ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭಗೊಂಡಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಇಂದು ಮಧ್ಯಾಹ್ನ 12 ಗಂಟೆಗೆ 2021-22ನೇ ಸಾಲಿನ ರಾಜ್ಯ ಮುಂಗಡ ಪತ್ರವನ್ನು ಮಂಡಿಸುವುದಾಗಿ ಟ್ವೀಟ್ ಮಾಡಿದ್ದಾರೆ.
-
#KarnatakaVikasaPatra2021 https://t.co/aQHoJPYBHG
— B.S. Yediyurappa (@BSYBJP) March 7, 2021 " class="align-text-top noRightClick twitterSection" data="
">#KarnatakaVikasaPatra2021 https://t.co/aQHoJPYBHG
— B.S. Yediyurappa (@BSYBJP) March 7, 2021#KarnatakaVikasaPatra2021 https://t.co/aQHoJPYBHG
— B.S. Yediyurappa (@BSYBJP) March 7, 2021
ಈಗಾಗಲೇ ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ಸ್ವಲ್ಪ ಹೆಚ್ಚಾಗಿರಲಿದೆ ಎನ್ನುವ ಸುಳಿವನ್ನು ನೀಡಿರುವ ಸಿಎಂ, ಮಹಿಳಾ ದಿನಾಚರಣೆ ದಿನದಂದು ಮಂಡನೆಯಾಗುತ್ತಿರುವ ಬಜೆಟ್ನಲ್ಲಿ ಮಹಿಳೆಯರಿಗೆ ವಿಶೇಷ ಅಧ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ಇನ್ನುಳಿದಂತೆ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಡಲಿದ್ದಾರೆ. ಕೊರೊನಾ ನಂತರ ಮಂಡನೆಯಾಗುತ್ತಿರುವ ಮೊದಲ ಬಜೆಟ್ನಲ್ಲಿ ಏನೆಲ್ಲಾ ಯೋಜನೆಗಳಿರಲಿದೆ ಎನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.