ETV Bharat / city

ಯುಪಿ ಸಿಎಂ ಯೋಗಿ ಹಲವು ಹೆಸರುಗಳನ್ನ ಬದಲಾಯಿಸಿ ರಾಮರಾಜ್ಯ ಮಾಡಿದ್ದಾರೆ.. ಋಷಿಕುಮಾರ ಸ್ವಾಮೀಜಿ - ಕಾಳಿ ಮಠದ ಋಷಿಕುಮಾರ ಸ್ವಾಮೀಜಿ

ಋಷಿಕುಮಾರ ಸ್ವಾಮೀಜಿ ವಿಡಿಯೋ ಬಿಡುಗಡೆ ಮಾಡಿ ಬ್ರಿಟಿಷರ ಮತ್ತು ಮುಸ್ಲಿಂ ಹೆಸರುಗಳನ್ನು ಬದಲಾಯಿಸಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ..

rishikumar swamiji
ಕಾಳಿ ಮಠದ ಋಷಿಕುಮಾರ ಸ್ವಾಮೀಜಿ
author img

By

Published : Apr 12, 2022, 5:54 PM IST

Updated : Apr 12, 2022, 6:22 PM IST

ಬೆಂಗಳೂರು : ರಾಜಧಾನಿಯ ರಸ್ತೆಗಳು ಮತ್ತು ಬಡಾವಣೆಗಳಿಗೆ ಇಟ್ಟಿರುವ ಬ್ರಿಟಿಷರ ಹಾಗೂ ಮುಸ್ಲಿಂರ ಹೆಸರುಗಳನ್ನು ಬದಲಾವಣೆ ಮಾಡಬೇಕು. ಗೌರಿಪಾಳ್ಯವನ್ನು ಗೋರಿಪಾಳ್ಯ ಎಂದು ಬದಲಾವಣೆ ಮಾಡಲಾಗಿದೆ. ಯೇಸು ನಗರ, ಇಸ್ಲಾಂ ನಗರ ಎಂದು ಹಲವು ಬಡಾವಣೆಗಳಿಗೆ ಹೆಸರಿಡಲಾಗಿದೆ. ನಮ್ಮ ದೇಶದ ಸನಾತನಧರ್ಮದ ಹೆಸರುಗಳನ್ನು ಇಡಬೇಕು ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.

ಮಂಗಳವಾರ ಋಷಿಕುಮಾರ ಸ್ವಾಮೀಜಿ ಈ ಕುರಿತು ವಿಡಿಯೋ ಬಿಡುಗಡೆ ಮಾಡಿ ಬ್ರಿಟಿಷರ ಮತ್ತು ಮುಸ್ಲಿಂ ಹೆಸರುಗಳನ್ನು ಬದಲಾಯಿಸಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ.

ನಗರದ ರಸ್ತೆಗಳಿಗೆ ಬಡಾವಣೆಗಳಿಗೆ ಇಟ್ಟಿರುವ ಬ್ರಿಟಿಷ್, ಮುಸ್ಲಿಂ ಹೆಸರುಗಳನ್ನು ಬದಲಾಯಿಸುವಂತೆ ಋಷಿಕುಮಾರ ಸ್ವಾಮೀಜಿ ಆಗ್ರಹಿಸಿರುವುದು..

ಉತ್ತರಪ್ರದೇಶ ರಾಮರಾಜ್ಯವಾಗಿ ಪರಿವರ್ತನೆ : ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಹಲವು ಹೆಸರುಗಳನ್ನು ಬದಲಾಯಿಸಿದ್ದಾರೆ. ಯುಪಿಯನ್ನು ರಾಮರಾಜ್ಯವಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೀರೆಯುಟ್ಟು ಯುವಕನ ಅನುಮಾನಾಸ್ಪದ ಓಡಾಟ; ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಥಳಿತ

Last Updated : Apr 12, 2022, 6:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.