ETV Bharat / city

'ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತ್ತಾಪ ಪಟ್ಟರೆ ತಪ್ಪೇನಿಲ್ಲ' - ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

BJP Tweet against Siddaramaiah
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್
author img

By

Published : Apr 21, 2022, 5:34 PM IST

ಬೆಂಗಳೂರು: ಬೇರೆಯವರ ರಾಜಕೀಯ ನಿರ್ಧಾರದ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಳ್ಳುವುದಕ್ಕಿಂತ ನಿಮ್ಮ ಸ್ವಂತಿಕೆ ಪಣಕ್ಕಿಡಿ. ಬಾದಾಮಿ ಕ್ಷೇತ್ರದಿಂದ ವಲಸೆ ಹೋಗುವುದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡುವಿರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಟ್ವೀಟ್ ಮೂಲಕ ಸವಾಲೆಸೆದಿದೆ.

ಹಿಂದೂ ಧಾರ್ಮಿಕ ಆಚರಣೆಗಳನ್ನು ಮೌಢ್ಯದ ಸಾಲಿಗೆ ಸೇರಿಸಲು ಹೊರಟಿದ್ದ ಸಿದ್ದರಾಮಯ್ಯ ಅವರಿಗೆ ಈಗ ಇದ್ದಕ್ಕಿದ್ದಂತೆ ಆಣೆ ಪ್ರಮಾಣದ ಬಗ್ಗೆ ನಂಬಿಕೆ ಮೂಡಿದ್ದು ಸ್ವಾಗತಾರ್ಹ. ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತ್ತಾಪಪಟ್ಟರೆ ತಪ್ಪೇನಿಲ್ಲ. ಆದರೆ ಆಣೆರಾಮಯ್ಯ ಅವರು ಇದನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಅಪಾಯವಿದೆ ಎಂದು ವ್ಯಂಗ್ಯವಾಡಿದೆ.

  • ಮಾನ್ಯ #ಆಣೆರಾಮಯ್ಯ ಅವರೇ, ಬೇರೆಯವರ ರಾಜಕೀಯ ನಿರ್ಧಾರದ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಳ್ಳುವುದಕ್ಕಿಂತ ನಿಮ್ಮ ಸ್ವಂತಿಕೆ ಪಣಕ್ಕಿಡಿ.

    ಬಾದಾಮಿ ಕ್ಷೇತ್ರದಿಂದ ವಲಸೆ ಹೋಗುವುದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡುವಿರಾ?

    ಅಥವಾ

    ಹಿಂದೂ ದೇವರ ಮೇಲೆ ಅಸಹನೆಯಿದ್ದರೆ ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?

    — BJP Karnataka (@BJP4Karnataka) April 21, 2022 " class="align-text-top noRightClick twitterSection" data=" ">

ಸಿದ್ದರಾಮಯ್ಯ ಅವರು ತಮ್ಮ ಧಾರ್ಮಿಕ ಹಕ್ಕಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನೇ ಬಳಸಿಕೊಳ್ಳುತ್ತಿರುವುದರ ಮರ್ಮವೇನು? ಆಣೆರಾಮಯ್ಯ ಅವರೇ, ಆಣೆ - ಪ್ರಮಾಣದ ಮೂಲಕ ಹಳೆಯ ಗುರುವಿನ ತಲೆಯ ಮೇಲೆ ಕೈಇಡಲು ಹೊರಟಿದ್ದು ಸಮಂಜಸವೇ? ಬೇರೆಯವರ ರಾಜಕೀಯ ನಿರ್ಧಾರದ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಳ್ಳುವುದಕ್ಕಿಂತ ನಿಮ್ಮ ಸ್ವಂತಿಕೆ ಪಣಕ್ಕಿಡಿ. ಬಾದಾಮಿ ಕ್ಷೇತ್ರದಿಂದ ವಲಸೆ ಹೋಗುವುದಿಲ್ಲವೆಂದು ಚಾಮುಂಡೇಶ್ವರಿ ಮೇಲೆ ಆಣೆ ಮಾಡುವಿರಾ? ಅಥವಾ ಹಿಂದೂ ದೇವರ ಮೇಲೆ ಅಸಹನೆಯಿದ್ದರೆ ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ? ಎಂದು ಟೀಕಿಸಿದೆ.

ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಹಾಜರಾತಿ ಆಧರಿಸಿ ವೇತನ ಪಾವತಿ ವ್ಯವಸ್ಥೆ ಜಾರಿ: ಸಚಿವ ಡಾ.ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.