ETV Bharat / city

Bitcoin Scam : ಬೆಂಕಿ ಇಲ್ಲದೇ ಹೊಗೆ ಆಡುತ್ತಾ?.. ಸರ್ಕಾರಕ್ಕೆ ಡಿ ಕೆ ಶಿವಕುಮಾರ್​ ಪ್ರಶ್ನೆ - ಬೆಂಗಳೂರು

ಬಿಟ್ ​ಕಾಯಿನ್​(Bitcoin case)ಅವಶ್ಯಕತೆ ಇಲ್ಲದ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ (CM basavaraj bommai) ಅವರು ಹೇಳಿದ್ದಾರೆ. ಬೆಂಕಿ ಇಲ್ಲದೆಯೇ ಹೊಗೆಯಾಡುತ್ತಾ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​(Kpcc president D.k. Shivakumar)ಪ್ರಶ್ನಿಸಿದ್ದಾರೆ..

dk shivakumar reaction
ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್​ ಪ್ರಶ್ನೆ
author img

By

Published : Nov 12, 2021, 7:47 PM IST

ಬೆಂಗಳೂರು : ಬಿಟ್​ಕಾಯಿನ್​ ವಿಚಾರವಾಗಿ ಸರ್ಕಾರದ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್ ವಾಗ್ದಾಳಿಯನ್ನು ಮುಂದುವರಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, 'ಬಿಟ್​ಕಾಯಿನ್​ ಅವಶ್ಯಕತೆ ಇಲ್ಲದ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಹೇಳಿದ್ದಾರೆ. ಬೆಂಕಿ ಇಲ್ಲದೆಯೇ ಹೊಗೆಯಾಡುತ್ತಾ' ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಬಿಟ್​ ಕಾಯಿನ್​ ವಿಚಾರವಾಗಿ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಚರ್ಚಿಸುತ್ತಾರೆ ಅಂದ್ರೆ ಅವಶ್ಯಕತೆ ಇಲ್ಲದ ವಿಚಾರವೇ?. ಈ ಬಗ್ಗೆ ರಾಜ್ಯದ ಜನತೆಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಬಿಟ್​ ಕಾಯಿನ್​ ಹಗರಣದಲ್ಲಿ ಕಾಂಗ್ರೆಸ್​ನವರು ಇದ್ದಾರೆ ಎಂಬ ಗೃಹ ಸಚಿವ ಆರೋಪಕ್ಕೆ ಪ್ರತಿಕ್ರಿಯಿಸಿ, ಹಗರಣದಲ್ಲಿ ನಮ್ಮವರೂ ಇದ್ದರೆ ಅವರ ಹೆಸರು ಬಹಿರಂಗಪಡಿಸಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅದು ಬಿಜೆಪಿಯವರೇ ಆಗಿರಲಿ, ಕಾಂಗ್ರೆಸ್​ನವರೇ ಆಗಿರಲಿ ಎಂದರು.

ಹಗರಣದಲ್ಲಿ ಭಾಗಿಯಾದವರ ಬಗ್ಗೆ ನಾವೂ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಬಿಟ್​ ಕಾಯಿನ್​ ಯಾರ ಬಳಿ ಇದೆ. ಯಾವಾಗ ಪಂಚನಾಮೆ ಮಾಡಿದ್ರು ಎಂಬುದನ್ನು ಸರ್ಕಾರ ಜನರಿಗ ಸಂಪೂರ್ಣ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.