ETV Bharat / city

ದೇಶದ ಹಲವೆಡೆ ಪ್ರತಿಭಟನೆ: ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮಗುರುಗಳೊಂದಿಗೆ ಪೊಲೀಸರ ಸಭೆ

author img

By

Published : Jun 12, 2022, 8:01 AM IST

ಮುಸ್ಲಿಂ ಮುಖಂಡರುಗಳ ಜೊತೆಗೆ ಸಭೆ ನಡೆಸಿ ಪ್ರತಿಭಟನೆ ಮಾಡದಂತೆ ಸೂಚಿಸಿದ್ದೇವೆ. ಅವರು ಕೂಡ ಪ್ರತಿಭಟನೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.

Bengaluru
ಧರ್ಮ ಗುರುಗಳ ಜತೆ ಸಭೆ

ಬೆಂಗಳೂರು: ಪ್ರವಾದಿ ಮಹಮ್ಮದ್​ ಕುರಿತ ವಿವಾದಿತ ಹೇಳಿಕೆ ಖಂಡಿಸಿ ದೇಶದ ಹಲವೆಡೆಗಳಲ್ಲಿ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿವೆ. ಈ ಬೆನ್ನಲ್ಲೇ ನಗರದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದ್ದು, ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.

ನಗರದ ಎಲ್ಲ ವಿಭಾಗಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಗಸ್ತು ತಿರುಗುತ್ತಿದ್ದು, ಸೂಕ್ಷ್ಮ ಪ್ರದೇಶ, ಮಸೀದಿಗಳ ಬಳಿ ಹೆಚ್ಚು ನಿಗಾ ವಹಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ 16ಕ್ಕೂ ಅಧಿಕ ಮುಸ್ಲಿಂ ಧರ್ಮ ಗುರುಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು.

ಕೆಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡಾ ಮಸೀದಿ ಮುಖ್ಯಸ್ಥರನ್ನು ಕರೆದು ಶನಿವಾರ ಸಭೆ ನಡೆಸಲಾಯಿತು. ಸಭೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಸಾರ್ವಜನಿಕರಿಗೆ ತೊಂದರೆ ಕೊಡದಂತೆ ತಮ್ಮ ಸಮುದಾಯದ ಜನರಿಗೆ ತಿಳಿಸುವಂತೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರವಾದಿ ಕುರಿತು ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸರ ಸಭೆ

ಸರ್ಕಾರಕ್ಕೆ ಮನವಿ: ದೇಶದ ವಿವಿಧ ಭಾಗಗಳಲ್ಲಿ ಗಲಾಟೆಗಳು ಆಗುತ್ತಿವೆ. ಹೀಗಾಗಿ ಮುಖ್ಯಮಂತ್ರಿಗಳು, ಗೃಹಸಚಿವರು ಸೂಚನೆ ನೀಡಿದ್ದರು. ಮುಸ್ಲಿಂ ಮುಖಂಡರುಗಳೊಂದಿಗೆ ಸಭೆ ನಡೆಸಿ ಪ್ರತಿಭಟನೆ ಮಾಡದಂತೆ ಸೂಚಿಸಿದ್ದೇವೆ. ಅವರು ಕೂಡ ಪ್ರತಿಭಟನೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸದ್ಯಕ್ಕೆ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರ‍್ಯಾಲಿ ಮಾಡುವುದಿಲ್ಲ: ಸಭೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಧರ್ಮಗುರು ಮುಲಾನಾ ಮಕ್ಸೂದ್ ಇಮ್ರಾನ್, ನೂಪುರ್ ಶರ್ಮಾ ಹೇಳಿಕೆಯಿಂದ ನಮಗೆಲ್ಲ ನೋವಾಗಿದೆ. ಸಿಖ್, ಕ್ರಿಶ್ಚಿಯನ್ ಮುಖಂಡರು ಮತ್ತು ನಾವು ಸಭೆಯಲ್ಲಿ ಭಾಗವಹಿಸಿದ್ದೆವು. ನಾವು ಒಟ್ಟಿಗೆ ಬಂದು ಮನವಿ ಮಾಡಿದ್ದೇವೆ. ನಾವು ಬೆಂಗಳೂರು ಮತ್ತು ರಾಜ್ಯದಲ್ಲಿ ಯಾವುದೇ ರ‍್ಯಾಲಿ ಮಾಡುವುದಿಲ್ಲ. ನಮ್ಮ ನೋವಿನ ಬಗ್ಗೆ ಕಮಿಷನರ್‌ಗೆ ತಿಳಿಸಿದ್ದೇವೆ. ಯಾವ ಧರ್ಮದಲ್ಲಿ ಯಾರು ಮುಖ್ಯ ಅವರ ಮೇಲೆ ಟೀಕೆ, ಟಿಪ್ಪಣಿ ಮಾಡಬಾರದು ಎಂದು ಹೇಳಿದ್ದೇವೆ. ನಮ್ಮ ಮುಸಲ್ಮಾನ ಮೌಲ್ವಿಗಳ ಆಗ್ರಹ ಒಂದೇ. ವಿವಾದಾತ್ಮಕ ಹೇಳಿಕೆ ನೀಡಿದವರ ವಿರುದ್ದ ಕ್ರಮವಾಗಬೇಕು. ನಾವು ಕಾನೂನಿನ ಪ್ರಕಾರ ಹೋರಾಟ ಮಾಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.