ETV Bharat / city

ಜೆಡಿಎಸ್, ಕಾಂಗ್ರೆಸ್ ವಾಕೌಟ್: ಚಾಣಕ್ಯ ವಿವಿ ಬಿಲ್ ಪರಿಷತ್​​​ನಲ್ಲೂ ಪಾಸ್ - ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ ಪ

ಇರುವ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಶಕ್ತಿಶಾಲಿ ಮಾಡುವ ಬದಲು, ಖಾಸಗಿ ವಿಶ್ವವಿದ್ಯಾಲಯಕ್ಕೆ ಅವಕಾಶ ನೀಡುವುದು ಎಷ್ಟು ಸರಿ ಎಂದು ಎಸ್​.ಆರ್​. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

chanakya-university-passed-in-council
ಜೆಡಿಎಸ್, ಕಾಂಗ್ರೆಸ್ ವಾಕೌಟ್: ಚಾಣಕ್ಯ ವಿವಿ ಬಿಲ್ ಪರಿಷತ್​​​ನಲ್ಲೂ ಪಾಸ್
author img

By

Published : Sep 23, 2021, 2:09 AM IST

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯದ ಬಿಲ್ ಮಂಗಳವಾರವಷ್ಟೇ ವಿಧಾನಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರ ಪಡೆದಿದ್ದು, ಈಗ ವಿಧಾನಪರಿಷತ್​ನಲ್ಲೂ ಕೂಡಾ ಅಂಗೀಕಾರಗೊಂಡಿದೆ.

ಮೊದಲಿಗೆ ಶಾಸಕಾಂಗ ಸಭೆಗೆ ತೆರಳಿದ ಜೆಡಿಎಸ್ ಸದಸ್ಯರು ತಾವು ಚಾಣಕ್ಯ ವಿಶ್ವವಿದ್ಯಾಲಯ ಬಿಲ್ ಧಿಕ್ಕರಿಸಿ ಸದನದಿಂದ ಹೊರ ನಡೆಯುತ್ತಿದ್ದೇವೆ ಎಂದು ಹೇಳಿದರು. ವಿಧಾನ ಪರಿಷತ್ ನಲ್ಲಿ ಸುದೀರ್ಘ ಕಾಲಾವಧಿ ಗದ್ದಲದ ನಡುವೆ ಚರ್ಚೆ ಆರಂಭವಾಗಿತು.

ಜೆಡಿಎಸ್ ಪಕ್ಷದ ಪರವಾಗಿ ಭೋಜೇಗೌಡ, ಶ್ರೀಕಂಠೇಗೌಡ ಮಾತನಾಡಿದರು. ಭೋಜೇಗೌಡ ಬೆಂಬಲ ವ್ಯಕ್ತಪಡಿಸಿದರೆ, ಶ್ರೀಕಂಠೇಗೌಡ ವಿರೋಧಿಸಿದರು. ಅಂತಿಮವಾಗಿ ಈ ಬಿಲ್ ತರುವುದು, ಬಿಡುವುದು ನಿಮಗೆ ಬಿಟ್ಟದ್ದು ಎಂದರು. ಇದಾಗುತ್ತಿದ್ದಂತೆ ಜೆಡಿಎಸ್ ಸದಸ್ಯರೆಲ್ಲಾ ಹೊರನಡೆದರು. ತೆರಳುವ ಸಂದರ್ಭ ಜೆಡಿಎಸ್ ಸದಸ್ಯ ರಮೇಶ್ ಗೌಡ, ಬಿಲ್​ ಅನ್ನು ಖಂಡಿಸಿ ನಾವು ವಾಕೌಟ್ ಮಾಡುತ್ತೇವೆ ಎಂದರು.

ಇದಾದ ಬಳಿಕ ಬಿಜೆಪಿ ಸದಸ್ಯ ಎಸ್.ವಿ. ಸಂಕನೂರು ಹಾಗೂ ನಂತರ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿದರು. ಆದರೆ ಬಿಜೆಪಿ ಸದಸ್ಯರು ವಿಷಯ ಬಿಟ್ಟು ಬೇರೆ ವಿಚಾರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಅಶೋಕ್ ಮಾತನಾಡಿ, ರಮೇಶ್ ಅವರು ಪದೇ ಪದೆ ಭೂಮಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಅವರಿಗೆ ನಾನು ಕೇಳುತ್ತೇನೆ, ಸಿದ್ದರಾಮಯ್ಯ ಸರ್ಕಾರದಲ್ಲಿ ನಾಗರಬಾವಿಯ ಬಳಿ ಎಕರೆಗೆ 50 ಕೋಟಿ ರೂ. ಬೆಲೆ ಇದೆ. ಆಸ್ಪತ್ರೆಗೆ 50 ಎಕರೆ ಭೂಮಿ‌ನೀಡಿದ್ದೀರಿ. ಅದು ಜನರ ಹಣದ ವ್ಯಯವಲ್ಲವೋ? ಆಗ ಹೇಗೆ ನೀಡಿದ್ದೀರಿ ಎಂಬ ವಿವರ ಕೊಡಿ ಎಂದರು.

ಮಧ್ಯ ಸಭಾಪತಿಗಳು, ಪ್ರತಿಪಕ್ಷ ನಾಯಕರನ್ನು ಮಾತಿಗೆ ಆಹ್ವಾನಿಸಿದರು. ಮಾತಿಗೆ ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತಡೆದರು. ಕೆಲವರು ವಾಕೌಟ್ ಮಾಡೋಣ ಅಂದರೆ ಮತ್ತೆ ಕೆಲವರು ಪ್ರತಿಪಕ್ಷ ನಾಯಕರು ಮಾತನಾಡಲಿ ಎಂದರು.

ಎಸ್.ಆರ್. ಪಾಟೀಲ್ ಮಾತು ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಹೊರನಡೆಯಲು ಮುಂದಾದರು. ನಾರಾಯಣಸ್ವಾಮಿ ಎಲ್ಲರನ್ನೂ ಸ್ಥಾನದಲ್ಲಿ ಕೂರುವಂತೆ ಸಲಹೆ ನೀಡಿದರು. ಪಾಟೀಲ್ ಮಾತು ಮುಂದುವರಿಸಿ, ಇರುವ ವಿಶ್ವವಿದ್ಯಾಲಯಗಳನ್ನು ಶಕ್ತಿಶಾಲಿ ಮಾಡುವ ಬದಲು, ಅದಕ್ಕೆ ಮೂಲ ಸೌಕರ್ಯ ಕಲ್ಪಿಸುವ ಬದಲು, ಖಾಸಗಿ ವಿಶ್ವವಿದ್ಯಾಲಯಕ್ಕೆ ಅವಕಾಶ ನೀಡುವುದು ಎಷ್ಟು ಸರಿ. ಕೈಗಾರಿಕೆಗೆ ಭೂಮಿ ಪಡೆದು, ಖಾಸಗಿ ವಿವಿಗೆ ನೀಡಿದರೆ ಅದು ಸರಿಯಲ್ಲ. ಸುಪ್ರೀಂ ಕೋರ್ಟ್ ತೀರ್ಪು ಸಹ ನೀಡಬಾರದು ಎಂದು ಹೇಳಿದೆ ಎಂದರು

ಜೊತೆಗೆ ರೈತರಿಂದ ಏರೋಸ್ಪೇಸ್ ಅಭಿವೃದ್ಧಿಗೆ ಭೂಮಿ ಖರೀದಿಸಿ, ಇದನ್ನು ಖಾಸಗಿ ವಿವಿಗೆ ನೀಡುವುದು ಎಷ್ಟು ಸರಿ? ಸರ್ಕಾರಿ ವಿವಿಗಳು ದುಸ್ಥಿತಿಯಲ್ಲಿವೆ. ಇಂತ ಸಂದರ್ಭ ಸರ್ಕಾರ ಕೈಗೊಂಡ ನಿರ್ಧಾರ ಜನವಿರೋಧಿಯಾಗಿದೆ. ಅವಸರ ಬೇಡ, ಇಂದೇ ಚರ್ಚೆ ಮಾಡಿಸುತ್ತಿದ್ದೀರಿ. ಸರ್ಕಾರಿ ವಿವಿ ಬೆಳಸದೇ ಖಾಸಗಿ ವಿವಿಗೆ ಅವಕಾಶ ನೀಡಿ ಜಾಗ ಸಹ ನೀಡುತ್ತಿರುವುದನ್ನು ವಿರೋಧಿಸುತ್ತೇವೆ. ಇದು ಸರ್ಕಾರಕ್ಕೆ ಕಪ್ಪುಚುಕ್ಕೆ. ಇದನ್ನು ಖಂಡಿಸುತ್ತೇವೆ. ಇದು ನಿಮಗೆ ಒಳ್ಳೆಯದಲ್ಲ. ಬಿಲ್ ವಿರೋಧಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಹೊರನಡೆದರು.

ಇನ್ನೊಂದೆಡೆ ಸಭಾಪತಿಗಳು ವಿಧೇಯಕವನ್ನು ಅನುಮೋದನೆಗೆ ಆಹ್ವಾನಿಸಿದರು. ಪ್ರಸ್ತಾವವು ಬಿಜೆಪಿ ಸದಸ್ಯರ ಧ್ವನಿಮತದ ಮೂಲಕ ಅಂಗೀಕಾರವಾಯಿತು. ಸಭಾಪತಿ ಪೀಠದಲ್ಲಿದ್ದ ಪ್ರಾಣೇಶ್ ಅವರು ಕಲಾಪವನ್ನು ಗುರುವಾರ ಬೆಳಗ್ಗೆ10.30ಕ್ಕೆ ಮುಂದೂಡಿದರು.

ಇದನ್ನೂ ಓದಿ: ಸಿಎಜಿ ಅನುಪಾಲನಾ ವರದಿ ಮಂಡನೆ; ಹಲವು ನ್ಯೂನತೆಯಿಂದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.