನ ಪ್ರತಾಪ ತೋರುತ್ತಿರೋದು ಆರೋಗ್ಯ ಇಲಾಖೆ ತಲೆಬಿಸಿಗೆ ಕಾರಣವಾಗಿದೆ.

ಆಲ್ಫಾ ವೈರಸ್ ಜಾತಿಯ ಒಂದು ಕೀಟದ ಮೂಲಕ ಮತ್ತು ಈಡೀಸ್​ ಸೊಳ್ಳೆಯಿಂದ ಹರಡುವ ಕಾಯಿಲೆ ಇದಾಗಿದ್ದು, ಕೋವಿಡ್ ನಡುವೆಯೂ ರಾಜ್ಯದಲ್ಲಿ ಜನವರಿಯಿಂದ ಸೆಪ್ಟೆಂಬರ್ 2ರವರೆಗೆ ಬೆಂಗಳೂರಲ್ಲಿ 100 ಜನರಲ್ಲಿ ಈ ರೋಗ ಕಾಣಿಸಿದೆ. 2010 ರಿಂದ 2016ರವರೆಗೆ ದೇಶದಲ್ಲಿ ಚಿಕೂನ್ ಗುನ್ಯಾ ವ್ಯಾಪಕವಾಗಿ ಹರಡಿತ್ತು. ಅದಾದ ಬಳಿಕ ನಿಯಂತ್ರಣಕ್ಕೆ ಬಂದಿತ್ತಾದರೂ ಈಗ ಮತ್ತೆ ಸದ್ದು ಮಾಡುತ್ತಿದೆ.

2018ರಲ್ಲಿ 99, 2019ರಲ್ಲಿ 210 ಇದ್ದ ಪ್ರಕರಣ ರಾಜಧಾನಿಯಲ್ಲಿ ಈ ಬಾರಿ 100 ಜನರನ್ನು ಹಾಸಿಗೆ ಹಿಡಿಸಿದೆ. ಮೈಸೂರಿನಲ್ಲಿ 13, ಚಿತ್ರದುರ್ಗದಲ್ಲಿ 57 ಮತ್ತು ಚಾಮರಾಜನಗರದಲ್ಲಿ 9 ಚಿಕೂನ್​ ಗುನ್ಯಾ ಪ್ರಕರಣ ಕಾಣಿಸಿವೆ. ಕಳೆದ ವರ್ಷ ರಾಜ್ಯದಲ್ಲಿ 2915 ಪ್ರಕರಣ ದಾಖಲಾಗಿದ್ದವು. ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ ಬೆಂಗಳೂರು, ಮೈಸೂರು, ಚಿತ್ರದುರ್ಗ ಹಾಗೂ ಚಾಮರಾಜನಗರ ಸೇರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಚಿಕೂನ್​ ಗುನ್ಯಾ ಪ್ರಕರಣ ಕಡಿಮೆ.

ಕೋವಿಡ್​ನಿಂದ ಜನ ಹೊರಬಾರದ ಮತ್ತು ಸ್ವಚ್ಛತೆಗೆ ಒತ್ತು ನೀಡಿದ್ದೇ ಇದಕ್ಕೆ ಕಾರಣ. ಜತೆಗೆ ಡೆಂಘೀ, ಕಾಲರಾ, ಶೀತಜ್ವರ, ಟೈಫಾಯ್ಡ್ ಜ್ವರಗಳೂ ಬಾಧಿಸುತ್ತಿವೆ. ಈ ಮಹಾಮಾರಿಗಳಿಂದ ತಪ್ಪಿಸಿಕೊಂಡು ಹೇಗಪ್ಪಾ ಬದುಕುವುದು ಎಂಬ ಚಿಂತೆಯ ಜೊತೆಗೆ ಜನ ಆತಂಕಕ್ಕೊಳಗಾಗಿದ್ದಾರೆ.

ಚಿಕೂನ್​ ಗುನ್ಯಾ ದಾಳಿ

ಚಿಕೂನ್​​ ಗುನ್ಯಾ, ಡೆಂಘೀ ಜ್ವರಕ್ಕೆ ಹೋಲುವ ಲಕ್ಷಣ ಹೊಂದಿದ್ದು, ಎರಡರಿಂದ ಐದು ದಿನಗಳವರೆಗೆ ಮಾತ್ರ ಇರಲಿದೆ. ತೀವ್ರ ಜ್ವರದಿಂದ ಆರಂಭವಾಗಿ ತರುವಾಯ ಕೆಮ್ಮು, ನೆಗಡಿ, ಕೈ-ಕಾಲುಗಳ ಕೀಲುಗಳನ್ನು ಬಾಧಿಸುತ್ತದೆ. ಈ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯವಹಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇತ್ತ ಆರೋಗ್ಯ ಇಲಾಖೆಯು ನಗರ, ಪಟ್ಟಣ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.

ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು. ಅದೇ ರೀತಿ ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಹೀಗೆ ಮಾಡಿದರೆ ರೋಗ ನಿರ್ಮೂಲನೆಯಾಗುತ್ತದೆ. ಮನೆಗಳ ಪಕ್ಕದ ಚರಂಡಿಗಳ ಸ್ವಚ್ಛತೆಗೆ ಮುಖ್ಯ. ಯಾಕಂದ್ರೆ, ಇವುಗಳಿಂದಲೇ ಸೊಳ್ಳೆಗಳು ಉತ್ಪತ್ತಿಯಾಗುವ ಕಾರಣ, ಸ್ವಚ್ಛತೆ ಮಾಡಲೇಬೇಕು. ಸ್ವಲ್ಪ ಯಾಮಾರಿದ್ರೂ ಅಪಾಯ ತಪ್ಪಿದ್ದಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.