ETV Bharat / city

ಜಯದೇವ ಆಸ್ಪತ್ರೆಯಲ್ಲಿ ನಾಳೆ, ನಾಡಿದ್ದು ಎಲೆಕ್ಟ್ರೋ ಫಿಸಿಯಾಲಜಿ ತಂತ್ರಜ್ಞಾನದ ಹೃದಯ ಶಸ್ತ್ರಚಿಕಿತ್ಸೆ - Cardiac electrophysiology

ಜಯದೇವ ಆಸ್ಪತ್ರೆಯಲ್ಲಿ ಆಗಸ್ಟ್​ 30 ಮತ್ತು 31ರಂದು ಎಲೆಕ್ಟ್ರೋ ಫಿಸಿಯಾಲಜಿ ತಂತ್ರಜ್ಞಾನದ ಮೂಲಕ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದೆ.

cardiac-surgery-electrophysiology-of-heart-new-technology
author img

By

Published : Aug 29, 2019, 7:46 PM IST

ಬೆಂಗಳೂರು: ಹೃದಯ ಸ್ತಂಭನದಿಂದ ಸಾವಿನ ಪ್ರಕರಣಗಳು ಅಧಿಕವಾಗುತ್ತಿವೆ. ಹೀಗಾಗಿ, ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಜಯದೇವ ಆಸ್ಪತ್ರೆಯಲ್ಲಿ ಎಲೆಕ್ಟ್ರೋ ಫಿಸಿಯಾಲಜಿ (ಇಪಿ) ಎಂಬ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಹೃದಯ ಶಸ್ತ್ರಚಿಕಿತ್ಸೆ ಕಾರ್ಯಾಗಾರ ನಡೆಸಲು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಜ್ಜಾಗಿದೆ. ಇಲ್ಲಿ ಹೃದಯ ಸ್ತಂಭನ ಬಾರದಂತೆ ಎಚ್ಚರ ವಹಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲೆಕ್ಟ್ರೋ ಫಿಸಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಂತರ್, 'ಆಗಸ್ಟ್​ 30 ಮತ್ತು 31ರಂದು ಎಲೆಕ್ಟ್ರೋ ಫಿಸಿಯಾಲಜಿ ತಂತ್ರಜ್ಞಾನದ ಮೂಲಕ ಹೃದಯ ಶಸ್ತ್ರಚಿಕಿತ್ಸೆ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಇಪಿ ಲೈವ್ ಕೂಡ ಇರಲಿದೆ. ಅಲ್ಲದೆ, ಈ ಕಾರ್ಯಾಗಾರದಲ್ಲಿ 14 ಪ್ರಕರಣಗಳಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಿ ಚಿತ್ರೀಕರಣ ಮಾಡಿಕೊಂಡಿರುವ ಪ್ರಕರಣಗಳ ಬಗ್ಗೆಯೂ ವಿಮರ್ಶಿಸಲಾಗುವುದು ಎಂದು ಹೇಳಿದರು.

ಎಲೆಕ್ಟ್ರೋ ಫಿಸಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಂತರ್

ಇಲ್ಲಿ 16 ಮಂದಿ ಬಡ ಹೃದ್ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಿದ್ದೇವೆ. ಇದಕ್ಕೆ ಒಂದು ಕೋಟಿ ರೂಪಾಯಿ ವೆಚ್ಚ ಆಗಲಿದೆ. ಆದರೆ, ಇಲ್ಲಿ ಸಂಪೂರ್ಣ ಉಚಿತ. ಲೈವ್ ಸಮಾವೇಶದಲ್ಲಿ ಹೃದಯ ಬಡಿತವನ್ನೇ ಪ್ರಮುಖವಾಗಿ ಕೇಂದ್ರೀಕರಿಸಲಾಗಿದೆ. ಭಾರತದಲ್ಲಿ 1.3 ಕೋಟಿ ಜನರಿಗೆ ಇಂತಹ ಚಿಕಿತ್ಸೆ ಅಗತ್ಯವಾಗಿದೆ. ಶಸ್ತ್ರ ಚಿಕಿತ್ಸೆಯನ್ನು ಜಗತ್ತಿನಾದ್ಯಂತ ಎಲ್ಲಾ ಹೃದ್ರೋಗ ತಜ್ಞರು ನೇರವಾಗಿ ವೀಕ್ಷಿಸಿ ತಮ್ಮ ವಿಚಾರ ವಿನಿಯಮ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರ ನೇತೃತ್ವದಲ್ಲಿ ಭಾರತ, ಅಮೆರಿಕ, ಶ್ರೀಲಂಕಾ ರಾಷ್ಟ್ರಗಳ 8 ತಜ್ಞರುಳ್ಳ ತಂಡ ಈ ಸಂದರ್ಭದಲ್ಲಿ 16 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಹೃದ್ರೋಗ ತಜ್ಞರು, ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ಹೃದಯ ಶಸ್ತ್ರಚಿಕಿತ್ಸೆ ವಿಧಾನ ಮತ್ತು ಸೂಕ್ತ ಮಾರ್ಗದ ಬಗ್ಗೆ ತಿಳಿದುಕೊಳ್ಳಲು ಈ ಸಮಾವೇಶ ಸಹಕಾರಿಯಾಗಲಿದೆ.

Intro:Body:ಬೈಟ್ - ಡಾ. ಜಯಪ್ರಕಾಶ್ ಶೆಂತರ್, ಎಲೆಕ್ಟ್ರೋಫಿಸಿಯಾಲಜಿ ವಿಭಾಗದ ಮುಖ್ಯಸ್ಥರು
ಬೈಟ್ - ಡಾ.ಧನಂಜಯ ಲಕ್ಕಿರೆಡ್ಡಿ, ಹೃದಯ ತಜ್ಞರು

ಆ.30 ಮತ್ತು 31ರಂದು ಎಲೆಕ್ಟ್ರೋಫಿಸಿಯಾಲಜಿ ತಂತ್ರಜ್ಞಾನದ ಮೂಲಕ ಹೃದಯ ಶಸ್ತ್ರ ಚಿಕಿತ್ಸೆಗೆ ಜಯದೇವ ಸಂಸ್ಥೆ ಸಜ್ಜು

ಬೆಂಗಳೂರು: ಹಠಾತ್ ಹೃದಯ ಸ್ತಂಭನದಿಂದ ಸಾವಿನ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿವೆ.
ಹೀಗಾಗಿ, ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಅತ್ಯಂತ ವಿನೂತನ  ಎಲೆಕ್ಟ್ರೋಫಿಸಿಯಾಲಜಿ  ಎಂಬ ಅತ್ಯಾಧುನಿಕ ತಂತ್ರಜ್ಞಾನದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲು ಬೆಂಗಳೂರಿನ ಜಯದೇವ ಹೃದ್ರೋಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಜ್ಜಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲೆಕ್ಟ್ರೋಫಿಸಿಯಾಲಜಿ ವಿಭಾಗದ ಮುಖ್ಯಸ್ಥರು ಮತ್ತು ತಜ್ಞರಾದ ಡಾ. ಜಯಪ್ರಕಾಶ್ ಶೆಂತರ್, ಹೃದಯ ಬಡಿತಕ್ಕೆ ವಿದ್ಯುತ್ ಅಗತ್ಯವಾಗಿದ್ದು, ಇದು ದೇಹದಲ್ಲಿಯೇ ಉತ್ಪತಿಯಾಗುತ್ತದೆ. ಎಲೆಕ್ಟ್ರೋಫಿಸಿಯಾಲಜಿಯಲ್ಲಿ ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಈ ತಂತ್ರಜ್ಞಾನದಲ್ಲಿ ಹೃದಯ ಬಡಿತ ಹೆಚ್ಚಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಎರಡು ದಿನಗಳ ಕಾಲ ನಡೆಯುವ ಈ ಜಾಗತಿಕ ಇಪಿ ಲೈವ್ ಸಮಾವೇಶದಲ್ಲಿ 16 ಮಂದಿ ಬಡ ಹೃದ್ರೋಗಿಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಇಂತಹ ವಿಶೇಷ ಎಲೆಕ್ಟ್ರೋಫಿಸಿಯಾಲಜಿ ತಂತ್ರಜ್ಞಾನದ ಮೂಲಕ 16 ಮಂದಿಗೆ ನಡೆಸುವ ಶಸ್ತ್ರ ಚಿಕಿತ್ಸೆಗೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದನ್ನು ಉಚಿತವಾಗಿ ನಡೆಸುವ ಜತೆಗೆ ಈ ತಂತ್ರಜ್ಞಾನದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುವುದು ಎಂದರು.
ಎರಡು ದಿನಗಳ ಕಾಲ ಜಯದೇವ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಲಿರುವ  ಇಪಿ ಲೈವ್  ಸಮಾವೇಶದಲ್ಲಿ ಹೃದಯ ಬಡಿತವನ್ನೇ ಪ್ರಮುಖವಾಗಿ ಕೇಂದ್ರೀಕರಿಸಲಾಗಿದ್ದು, ಎಲೆಕ್ಟ್ರೋಫಿಸಿಯಾಲಜಿ ವಿಭಾಗದ ತಜ್ಞ ವೈದ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.
ಭಾರತದಲ್ಲಿ ೧.೩ ಕೋಟಿ ಜನರಿಗೆ ಇಂತಹ ಚಿಕಿತ್ಸೆ ಅಗತ್ಯವಾಗಿದ್ದು, ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಎಲೆಕ್ಟ್ರೋಫಿಸಿಯಾಲಜಿ ತಂತ್ರಜ್ಞರು ಇದೀಗ ಪ್ರವರ್ಧಮಾನಕ್ಕೆ ಬರುತ್ತಿದ್ದು, ಈ ಅರೋಗ್ಯ ವಲಯ ಇದೀಗ ಖ್ಯಾತಿ ಪಡೆಯುತ್ತಿದೆ. ಈ ಸಮಾವೇಶದಲ್ಲಿ 16 ಮಂದಿ ಹೃದ್ರೋಗಿಗಳಿಗೆ ನೇರವಾಗಿ ಶಸ್ತ್ರ ಚಿಕಿತ್ಸೆ ನಡೆಸುವ ಜತೆಗೆ 14 ಪ್ರಕರಣಗಳಲ್ಲಿ ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆಸಿ ಚಿತ್ರೀಕರಣ ಮಾಡಿಕೊಂಡಿರುವ ಪ್ರಕರಣಗಳ ಬಗ್ಗೆಯೂ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.
ಆಗಸ್ಟ್ 30 ಮತ್ತು 31 ರಂದು ಎರಡು ದಿನಗಳ ಕಾಲ ಜಯದೇವ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಲಿರುವ ಶಸ್ತ್ರ ಚಿಕಿತ್ಸೆಯನ್ನು ಜಗತ್ತಿನಾದ್ಯಂತ ಎಲ್ಲಾ ಹೃದ್ರೋಗ ತಜ್ಞರು ನೇರವಾಗಿ ವೀಕ್ಷಿಸಿ ತಮ್ಮ ವಿಚಾರ ವಿನಿಯಮ ಮಾಡಿಕೊಳ್ಳಲಿದ್ದಾರೆ.  
ಜಯದೇವ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರ ನೇತೃತ್ವದಲ್ಲಿ ಭಾರತ, ಅಮೆರಿಕ, ಶ್ರೀಲಂಕಾ ರಾಷ್ಟ್ರಗಳ 8 ಮಂದಿ ತಜ್ಞ ವೈದ್ಯರ ತಂಡ ಈ ಸಂದರ್ಭದಲ್ಲಿ 16 ಮಂದಿ ಹೃದಯ ಸಮಸ್ಯೆ ಇರುವ ಬಡವರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ.
ಅತ್ಯಂತ ವಿನೂತನ ಮತ್ತು ವಿಶೇಷ ಸಮಾವೇಶದಲ್ಲಿ ದೇಶ, ವಿದೇಶಗಳ ಖ್ಯಾತ ಹೃದ್ರೋಗ ತಜ್ಞ್ಞರು, ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ಹೃದಯ ಶಸ್ತ್ರ ಚಿಕಿತ್ಸೆಯ ವಿಧಾನ ಮತ್ತು ಸೂಕ್ತ ಮಾರ್ಗದ ಬಗ್ಗೆ ತಿಳಿದುಕೊಳ್ಳಲು ಈ ಸಮಾವೇಶ ಸಹಕಾರಿಯಾಗಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.