ETV Bharat / city

ಪಾರ್ಕಿಂಗ್ ಸ್ಥಳಗಳಲ್ಲಿ ಬೈಕ್ ಕಳ್ಳತನ : ಇಬ್ಬರು ಆರೋಪಿಗಳ ಬಂಧನ - ಪಾರ್ಕಿಂಗ್ ಸ್ಥಳಗಳಲ್ಲಿ ಬೈಕ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಸಂಪಿಗೆಹಳ್ಳಿ ಠಾಣೆಯಲ್ಲಿ ಹಳೆಯ ಮೂರು ಪ್ರಕರಣಗಳಲ್ಲದೆ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಮಾರತಹಳ್ಳಿ ಹಾಗೂ ಶೇಷಾದ್ರಿಪುರದ ಠಾಣೆಗಳಲ್ಲೂ ಇವರ ಮೇಲೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ..

bike theft two arrested in Bangalore
ಇಬ್ಬರು ಬೈಕ್​ ಕಳ್ಳರ ಬಂಧನ
author img

By

Published : Mar 21, 2022, 5:37 PM IST

ಬೆಂಗಳೂರು : ಮನೆಗಳ ಮುಂದೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿ 2.37 ಲಕ್ಷ ರೂ. ಮೌಲ್ಯದ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಗರ ನಿವಾಸಿ ಶೇಖ್ ಮುದಾಸೀರ್ ಅಹಮದ್ (33) ಮತ್ತು ಶಿವಾಜಿನಗರದ ಸೈಯದ್ ನಾಜೀಮ್ (25) ಬಂಧಿತರು.

ಫೆಬ್ರವರಿ 28ರಂದು ರಾತ್ರಿ ಅಗ್ರಹಾರ ಬಡಾವಣೆಯ ಮನೆಯೊಂದರ ಮುಂಭಾಗದಲ್ಲಿ ನಿಲ್ಲಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಪಲ್ಸರ್ ಮತ್ತು ಒಂದು ಯಮಹಾ ಆರ್‌.ಎಕ್ಸ್ ಬೈಕ್ ವಶಪಡಿಸಿಕೊಂಡಿದ್ದಾರೆ. ಸಂಪಿಗೆಹಳ್ಳಿ ಠಾಣೆಯಲ್ಲಿ ಹಳೆಯ ಮೂರು ಪ್ರಕರಣಗಳಲ್ಲದೆ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಮಾರತಹಳ್ಳಿ ಹಾಗೂ ಶೇಷಾದ್ರಿಪುರದ ಠಾಣೆಗಳಲ್ಲೂ ಇವರ ಮೇಲೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಉಡುಪಿಯ ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಮೂವರು ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.