ETV Bharat / city

ರೈತರೊಂದಿಗೆ ಸರ್ಕಾರ ಕಪಟ ಸಂಧಾನಕ್ಕೆ ಪ್ರಯತ್ನಿಸುತ್ತಿದೆ: ಕೇಂದ್ರದ ವಿರುದ್ಧ ದಿನೇಶ್, ಎಸ್​​ಆರ್​ಪಿ ತೀವ್ರ ವಾಗ್ದಾಳಿ

author img

By

Published : Jan 5, 2021, 7:01 PM IST

Updated : Jan 5, 2021, 9:30 PM IST

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಬೆಲೆ ಕೊಡುತ್ತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

centeral-government-is-trying-to-cheat-famers-by-meeting
ದಿನೇಶ್ ಎಸ್​​ಆರ್​ಪಿ

ಬೆಂಗಳೂರು: ರೈತರ ಪ್ರತಿಭಟನೆಗೆ ಬೆಲೆ ಕೊಡದೇ ಮೂರು ರೈತ ವಿರೋಧಿ ಕಾನೂನು ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪರಿಷತ್​ನ ಪ್ರತಿಪಕ್ಷದ ನಾಯಕ ಎಸ್.ಆರ್​​.ಪಾಟೀಲ್ ತಮ್ಮ ಟ್ವೀಟ್​ನಲ್ಲಿ, ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿ 39 ದಿನಗಳು ಕಳೆದಿವೆ. ಇಂದು ಅನ್ನದಾತರು-ಕೇಂದ್ರ ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ ನಡೆಯಲಿದೆ. ಭಾರಿ ಚಳಿಯಿಂದಾಗಿ ತೊಂದರೆಗೆ ಒಳಗಾಗಿದ್ದ ರೈತರ ಸ್ಥಿತಿಯನ್ನು ಮಳೆಯು ಇನ್ನಷ್ಟು ಹೈರಾಣಾಗಿಸಿದೆ ಎಂದಿದ್ದಾರೆ.

  • ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿ 39 ದಿನಗಳು ಕಳೆದಿವೆ. ಇಂದು ಅನ್ನದಾತರು-ಕೇಂದ್ರ ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ ನಡೆಯಲಿದೆ. ಭಾರಿ ಚಳಿಯಿಂದಾಗಿ ತೊಂದರೆಗೆ ಒಳಗಾಗಿದ್ದ ರೈತರ ಸ್ಥಿತಿಯನ್ನು ಮಳೆಯು ಇನ್ನಷ್ಟು ಹೈರಾಣಾಗಿಸಿದೆ. ರೈತರ ನೋವು ಮತ್ತು ಹೋರಾಟಕ್ಕೆ ಕೇಂದ್ರ ಸರ್ಕಾರ ಕುರುಡಾಗಿದೆ.1/2#farmersrprotest

    — S R Patil (@srpatilbagalkot) January 4, 2021 " class="align-text-top noRightClick twitterSection" data=" ">

ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿ 39 ದಿನಗಳು ಕಳೆದಿವೆ. ಇಂದು ಅನ್ನದಾತರು-ಕೇಂದ್ರ ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ ನಡೆಯಲಿದೆ. ಭಾರಿ ಚಳಿಯಿಂದಾಗಿ ತೊಂದರೆಗೆ ಒಳಗಾಗಿದ್ದ ರೈತರ ಸ್ಥಿತಿಯನ್ನು ಮಳೆಯು ಇನ್ನಷ್ಟು ಹೈರಾಣಾಗಿಸಿದೆ. ರೈತರ ನೋವು ಮತ್ತು ಹೋರಾಟಕ್ಕೆ ಕೇಂದ್ರ ಸರ್ಕಾರ ಕುರುಡಾಗಿದೆ.1/2#farmersrprotest

— S R Patil (@srpatilbagalkot) January 4, 2021

ಓದಿ- ದೀದಿ ಸರ್ಕಾರಕ್ಕೆ ಶಾಕ್​: ಸಚಿವ ಸ್ಥಾನ ತ್ಯಜಿಸಿದ ಕ್ರೀಡಾ ಮಂತ್ರಿ ಲಕ್ಷ್ಮೀ ರತನ್​ ಶುಕ್ಲಾ

ಇದರ ಜೊತೆಗೆ ರೈತರ ನೋವು ಮತ್ತು ಹೋರಾಟಕ್ಕೆ ಕೇಂದ್ರ ಸರ್ಕಾರ ಕುರುಡಾಗಿದೆ. ಇನ್ನಾದರೂ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಷರತ್ತು ಇಲ್ಲದೆ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕಿದೆ. ಈ ಮೂಲಕ ಚಳಿ, ಮಳೆಯಿಂದ ಸಾಯುತ್ತಿರುವ ಅನ್ನದಾತರು ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡಬೇಕಿದೆ. ಇಲ್ಲಿ ಸರ್ಕಾರದ ಅಧಿಕಾರದ ಸೊಕ್ಕಿಗಿಂತ ಮಣ್ಣಿನ ಮಕ್ಕಳ ಹಿತವೇ ಮುಖ್ಯ ಎಂದಿದ್ದಾರೆ.

centeral-government-is-trying-to-cheat-famers-by-meeting
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್​​​​

ರೈತರನ್ನು ವಂಚಿಸುವ ಯತ್ನ

ದಿನೇಶ್ ಗುಂಡೂರಾವ್ ತಮ್ಮ ಟ್ವೀಟ್​ನಲ್ಲಿ, ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಾತೇ ಇಲ್ಲ ಎಂದಿರುವ ಕೇಂದ್ರ ಸರ್ಕಾರ, ರೈತರ ಪಾಲಿಗೆ ಶಾಪಗ್ರಸ್ತ ಸರ್ಕಾರವಾಗಿದೆ. ಕಾಯ್ದೆ ಹಿಂಪಡೆಯಬೇಕು ಎಂಬುದೇ ರೈತರ ಬೇಡಿಕೆ. ಆದರೆ ಕೇಂದ್ರ ಕಾಯ್ದೆ ರದ್ದು ಮಾಡುವುದಿಲ್ಲ ಎಂದ ಮೇಲೆ ಪದೇ ಪದೇ ರೈತರ ಜೊತೆ ಸಂಧಾನ ಸಭೆ ನಡೆಸೋದ್ಯಾಕೆ? ಕೇಂದ್ರ ಕಪಟ ಸಂಧಾನದ ಮೂಲಕ ರೈತರನ್ನು ವಂಚಿಸುವ ಯತ್ನ ಮಾಡುತ್ತಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ರೈತರ ಪ್ರತಿಭಟನೆಗೆ ಬೆಲೆ ಕೊಡದೇ ಮೂರು ರೈತ ವಿರೋಧಿ ಕಾನೂನು ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪರಿಷತ್​ನ ಪ್ರತಿಪಕ್ಷದ ನಾಯಕ ಎಸ್.ಆರ್​​.ಪಾಟೀಲ್ ತಮ್ಮ ಟ್ವೀಟ್​ನಲ್ಲಿ, ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿ 39 ದಿನಗಳು ಕಳೆದಿವೆ. ಇಂದು ಅನ್ನದಾತರು-ಕೇಂದ್ರ ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ ನಡೆಯಲಿದೆ. ಭಾರಿ ಚಳಿಯಿಂದಾಗಿ ತೊಂದರೆಗೆ ಒಳಗಾಗಿದ್ದ ರೈತರ ಸ್ಥಿತಿಯನ್ನು ಮಳೆಯು ಇನ್ನಷ್ಟು ಹೈರಾಣಾಗಿಸಿದೆ ಎಂದಿದ್ದಾರೆ.

  • ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ಆರಂಭಿಸಿ 39 ದಿನಗಳು ಕಳೆದಿವೆ. ಇಂದು ಅನ್ನದಾತರು-ಕೇಂದ್ರ ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ ನಡೆಯಲಿದೆ. ಭಾರಿ ಚಳಿಯಿಂದಾಗಿ ತೊಂದರೆಗೆ ಒಳಗಾಗಿದ್ದ ರೈತರ ಸ್ಥಿತಿಯನ್ನು ಮಳೆಯು ಇನ್ನಷ್ಟು ಹೈರಾಣಾಗಿಸಿದೆ. ರೈತರ ನೋವು ಮತ್ತು ಹೋರಾಟಕ್ಕೆ ಕೇಂದ್ರ ಸರ್ಕಾರ ಕುರುಡಾಗಿದೆ.1/2#farmersrprotest

    — S R Patil (@srpatilbagalkot) January 4, 2021 " class="align-text-top noRightClick twitterSection" data=" ">

ಓದಿ- ದೀದಿ ಸರ್ಕಾರಕ್ಕೆ ಶಾಕ್​: ಸಚಿವ ಸ್ಥಾನ ತ್ಯಜಿಸಿದ ಕ್ರೀಡಾ ಮಂತ್ರಿ ಲಕ್ಷ್ಮೀ ರತನ್​ ಶುಕ್ಲಾ

ಇದರ ಜೊತೆಗೆ ರೈತರ ನೋವು ಮತ್ತು ಹೋರಾಟಕ್ಕೆ ಕೇಂದ್ರ ಸರ್ಕಾರ ಕುರುಡಾಗಿದೆ. ಇನ್ನಾದರೂ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಷರತ್ತು ಇಲ್ಲದೆ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕಿದೆ. ಈ ಮೂಲಕ ಚಳಿ, ಮಳೆಯಿಂದ ಸಾಯುತ್ತಿರುವ ಅನ್ನದಾತರು ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡಬೇಕಿದೆ. ಇಲ್ಲಿ ಸರ್ಕಾರದ ಅಧಿಕಾರದ ಸೊಕ್ಕಿಗಿಂತ ಮಣ್ಣಿನ ಮಕ್ಕಳ ಹಿತವೇ ಮುಖ್ಯ ಎಂದಿದ್ದಾರೆ.

centeral-government-is-trying-to-cheat-famers-by-meeting
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್​​​​

ರೈತರನ್ನು ವಂಚಿಸುವ ಯತ್ನ

ದಿನೇಶ್ ಗುಂಡೂರಾವ್ ತಮ್ಮ ಟ್ವೀಟ್​ನಲ್ಲಿ, ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮಾತೇ ಇಲ್ಲ ಎಂದಿರುವ ಕೇಂದ್ರ ಸರ್ಕಾರ, ರೈತರ ಪಾಲಿಗೆ ಶಾಪಗ್ರಸ್ತ ಸರ್ಕಾರವಾಗಿದೆ. ಕಾಯ್ದೆ ಹಿಂಪಡೆಯಬೇಕು ಎಂಬುದೇ ರೈತರ ಬೇಡಿಕೆ. ಆದರೆ ಕೇಂದ್ರ ಕಾಯ್ದೆ ರದ್ದು ಮಾಡುವುದಿಲ್ಲ ಎಂದ ಮೇಲೆ ಪದೇ ಪದೇ ರೈತರ ಜೊತೆ ಸಂಧಾನ ಸಭೆ ನಡೆಸೋದ್ಯಾಕೆ? ಕೇಂದ್ರ ಕಪಟ ಸಂಧಾನದ ಮೂಲಕ ರೈತರನ್ನು ವಂಚಿಸುವ ಯತ್ನ ಮಾಡುತ್ತಿದೆಯೆ? ಎಂದು ಪ್ರಶ್ನಿಸಿದ್ದಾರೆ.

Last Updated : Jan 5, 2021, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.