ETV Bharat / city

ಹಾಡಹಗಲೇ ಬೈಕ್ ಕದ್ದು ಪರಾರಿ: ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

ಕಳ್ಳತನದ ವಿಡಿಯೋ ಲಭ್ಯವಾಗಿದ್ದು, ಅಮಾಯಕನ ರೀತಿ ಬೈಕ್​​ ಇರುವ ಸ್ಥಳದಲ್ಲಿ ನಿಂತು ಅರ್ಧ ಗಂಟೆ ಹೊಂಚು ಹಾಕಿದ ಖದೀಮ ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಬೈಕ್​ ಕದ್ದು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ.

bike-theft-in-day-time-at-nelamangala
ನೆಲಮಂಗಲ ಬೈಕ್​ ಕಳ್ಳತನ
author img

By

Published : Jun 17, 2021, 7:15 PM IST

ನೆಲಮಂಗಲ: ಕಳ್ಳನೋರ್ವ ಕಾಂಪ್ಲೆಕ್ಸ್​​​ ಮುಂದೆ ನಿಲ್ಲಿಸಿದ್ದ ಬೈಕ್​ನ್ನು ಕ್ಷಣಾರ್ಧದಲ್ಲಿಯೇ ಕದ್ದು ಪರಾರಿಯಾಗಿರುವ ಘಟನೆ ದಾಬಸ್​​ ಪೇಟೆಯಲ್ಲಿ ನಡೆದಿದ್ದು, ಕಳ್ಳನ ಕೈಚಳದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡು ದಿನಗಳ ಹಿಂದೆ ವೀರಸಾಗರದ ರಾಜಣ್ಣ ಎಂಬುವರಿಗೆ ಸೇರಿದ ಬೈಕ್ ಕಳ್ಳತನವಾಗಿತ್ತು. ಕೆಲಸಕ್ಕೆ ಹೋಗಿ ಸಂಜೆ ಬರುವ ವೇಳೆಗೆ ಬೈಕ್​ ನಾಪತ್ತೆಯಾಗಿತ್ತು. ಸದ್ಯ ಕಳ್ಳತನದ ವಿಡಿಯೋ ಲಭ್ಯವಾಗಿದ್ದು,

ಹಾಡಹಗಲೇ ಬೈಕ್ ಕದ್ದು ಖದೀಮ ಪರಾರಿ

ಅಮಾಯಕನ ರೀತಿ ಬೈಕ್​​ ಇರುವ ಸ್ಥಳದಲ್ಲಿ ನಿಂತು ಅರ್ಧ ಗಂಟೆ ಹೊಂಚು ಹಾಕಿದ ಖದೀಮ ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಬೈಕ್​ ಕದ್ದು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಆದರೆ ಪ್ರಕರಣಗಳು ದಾಖಲಾಗುವುದು ಕೆಲವು ಮಾತ್ರ. ಸದಾ ಪೊಲೀಸ್​ ಇರುವ ಉದ್ದಾನೇಶ್ವರ ವೃತ್ತದಲ್ಲಿ 2 ದಿನದ ಹಿಂದೆ ಪೊಲೀಸರನ್ನು ಯಾಮಾರಿಸಿ ಕಳ್ಳ ಕೈಚಳಕ ತೋರಿದ್ದ ಘಟನೆಯೂ ನಡೆದಿತ್ತು.

ಪಟ್ಟಣದ ಎಲ್ಲಾ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಗ್ರಾಮ ಪಂಚಾಯ್ತಿಗೆ ಸ್ಥಳೀಯರು ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದೇವೆ. ಆದರೂ ಸಹ ಸಂಬಂಧಪಟ್ಟವರು ಮೌನವಾಗಿದ್ದಾರೆ. ಕಳ್ಳತನ ಪ್ರಕರಣವನ್ನು ಪೊಲೀಸರು ಇನ್ನು ದಾಖಲು ಮಾಡಿಲ್ಲ. ಆದಷ್ಟು ಬೇಗ ಕಳ್ಳರನ್ನು ಹಿಡಿದು ಸಾರ್ವಜನಿಕರ ಆತಂಕ ದೂರ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.