ETV Bharat / city

ಪ್ರಿಯಕರನಿಗಾಗಿ ಮನೆಯಲ್ಲಿದ್ದ 1 ಕೆಜಿ ಚಿನ್ನ ಕದ್ದ ಯುವತಿ: ಮಗಳ ಕೃತ್ಯ ಬಯಲಿಗೆಳೆದ ತಾಯಿ

author img

By

Published : May 17, 2022, 10:18 AM IST

Updated : May 17, 2022, 1:22 PM IST

ಪ್ರಿಯಕರನಿಗಾಗಿ ತಾಯಿಯ 1 ಕೆಜಿ ಚಿನ್ನಾಭರಣ ಕದ್ದ ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನಕ್ಕೆ ಕುಮ್ಮಕ್ಕು ನೀಡಿದ ಪ್ರಿಯಕರ ಕೂಡ ಜೈಲು ಸೇರಿದ್ದಾನೆ.

ಯಕರನಿಗಾಗಿ ಮನೆಯಲ್ಲಿದ್ದ 1 ಕೆಜಿ ಚಿನ್ನ ಕದ್ದ ಯುವತಿ

ಬೆಂಗಳೂರು: ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ ಯುವತಿ ಹಾಗೂ ಆಕೆಯ‌ ಪ್ರಿಯತಮನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ‌. ಜಕ್ಕೂರು ಲೇಔಟ್ ನಿವಾಸಿ ರತ್ನಮ್ಮ ಎಂಬುವವರು ಮಗಳ ವಿರುದ್ಧ ನೀಡಿದ ದೂರಿನ ಮೇರೆಗೆ ದೀಪ್ತಿ ಹಾಗೂ ಮದನ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜಕ್ಕೂರು ಲೇಔಟ್​ನಲ್ಲಿ ರತ್ನಮ್ಮ ಹಾಗೂ ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ‌ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ದೀಪ್ತಿಗೆ ಡಿವೋರ್ಸ್ ಆಗಿತ್ತು.‌ ಈ ನಡುವೆ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡೈವಿಂಗ್ ಸ್ಕೂಲ್​​ಗೆ ಸೇರಿಕೊಂಡಿದ್ದಳು.‌ ಇಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ. ಮದನ್​​ಗೆ ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ದೀಪ್ತಿ ಪ್ರೀತಿಗೆ ಸೈ ಅಂದಿದ್ದ. ಮದನ್ ಪ್ರೀತಿಗೆ ಶರಣಾಗಿದ್ದ ದೀಪ್ತಿ, ಪ್ರಿಯಕರನ ಅಣತಿಯಂತೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಾಳೆ. ಹಂತ-ಹಂತವಾಗಿ ಸುಮಾರು ಒಂದು ಕೆ.ಜಿ.ಚಿನ್ನ ಕಳ್ಳತನ ಮಾಡಿ ಕೊಟ್ಟಿದ್ದಾಳೆ. ತಾಯಿಗೆ ಅನುಮಾನ ಬಾರದಿರಲು ಕದ್ದ ಜಾಗದಲ್ಲಿ ನಕಲಿ ಚಿನ್ನಾಭರಣ ಇಟ್ಟಿದ್ದಾಳೆ.‌

ಕೆಲ ದಿನಗಳ ಹಿಂದೆ ಮದುವೆ ಸಲುವಾಗಿ ಒಡವೆ ಧರಿಸಿಕೊಳ್ಳಲು ಬೀರುವಿನಲ್ಲಿ ನೋಡಿದಾಗ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾಳೆ.‌‌ ಇದರಿಂದ ಅನುಮಾನಗೊಂಡು ಆಗಾಗ ಮನೆಗೆ ಬರುತ್ತಿದ್ದ ಮದನ್‌ ಹಾಗೂ ಮಗಳ ವಿರುದ್ಧ ತಾಯಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಚಿನ್ನಾಭರಣ ಕದ್ದಿರುವುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್​ನಲ್ಲಿ ಅಡಮಾನ ಇಟ್ಟಿದ್ದು, ಅದರಿಂದ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ

Last Updated : May 17, 2022, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.