ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಶುರುವಾಗಿದ್ದು, ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ನ್ನು ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗಿರುವ ಘಟನೆ ಆಗ್ನೇಯ ವಿಭಾಗದ ಕೋರಮಂಗಲ ಬಳಿ ನಡೆದಿದೆ.
ನವೀನ್ ಎಂಬುವವರು ಮನೆಯ ಮುಂದೆ ಬೈಕ್ ನಿಲ್ಲಿಸಿದ್ದರು. ರಾತ್ರಿ ವೇಳೆ ಬಂದ ಕಳ್ಳ ಯಾರಿಗೂ ಗೊತ್ತಾಗದ ಹಾಗೆ ಬೈಕ್ ಲಾಕ್ ಮುರಿದು ಕದ್ದು ಪರಾರಿಯಾಗಿದ್ದಾನೆ.
ಇನ್ನು ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಗ್ನೇಯ ವಿಭಾಗದ ಪೊಲೀಸರು ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.