ETV Bharat / city

ಸಂಡೇ ಕರ್ಫ್ಯೂ: ಸಾರ್ವಜನಿಕ ಸಾರಿಗೆ ಜೊತೆ ಶ್ರಮಿಕ್ ರೈಲು ಸಂಚಾರ ಸ್ಥಗಿತ

author img

By

Published : May 24, 2020, 10:28 AM IST

ಇಂದು ಸಂಪೂರ್ಣ ಲಾಕ್​ಡೌನ್ ಆದೇಶ ಜಾರಿ ಮಾಡಿದ ಹಿನ್ನೆಲೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ನಮ್ಮ ಮೆಟ್ರೋ ಸೇರಿದಂತೆ ಆಟೋಗಳು, ಓಲಾ-ಉಬಾರ್ ಕಾರ್​ಗಳ ಸೇವೆಗಳು ಬಂದ್​ ಆಗಿದ್ದು, ಅಗತ್ಯ ಸೇವೆಗಳಿಗಿರುವ 500 ಬಿಎಂಟಿಸಿ ಬಸ್​ಗಳ ಸಂಚಾರ ಮಾತ್ರ ಎಂದಿನಂತೆ ಇದೆ.

Benglure Sunday Curfew
500 ಬಿಎಂಟಿಸಿ ಬಸ್​ಗಳ ಸಂಚಾರಕ್ಕೆ ಮಾತ್ರ ಅವಕಾಶ

ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾನುವಾರ ಒಂದು ದಿನ ಸಂಪೂರ್ಣ ಲಾಕ್​ಡೌನ್ ಆದೇಶ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇಂದು ನಗರದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಸ್ಥಗಿತಗೊಂಡಿದೆ.

ಬಿಎಂಟಿಸಿ, ಕೆಎಸ್​ಆರ್​ಟಿಸಿ, ನಮ್ಮ ಮೆಟ್ರೋ ಸೇರಿದಂತೆ ಆಟೋಗಳು, ಓಲಾ-ಉಬಾರ್ ಕಾರ್​ಗಳ ಸೇವೆ ಇಂದು ಸಿಗುವುದಿಲ್ಲ. ಆದರೆ ಅಗತ್ಯ ಸೇವೆಗಳಿಗಿರುವ 500 ಬಿಎಂಟಿಸಿ ಬಸ್​ಗಳ ಸಂಚಾರ ಎಂದಿನಂತೆ ಇರಲಿದೆ.

ಇನ್ನು ನಿತ್ಯ ವಲಸಿಗರಿಗಾಗಿ ಇರುತ್ತಿದ್ದ ಶ್ರಮಿಕ್ ರೈಲಿನ ಸಂಚಾರ ಕೂಡ ಬಂದ್​ ಮಾಡಲಾಗಿದೆ. ಮೊನ್ನೆಯಷ್ಟೇ ಅಂತರ ಜಿಲ್ಲೆಗಳ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ‌ಇಂದು ಕರ್ಫ್ಯೂ ಜಾರಿಯಾದ ಹಿನ್ನೆಲೆ ರೈಲು ಸಂಚಾರ ಇರುವುದಿಲ್ಲ, ‌ಆದರೆ ದೆಹಲಿಯಿಂದ ಬೆಂಗಳೂರಿಗೆ ರೈಲು ಬಂದಿದ್ದು ಅಲ್ಲಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಬೆಂಗಳೂರು- ಬೆಳಗಾವಿ ರೈಲು ಸಂಚಾರ ಆರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.