ಬೆಂಗಳೂರು: ಬಿಬಿಎಂಪಿಯ ಹೊಸ ಆಡಳಿತ ಆರಂಭವಾಗಿ ಮೂರು ತಿಂಗಳಾದ್ರೂ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು, ಜನರ ಕಷ್ಟ ಕೇಳಬೇಕಾದ ಮೇಯರ್, ಪಾಲಿಕೆಯತ್ತ ಮುಖ ಮಾಡಿ ಅದೆಷ್ಟು ದಿನಗಳೇ ಕಳೆದಿದೆ ಎನ್ನಲಾಗಿದೆ. ಪ್ರತಿ ನಿತ್ಯ ಬಡವರು, ರೋಗಿಗಳು, ಜನಸಾಮಾನ್ಯರು ಬಂದು ಮೇಯರ್ ಸಿಗದ ಕಾರಣ ಹಿಡಿ ಶಾಪ ಹಾಕಿಕೊಂಡು ಹೋಗ್ತಿದ್ದಾರೆ.
ಮೇಯರ್ ಗೌತಮ್ ಕುಮಾರ್ ಜನರ ಸಮಸ್ಯೆ ಆಲಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನಲಾಗಿದೆ. ಈ ವರೆಗೆ ಉಪಚುನಾವಣೆ ನೆಪ ಹೇಳುತ್ತಿದ್ದ ಮೇಯರ್, ಇದೀಗ ಕುಟುಂಬದ ಪೂಜೆ ಹಿನ್ನೆಲೆಯಲ್ಲಿ ಬರಲಾಗುತ್ತಿಲ್ಲ, ನಾಳೆ ಮೇಯರ್ ಬರಲಿದ್ದಾರೆ. ಇನ್ನು ಮುಂದೆ ಜನರಿಗೆ ಮೂರು ಗಂಟೆಗಳ ಕಾಲ ಸಿಗಲಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹೇಳುತ್ತಿದ್ದಾರೆ.