ETV Bharat / city

ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ - BMTC instructs its employees not to participate in protests

ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಮೇಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎನ್ನಲಾಗ್ತಿದೆ.

ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ
author img

By

Published : Sep 11, 2019, 10:13 AM IST

Updated : Sep 11, 2019, 11:30 AM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನ ಖಂಡಿಸಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಮೇಲಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.

ಬಿಎಂಟಿಸಿಯಲ್ಲಿ 3 ಸಾವಿರಕ್ಕೂ ಹೆಚ್ಚು ಒಕ್ಕಲಿಗ ನೌಕರರಿದ್ದಾರೆ. ಇವರು ಜಾತಿ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ಒಕ್ಕಲಿಗ ನೌಕರರ ಹಾಜರಾತಿ ಹಾಗೂ ಗೈರಿನ ಬಗ್ಗೆ ನಿಗಾ ಇಡುವಂತೆ ಡಿಪೋ ಮ್ಯಾನೇಜರ್ಸ್​ಗೆ ಮೇಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ಒಂದು ವೇಳೆ ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡ‌ ಮಾಹಿತಿ ಸಿಕ್ಕರೆ, ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡರೇ, ಸಾರಿಗೆ ಸಂಚಾರದ ಮೇಲೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ‌ಹೀಗಾಗಿ ಮೇಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ನೋಡಿಕೊಂಡು ಬಸ್​ಗಳನ್ನ ರಸ್ತೆಗಿಳಿಸಿಸುವಂತೆ ಸೂಚನೆ..

ಒಕ್ಕಲಿಗರ ಬೃಹತ್ ಪ್ರತಿಭಟನಾ ಜಾಥ ಹಿನ್ನೆಲೆ, ಬಿಬಿಎಂಟಿಸಿ ಡಿಪೋ ಮ್ಯಾನೇಜರ್ ಗಳಿಗೆ ಕಟ್ಟುನಿಟ್ಟಿನ ನಿರ್ದೇಶಕ ನೀಡಿರುವ ಬಿಎಂಟಿಸಿ ಎಂ‌ ಡಿ ಶಿಖಾ, ಪರಿಸ್ಥಿತಿ ನೋಡಿಕೊಂಡು ಬಸ್​ಗಳನ್ನ ರಸ್ತೆಗಿಳಿಸಿಸುವಂತೆ ಸೂಚಿಸಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬಸ್ ಸಂಚಾರ ಆರಂಭಿಸುತ್ತೇವೆ. ಆದರೆ ಅಹಿತಕರ ಘಟನೆ ನಡೆದರೆ ಕೂಡಲೇ ಬಸ್ ಸಂಚಾರ ಸ್ಥಗಿತಗೊಳಿಸುತ್ತೇವೆ ಎಂದು ಎಂ ಡಿ ಮಾಹಿತಿ ನೀಡಿದ್ದಾರೆ. ‌

Intro:ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ..

ಬೆಂಗಳೂರು: ಡಿ ಕೆ ಶಿವಕುಮಾರ್ ಇಡಿ ಕಸ್ಟಡಿ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಿನ್ನೆಲೆ, ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ ನೀಡಲಾಗಿದೆಯೆಂತೆ.. ಒಂದು ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡ‌ ಮಾಹಿತಿ ಸಿಕ್ಕರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಿದ್ದಾರೆ..‌

ಅಂದಹಾಗೇ ಒಕ್ಕಲಿಗ ಸಮುದಾಯದ ನೌಕರರು
ಬಿಎಂಟಿಸಿಯಲ್ಲೇ 3 ಸಾವಿರಕ್ಕೂ ಹೆಚ್ಚು ಒಕ್ಕಲಿಗ ನೌಕರರಿರುವ ಹಿನ್ನಲೆಯಲ್ಲಿ ಜಾತಿ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ಭಾಗೀ ಸಾಧ್ಯತೆ ಇದೆ.‌ ಒಕ್ಕಲಿಗ ನೌಕರರ ಹಾಜರಾತಿ, ಗೈರಿನ ಬಗ್ಗೆ ನಿಗಾ ಇಡುವಂತೆ ಡಿಪೋ ಮ್ಯಾನೇಜರ್ಸ್ ಗೆ ಸೂಚನೆ ನೀಡಲಾಗಿದೆ..
ಪ್ರತಿಭಟನೆಯಲ್ಲಿ ಪಾಲ್ಗೊಂಡರೇ ಸಾರಿಗೆ ಸಂಚಾರದ ಮೇಲೆ ವ್ಯತ್ಯಯ ಬೀರುವ ಸಾಧ್ಯತೆ ಇದೆ.. ‌ಈ ಹಿನ್ನಲೆಯಲ್ಲಿ ಮೇಲಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ..

KN_BNG_DKS_SHIVAKUMAR_SCRIPT_7201801
Body:..Conclusion:..
Last Updated : Sep 11, 2019, 11:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.